“ಕೈಗಾರಿಕಾ ಕಾಂಪ್ಲೆಕ್ಸ್‌’ನಿರ್ಮಾಣಕ್ಕೆ ಚಿಂತನೆ

ಸ್ಥಳಾವಕಾಶದ ಕೊರತೆ ನೀಗಲು ಸಹಕಾರಿ

Team Udayavani, Jun 20, 2020, 5:56 AM IST

“ಕೈಗಾರಿಕಾ ಕಾಂಪ್ಲೆಕ್ಸ್‌’ನಿರ್ಮಾಣಕ್ಕೆ ಚಿಂತನೆ

ವಿಶೇಷ ವರದಿ-ಮಹಾನಗರ: ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಹಲವು ಮಂದಿ ಆಸಕ್ತರಾಗಿದ್ದರೂ ಅವರು ಎದುರಿಸುತ್ತಿರುವ ಸ್ಥಳಾವಕಾಶದ ಕೊರತೆಯನ್ನು ನೀಗಿಸುವುದಕ್ಕಾಗಿ ಮಂಗಳೂರಿನ ಬೈಕಂಪಾಡಿಯಲ್ಲಿ ಬೃಹತ್‌ ಕೈಗಾರಿಕಾ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಕೈಗಾರಿಕೋದ್ಯಮಿಗಳು ನಿರ್ಧರಿಸಿದ್ದಾರೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಪ್ರಸ್ತುತ ಹೊಸ ಕೈಗಾರಿಕೆ ನಿರ್ಮಾಣಕ್ಕೆ ಸ್ಥಳಾವಕಾಶವಿಲ್ಲವಾದ್ದರಿಂದ ಈ ನಿರ್ಣ ಯಕ್ಕೆ ಬರಲಾಗಿದೆ. ಯಾವೆಲ್ಲ ಕೈಗಾ ರಿಕೆಗಳು ನಿರ್ಮಾಣವಾಗಲಿವೆ ಹಾಗೂ ಅವುಗಳ ಆವಶ್ಯಕತೆಯೇನು ಎಂಬ ವಿಚಾರದಲ್ಲಿ “ಡಿಮಾಂಡ್‌ ಸಮೀಕ್ಷೆ’ ಸದ್ಯ ನಡೆಯುತ್ತಿದೆ.

ಸಮೀಕ್ಷೆಯ ವರದಿಯ ಆಧಾರದಲ್ಲಿ ಕೈಗಾರಿಕಾ ಕಾಂಪ್ಲೆಕ್ಸ್‌ನ ನಿರ್ಮಾಣಕ್ಕೆ ಸೂಕ್ತ ರೂಪರೇಖೆ ಸಿದ್ಧಪಡಿಸಲಾಗುತ್ತದೆ. ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಬರುವ ನಿರೀಕ್ಷೆಯಿದೆ.

ಬೈಕಂಪಾಡಿಯಲ್ಲಿ ಕೆಎಸ್‌ಎಸ್‌ಐಡಿಸಿಯ ಒಂದು ಎಕರೆ ಜಾಗವಿದ್ದು, ಅಲ್ಲಿ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಯೋಜಿಸ ಲಾಗಿದೆ. ಮುಂಬಯಿಯಲ್ಲಿ ರಹೇಜಾ ಸಮೂಹದವರು ನಿರ್ಮಿಸಿರುವ ಮಾದರಿ ಯಲ್ಲಿ ಈ ಕಾಂಪ್ಲೆಕ್ಸ್‌ ಇರಲಿದೆ.

ಕೈಗಾರಿಕಾ ಕಾಂಪ್ಲೆಕ್ಸ್‌ ಉದ್ದೇಶ
ಬೈಕಂಪಾಡಿಯಲ್ಲಿ ಹೊಸ ಕೈಗಾರಿಕೆಗೆ ಸೂಕ್ತ ಭೂಮಿಯಿಲ್ಲ. ಜತೆಗೆ ಆ ಕೈಗಾರಿಕೆಯವರಲ್ಲಿ ಬೇಕಾದಷ್ಟು ಅನು ದಾನವೂ ಇರುವುದಿಲ್ಲ. ಹೀಗಾಗಿ ಕಾಂಪ್ಲೆಕ್ಸ್‌ ಮಾದರಿಯ ಕಟ್ಟಡದಲ್ಲಿ ಸಣ್ಣ ಕೈಗಾರಿಕೆಗಳ ರಚನೆಗೆ ನಿರ್ಧರಿಸುವುದೇ ಈ ಯೋಜನೆ. ಕೈಗಾರಿಕೆಗಳನ್ನು ಒಂದೇ ಕಟ್ಟಡದೊಳಗೆ ತರುವುದು ಮುಖ್ಯ ಉದ್ದೇಶ. ಉದ್ಯಮಿಗಳಿಗೆ, ನವೋದ್ಯಮಿಗಳಿಗೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನೂ ಒದಗಿಸುವ ಮೂಲಕ ಜಾಗ, ಸಂಪನ್ಮೂಲ, ಶಕ್ತಿ ಎಲ್ಲವನ್ನೂ ಉಳಿಸುವುದು ಯೋಜನೆ.

ಕಾಂಪ್ಲೆಕ್ಸ್‌ನಲ್ಲಿ ಏನಿರಲಿದೆ?
ಉದ್ದೇಶಿತ ಬಹುಮಹಡಿ ಸಂಕೀರ್ಣದಲ್ಲಿ ಮೈನ್‌ ಬ್ಲಾಕ್‌ ಹಾಗೂ ಸರ್ವೀಸ್‌ ಬ್ಲಾಕ್‌ ಇರುತ್ತದೆ. ಮೈನ್‌ ಬ್ಲಾಕ್‌ನಲ್ಲಿ ವಿವಿಧ ಕೈಗಾರಿಕಾ ಘಟಕಗಳು, ಕಾಮನ್‌ ರಿಸೆಪ್ಷನ್‌, ಸಮಾಲೋಚನ ಕೊಠಡಿ, ಪ್ರಿಂಟಿಂಗ್‌, ಸ್ಟಾಫ್‌ ರೆಸ್ಟ್‌ ರೂಂ, ಸರ್ವರ್‌ ರೂಂ, ಡಿಜಿ ಪವರ್‌ ಸಪ್ಲೈ, ಅಗ್ನಿಶಾಮಕ ಟವರ್‌, ಅಲಾರ್ಮ್ ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆ ಇರಲಿದೆ. ಸರ್ವೀಸ್‌ ಬ್ಲಾಕ್‌ನಲ್ಲಿ ಕಂಟ್ರೋಲ್‌ ಪ್ಯಾನೆಲ್‌, ಕಂಪ್ರಸರ್‌, ಸಬ್‌ಸ್ಟೇಶನ್‌ ಯಾರ್ಡ್‌, ಡಿಜಿ ಯಾರ್ಡ್‌, ಟ್ರಕ್‌ ಬೇ, ಭೂಗತ ನೀರು ಸಂಗ್ರಹಾಗಾರ, ಟ್ರೀಟೆ¾ಂಟ್‌ ಪ್ಲಾಂಟ್‌, ಸೋಲಾರ್‌ ಪವರ್‌ ಜನರೇಶನ್‌ ಘಟಕಗಳು ಇರುತ್ತವೆ. ಘಟಕಗಳಿಗೆ ಪ್ರತ್ಯೇಕವಾಗಿ ವರ್ಟಿಕಲ್‌ ಕಾರ್‌ ಪಾರ್ಕಿಂಗ್‌ ಯಾಂತ್ರೀಕೃತ ಮಾದರಿಯಲ್ಲಿ ನಿರ್ಮಿಸಿ ಜಾಗ ಉಳಿಸಲು ಉದ್ದೇಶಿಸಲಾಗಿದೆ.

ಯಾವೆಲ್ಲ ಕೈಗಾರಿಕೆ?
ಆಗ್ರೋ ಆಧಾರಿತ ಮತ್ತು ಸಂಸ್ಕರಿತ ಆಹಾರ, ಗಾರ್ಮೆಂಟ್ಸ್‌ ಮತ್ತು ಟೆಕ್ಸ್‌ ಟೈಲ್‌, ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌ ಪ್ಯಾನೆಲ್ಸ್‌, ಮೋಟರ್ಸ್‌, ಟೂಲ್ಸ್‌ ಮತ್ತು ಡೈ, ಅಲ್ಯುಮಿನಿಯಂ ಫ್ಯಾಬ್ರಿಕೇಶನ್‌, ರಬ್ಬರ್‌ ಪ್ರಾಡಕ್ಟ್$ÕÕ, ಪೇಪರ್‌ ಪ್ರಾಡಕ್ಟ್$Õ ಮತ್ತು ಟಿಶ್ಯೂ ಇತ್ಯಾದಿ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಶೀಘ್ರ ಕಾರ್ಯ ರೂಪಕ್ಕೆ
ಬೈಕಂಪಾಡಿಯಲ್ಲಿ ಬೃಹತ್‌ ಕೈಗಾರಿಕಾ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಮೂಲಕ ಕೈಗಾರಿಕೆಗಳಿಗೆ ಹೊಸ ಪರಿಕಲ್ಪನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಸದ್ಯ ಬೇಡಿಕೆಯ ಸಮೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಅಜಿತ್‌ ಕಾಮತ್‌,
ಅಧ್ಯಕ್ಷರು, ಕೆನರಾ ಸಣ್ಣ ಕೈಗಾರಿಕಾ ಸಂಘ

ಟಾಪ್ ನ್ಯೂಸ್

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ

Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ

Mangaluru: ಪಿಲಿಕುಳ ಕಂಬಳ; ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

Mangaluru: ಪಿಲಿಕುಳ ಕಂಬಳ; ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.