Thief Case ಮಲಗಿದ್ದ ವೃದ್ಧೆಯ ಕಿವಿಯ ಆಭರಣ ಕಳವು
Team Udayavani, Jul 8, 2024, 11:08 PM IST
ವಿಟ್ಲ: ಮನೆಯಲ್ಲಿ ಮಲಗಿದ್ದ ವೃದ್ಧೆಯೊಬ್ಬರ ಬಾಯಿಯನ್ನು ಮುಚ್ಚಿ ಕಿವಿಯ ಚಿನ್ನಾಭರಣವನ್ನು ಕಿತ್ತು ಪರಾರಿಯಾದ ಘಟನೆ ವಿಟ್ಲಪಟ್ನೂರು ಗ್ರಾಮದಲ್ಲಿ ನಡೆದಿದೆ. ಪಳ್ಳಿಗದ್ದೆ ನಿವಾಸಿ ಬಿ.ಎಂ. ಇಬ್ರಾಹಿಂ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ರವಿವಾರ ರಾತ್ರಿ ಇಬ್ರಾಹಿಂ ಅವರ ಸಹೋದರನ ಮನೆಯ ಹಿಂಬಾಗಿಲ ಕಿಟಕಿಯ ಸರಳನ್ನು ಯಾವುದೋ ಸಾಧನ ಬಳಸಿ ಮುರಿದ ಕಳ್ಳರು ಅನಂತರ ಅದೇ ಕಿಟಕಿಯ ಮೂಲಕ ಯಾವುದೋ ಸಾಧನದಿಂದ ಮನೆಯ ಹಿಂಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದ್ದರು.
ಬಳಿಕ ಕೋಣೆಯಲ್ಲಿ ಮಲಗಿದ್ದ ತಾಯಿ ಐಸಮ್ಮ ಅವರ ಕಿವಿಯಲ್ಲಿದ್ದ ಅಂದಾಜು 8 ಗ್ರಾಂ ತೂಕದ 48 ಸಾವಿರ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳರು ಬಲಾತ್ಕಾರದಿಂದ ಚಿನ್ನವನ್ನು ಕಿತ್ತಿರುವ ಕಾರಣ ವೃದ್ಧೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬೆಳಗಾದ ಮೇಲಷ್ಟೇ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.