ತಮಿಳುನಾಡಿಗೂ”ನಮ್ಮ ಮೆಟ್ರೋ’ ವಿಸ್ತರಿಸಲು ಚಿಂತನೆ; ಸಿಎಂ ಬೊಮ್ಮಾಯಿ
ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಮತ್ತೂಮ್ಮೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ
Team Udayavani, Jun 10, 2022, 12:20 PM IST
ಬೆಂಗಳೂರು: “ನಮ್ಮ ಮೆಟ್ರೋ’ ಈಗ ನೆರೆ ರಾಜ್ಯಕ್ಕೂ ತನ್ನ ಜಾಲವನ್ನು ವಿಸ್ತರಿಸಲು ಮುಂದಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಜನ ಮೆಟ್ರೋದಲ್ಲೇ ತಮಿಳುನಾಡಿಗೂ ತೆರಳಬಹುದು! ಹೌದು, ನಮ್ಮ ಮೆಟ್ರೋ 2ನೇ ಹಂತದ ವಿಸ್ತರಿಸಿದ ಮಾರ್ಗ ಆರ್.ವಿ. ರಸ್ತೆ- ಬೊಮ್ಮಸಂದ್ರವನ್ನು ಹೊಸೂರಿನವರೆಗೂ ತೆಗೆದುಕೊಂಡು ಹೋಗುವ ಪ್ರಸ್ತಾವನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಸರ್ಕಾರದ ಮುಂದಿಟ್ಟಿತ್ತು. ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆಯನ್ನೂ ನೀಡಿದೆ. ತಮಿಳುನಾಡು ಅಧ್ಯಯನ ನಡೆಸಬಹುದು ಎಂದೂ ಸಿಎಂ ತಿಳಿಸಿದ್ದಾರೆ.
ಪ್ರಸ್ತುತ 2ನೇ ಹಂತದ ಕಾಮಗಾರಿಯನ್ನು ಬೊಮ್ಮಸಂದ್ರವರೆಗೆ ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿಂದ ಹೊಸೂರುವರೆಗೆ 20.5 ಕಿ.ಮೀ. ಮಾರ್ಗ ನಿರ್ಮಾಣದ ಬಗ್ಗೆ ಅಂದಾಜಿಸಲಾಗಿದೆ. ಅದರಲ್ಲಿ 11.7 ಕಿ.ಮೀ. ಕರ್ನಾಟಕದ ಗಡಿಯೊಳಗೆ ಹಾಗೂ ಬಾಕಿ 8.8 ಕಿ.ಮೀ ತಮಿಳುನಾಡಿನಲ್ಲಿ ಬರಲಿದೆ. ರಾಜ್ಯದ ಗಡಿಗಳನ್ನು ಮೀರಿದ ಯೋಜನೆಗಳ ಕುರಿತು ಇರುವ “ಮೆಟ್ರೋ ರೈಲು ನೀತಿ 2017’ರ ಮಾರ್ಗಸೂಚಿಗಳ ಪ್ರಕಾರ ತಮಿಳುನಾಡು ಅಧ್ಯಯನ ಕೈಗೊಳ್ಳುವಂತೆ ಬಿಎಂಆರ್ ಸಿಎಲ್ ಮನವಿ ಮಾಡಿದೆ. ಆದರೆ, ಕೃಷ್ಣಗಿರಿ ಸಂಸದ ಚೆಲ್ಲಕುಮಾರ್, ಚೆನ್ನೈ ಮೆಟ್ರೋ ಅಧಿಕಾರಿ ಗಳ ಬದಲಿಗೆ ಬಿಎಂಆರ್‌ಸಿಎಲ್ ಅಧ್ಯಯನ ಮಾಡಬೇಕು ಎಂಬ ಒತ್ತಾಸೆಯನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಮತ್ತೂಮ್ಮೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
“8.8 ಕಿ.ಮೀ. ಮಾರ್ಗ ರಾಜ್ಯದ ಗಡಿ ದಾಟಿ ನಿರ್ಮಾಣ ಆಗಬೇಕಿದೆ. 2017ರ ಮೆಟ್ರೋ ರೈಲು ನೀತಿ ಪ್ರಕಾರ ನೆರೆಯ ರಾಜ್ಯ ಅಧ್ಯಯನ ಕೈಗೊಳ್ಳುವುದು ಸೂಕ್ತ. ಯೋಜನೆಗೆ ತಗಲುವ ವೆಚ್ಚವನ್ನು ಎರಡೂ ಸರ್ಕಾರಗಳು ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾರ್ಯಾಚರಣೆ ವೇಳೆಸಮನ್ವಯದ ಅಗತ್ಯವಿದೆ’ ಎಂದು ಬಿಎಂ ಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. “ಹೊಸೂರುವರೆಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸಲು ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಸಂಬಂಧ ತಮಿಳುನಾಡು ಸರ್ಕಾರದ ಜತೆ ಮಾತನಾಡುತ್ತೇನೆ’ ಎಂದು ತಮಿಳುನಾಡಿನ ಕೃಷ್ಣಗಿರಿ ಸಂಸದ ಡಾ. ಎ. ಚೆಲ್ಲಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಹಂತದಲ್ಲಿ ಹೀಲಳಿಗೆ ತನಕ ಗುರುತಿಸಿರುವ ಉಪನಗರ ರೈಲು ಯೋಜನೆಯನ್ನು ಹೊಸೂರು ತನಕ ವಿಸ್ತರಿಸುವ ಉದ್ದೇಶವನ್ನೂ ಉಪನಗರ ರೈಲು ಯೋಜನೆ ಹೊಂದಿತ್ತು. ಎರಡೂ ಯೋಜನೆ ಅನುಷ್ಠಾನಗೊಂಡರೆ ಇನ್ನೂ ಉತ್ತಮ. ಚೆನ್ನೈನಲ್ಲಿ ರೈಲು ಮತ್ತು ಮೆಟ್ರೋ ರೈಲು ಮಾರ್ಗಗಳು ಒಟ್ಟಿಗೇ ಇವೆ. ಈ ಮಾರ್ಗಗಳೂ ಜನರಿಗೆ ಮುಖ್ಯ ಆಗಲಿವೆ’ ಎಂದೂ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.