Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

ಯುಟ್ಯೂಬ್‌ನಲ್ಲಿದೆ ಸಮಾಜಸೇವೆಯ ಹಲವು ವೀಡಿಯೋ

Team Udayavani, Apr 23, 2024, 6:45 AM IST

13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!

ಕೋಟ: ಕೇರಳದಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪದ ಮೇಲೆ ಬಿಹಾರ ಮೂಲದ ಮಹಮ್ಮದ್‌ ಇರ್ಫಾನ್‌ನನ್ನು ಬ್ರಹ್ಮಾವರ ತಾಲೂಕು ಕೋಟ ಮೂರ್ಕೈಯಲ್ಲಿ ಶ‌ನಿವಾರ ರಾತ್ರಿ ಕೋಟ ಪೊಲೀಸರು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದರು.

ಇದೀಗ ಈತನ ವಿರುದ್ಧ 13 ರಾಜ್ಯಗಳಲ್ಲಿ ಹಲವಾರು ಕಳ್ಳತನ ಆರೋಪಗಳಿವೆ ಎನ್ನುವುದರ ಜತೆಗೆ ಹಲವಾರು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ.

ಈತ ಈಗಾಗಲೇ ಹಲವು ಬಾರಿ ಪೊಲೀಸರ ಅತಿಥಿಯಾಗಿದ್ದ. ಸಿನೆಮಾ ನಟರು, ರಾಜಕಾರಣಿಗಳು, ಗುತ್ತಿಗೆದಾರರ ಸೇರಿದಂತೆ ಅತ್ಯಂತ ಶ್ರೀಮಂತರ ಮನೆಗಳನ್ನೇ ಹೊಂಚುಹಾಕಿ ಕಳ್ಳತನ ಮಾಡುತ್ತಿದ್ದ, ಒಮ್ಮೆ ಕಣ್ಣಿಟ್ಟರೆ ಎಷ್ಟೇ ದಿನವಾದರು ಕಾದು ತನ್ನ ಕೈಚಳಕ ತೋರುತ್ತಿದ್ದ, ಹೆಚ್ಚಿನ ಬಾರಿ ಓರ್ವನೇ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಾಗೂ ಪ್ರತಿ ಬಾರಿಯೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನೇ ಲಪಟಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಕುತೂಹಲಕಾರಿ ಹಿನ್ನೆಲೆ
ಈತನ ಹಿನ್ನೆಲೆ ಅತ್ಯಂತ ಕೌತುಕವಾಗಿದೆ. ತನ್ನ 22ನೇ ವಯಸ್ಸಿನಲ್ಲೇ ಕಳ್ಳತನ ಆರಂಭಿಸಿದ ಈತ ಪ್ರಥಮವಾಗಿ ತನ್ನ ತಂಗಿಯ ಮದುವೆಯ ಖರ್ಚಿಗೆಂದು ಕಳ್ಳತನ ಮಾಡಿದ್ದನಂತೆ. ಅನಂತರ ಪ್ರತೀ ಬಾರಿ ಲಪಟಾಯಿಸಿದ ಹಣದಲ್ಲಿ ತನಗೆ ಸ್ವಲ್ಪವನ್ನೇ ಇರಿಸಿಕೊಂಡು ಹೆಚ್ಚಿನ ಮೊತ್ತವನ್ನು ಊರಿನವರ ಮದುವೆ, ಆರೋಗ್ಯದ ಸಮಸ್ಯೆ ಮತ್ತು ರಸ್ತೆ ಮುಂತಾದ ಊರಿನ ಅಭಿವೃದ್ಧಿಗೆ ಹಂಚುತ್ತಿದ್ದನಂತೆ. ಹೀಗಾಗಿ ಊರಿನವರು ಈತನನ್ನು ಖ್ಯಾತ ಸಮಾಜ ಸೇವಕ ರೋಬಿನ್‌ಹುಡ್‌ ಹೆಸರಲ್ಲಿ ಗುರುತಿಸುತ್ತಿದ್ದರಂತೆ.

ಊರಿನವರಿಗೆ ಈತನ ಮೇಲೆ ಸಾಕಷ್ಟು ಪ್ರೀತಿ ಇರುವುದರಿಂದ ಈತನ ಪತ್ನಿ ಜಿ.ಪಂ. ಸದಸ್ಯೆಯಾಗಿ ಕೂಡ ಆಯ್ಕೆಯಾಗಿದ್ದಳು ಹಾಗೂ ಈತ ಎಷ್ಟೇ ಬಾರಿ ಪೊಲೀಸರ ಅತಿಥಿಯಾದರು ಊರಿನವರೇ ಮುಂದೆ ನಿಂತು ಜೈಲ್‌ನಿಂದ ಹೊರತರುತ್ತಿದ್ದರು ಎನ್ನುವುದು ಕುತೂಹಲದ ವಿಷಯವಾಗಿದೆ. ಕರ್ನಾಟಕ, ಕೇರಳ, ಗೋವಾ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳೇ ಈತನ ಗುರಿ ಆಗಿದ್ದವು. ಯಾಕೆಂದರೆ ಇಲ್ಲಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಬಳಸುತ್ತಾರೆ ಎಂದಿದ್ದಾನೆ.

ಪೊಲೀಸರೇ ಶಾಕ್‌ !
ಪೊಲೀಸರು ಈತನ ವಿಚಾರಣೆ ಗಿಳಿದಾಗ ನನ್ನ ಬಗ್ಗೆ ಮಾಹಿತಿ ಬೇಕಾದರೆ ಯೂಟ್ಯೂಬ್‌ನಲ್ಲಿ ಮಹಮ್ಮದ್‌ ಇರ್ಫಾನ್‌ರೋಬಿನ್‌ಹುಡ್‌ ಎಂದು ಸರ್ಚ್‌ ಮಾಡಿ ಎಂದಿದ್ದನಂತೆ. ಯೂಟ್ಯೂಬ್‌ನಲ್ಲಿ ಸರ್ಚ್‌ ಮಾಡಿದಾಗ ಈತನ ಬಗ್ಗೆ ಇರುವ ಹತ್ತಾರು ವೀಡಿಯೋಗಳಿದ್ದು ಅದರಲ್ಲಿ ಕಳ್ಳತನ ಹಾಗೂ ಕೋಟ್ಯಂತರ ರೂ. ಮೊತ್ತವನ್ನು ಜನರಿಗೆ ಹಂಚುವ ಕುರಿತು ವಿಚಾರಗಳಿವೆ. ಅವೆಲ್ಲವನ್ನು ನೋಡಿದ ಪೊಲೀಸರಿಗೆ ಆಶ್ಚರ್ಯವಾಗಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.