“ಮೂರನೇ ಅಂಪಾಯರ್ ಮಧ್ಯ ಪ್ರವೇಶಿಸಬೇಕಿತ್ತು’
Team Udayavani, Apr 24, 2022, 8:30 AM IST
ಮುಂಬಯಿ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಶುಕ್ರವಾರದ ಐಪಿಎಲ್ ಪಂದ್ಯದ ನಾಟಕೀಯ ಅಂತಿಮ ಓವರ್ ವೇಳೆ ಮೂರನೇ ಅಂಪಾಯರ್ ಮಧ್ಯ ಪ್ರವೇಶಿಸಬೇಕಿತ್ತು ಎಂದು ನಿರಾಶೆಗೊಳಗಾದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಹೇಳಿದ್ದಾರಲ್ಲದೇ ಈ ಸನ್ನಿವೇಶವು ತಂಡಕ್ಕೆ ಅತ್ಯಮೂಲ್ಯವಾಗಿತ್ತು ಎಂದರು.
ಸಂಭಾವ್ಯ ನೋ ಬಾಲ್‌ಗಾಗಿ ಅಂಪಾಯರ್ ಅಂತಿಮ ಓವರಿನ ಮೂರನೇ ಎಸೆತವನ್ನು ಪರಿಶೀಲಿಸಲು ನಿರಾಕರಿಸಿದ ವೆಳೆ ಪಂತ್ ಅವರು ತನ್ನ ಆಟಗಾರರಾದ ಪೊವೆಲ್ ಮತ್ತು ಕುಲದೀಪ್ ಅವರನ್ನು ಮೈದಾನ ತೊರೆಯುವಂತೆ ಸೂಚಿಸಿದ ಘಟನೆ ಸಂಭವಿಸಿತ್ತು. ಅಂತಿಮವಾಗಿ ಈ ಪಂದ್ಯವನ್ನು ಡೆಲ್ಲಿ 15 ರನ್ನುಗಳಿಂದ ಕಳೆದುಕೊಂಡಿತ್ತು.
ಈ ಘಟನೆಯ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಪಂತ್ ಅವರು ಆ ನೋ ಬಾಲ್ ನಮ್ಮ ಪಾಲಿಗೆ ಅತ್ಯಮೂಲ್ಯವಾಗಿತ್ತು ಎಂಬುದು ನನ್ನ ಅಲೋಚನೆ. ನಾವು ಆ ನೋ ಬಾಲ್ ಎಸೆತವನ್ನು ಪರಿಶೀಲಿಸಬೇಕಿತ್ತು. ಆದರೆ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ ಎಂದರು.
ಹೌದು, ನಿರಾಶೆಯಾಗಿದೆ. ಆದರೆ ಹೆಚ್ಚಿನದೇನೂ ಮಾಡುವ ಹಾಗಿಲ್ಲ. ಪ್ರತಿಯೊಬ್ಬರಿಗೂ ಬೇಸರವಾಗಿದೆ. ಮೂರನೇ ಎಸೆತವು ಪುಲ್‌ಟಾಸ್ ಆಗಿತ್ತು. ಹಾಗಾಗಿ ಇದು ನೋ ಬಾಲ್ ಎಂದು ಭಾವಿಸಿದೆ. ಮೈದಾನದಲ್ಲಿದ್ದ ಪ್ರತಿಯೊಬ್ಬರು ಇದನ್ನು ಗಮನಿಸಿದ್ದಾರೆ ಎಂದು ಪಂತ್ ತಿಳಿಸಿದರು.
ಇಂತಹ ಸಂದರ್ಭದಲ್ಲಿ ಮೂರನೇ ಅಂಪಾಯರ್ ಮಧ್ಯ ಪ್ರವೇಶಿಸಬೇಕಿತ್ತು ಮತ್ತು ಇದನ್ನು ನೋ ಬಾಲ್ ಎಂದು ಹೇಳಬೇಕಿತ್ತು. ಆದರೆ ನಿಯಮವನ್ನು ನಾನು ಊಹಿಸಿದಂತೆ ಬದಲಿಸುವ ಹಾಗಿಲ್ಲ ಎಂದು ಪಂತ್ ತಿಳಿಸಿದರು.
ಘಟನೆಯನ್ನು ನೋಡಿದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅಂಪಾಯರ್ ಜತೆ ಮಾಡಲು ಮೈದಾನಕ್ಕೆ ಆಗಮಿಸಿದರು. ಆದರೆ ಅಂಪಾಯರ್ ಅವರನ್ನು ಮರಳುವಂತೆ ಸೂಚಿಸಿದರು.
ಸ್ವಲ್ಪ ಹೊತ್ತಿನ ನಾಟಕೀಯ ಬೆಳವಣಿಗೆಯ ಬಳಿಕ ಪಂದ್ಯ ಪುನರಾರಂಭಗೊಡಿತು. ಆದರೆ ಪೊವೆಲ್ ಇನ್ನುಳಿದ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಲು ವಿಫಲರಾದರು. ಅಂತಿಮವಾಗಿ ಡೆಲ್ಲಿ 15 ರನ್ನುಗಳಿಂದ ಶರಣಾಯಿತು.
ನೋ ಬಾಲ್ ಪ್ರಶ್ನಿಸಲು ಮೈದಾನಕ್ಕೆ ತಂಡದ ಸದಸ್ಯರೊಬ್ಬರನ್ನು ಕಳುಹಿಸಿರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಂತ್ “ನಿಸ್ಸಂಶಯವಾಗಿ ಇದು ಸರಿಯಲ್ಲ. ಆದರೆ ನಮ್ಮ ಪಾಲಿಗೆ ಆಗಿರುವುದು ಕೂಡ ಸರಿಯಲ್ಲ. ಇದು ಪಂದ್ಯದ ಆ ಕ್ಷಣದಲ್ಲಿ ನಡೆದ ಘಟನೆಯಷ್ಟೇ ಅದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದರು.
ಈ ಘಟನೆಯಲ್ಲಿ ಎರಡೂ ಕಡೆಯವರಿಂದ ತಪ್ಪು ಆಗಿದೆ ಎಂದು ಭಾವಿಸಿದ್ದೇನೆ. ನಮ್ಮಿಂದ ಮಾತ್ರ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪಂದ್ಯದುದ್ದಕ್ಕೂ ನಾವು ಅಂಪಾಯರ್ ಅವರಿಂದ ಒಳ್ಳೆಯ ಕಾರ್ಯವನ್ನು ಕಂಡಿದ್ದೇವೆ ಎಂದವರು ಹೇಳಿದರು.
ಮೂರನೇ ಎಸೆತವು ಸಿಕ್ಸರ್‌ಗೆ ಹೋಗಿತ್ತು. ಇದೊಂದು ಪುಲ್‌ಟಾಸ್ ಆಗಿತ್ತು ಮತ್ತು ಅಂಪಾಯರ್ ಇದನ್ನು ಸರಿಯಾದ ಎಸೆತ ಎಂದು ಭಾವಿಸಿದ್ದರು. ಆದರೆ ಬ್ಯಾಟ್ಸ್‌ಮನ್ ಇದನ್ನು ನೋ ಬಾಲ್ ಎನ್ನಬೇಕು ಎಂದು ಬಯಸಿದ್ದರು. ಅಂಪಾಯರ್ ಅವರ ತೀರ್ಮಾನ ಸರಿಯಾಗಿತ್ತು ಮತ್ತು ಆ ನಿರ್ಧಾರಕ್ಕೆ ಅಂಟಿಕೊಂಡಿದ್ದರು ಎಂದು ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಅಂಪಾಯರ್ ನಿರ್ಧಾರವೇ ಅಂತಿಮ
ಮುಂಬಯಿ: ರಾಜಸ್ಥಾನ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದ ಅಂತಿಮ ಓವರಿನಲ್ಲಿ ನಡೆದ ಘಟನೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರೋಧ ವ್ಯಕ್ತಪಡಿಸಿದೆ. ಇದು ತಪ್ಪು. ಆಟಗಾರರು ಅಂಪಾಯರ್ ಅವರ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಮತ್ತು ಪಂದ್ಯ ನಡೆಯುತ್ತಿರುವ ವೇಳೆ ಯಾರಾದರೂ ಮೈದಾನ ಪ್ರವೇಶಿಸುವುದು ಪೂರ್ಣವಾಗಿ ಒಪ್ಪಿಕೊಳ್ಳುವಂತಹ ವಿಷಯವಲ್ಲ ಎಂದು ಡೆಲ್ಲಿಯ ಸಹಾಯಕ ಕೋಚ್ ಶೇನ್ ವಾಟ್ಸನ್ ಹೇಳಿದ್ದಾರೆ.
ನೋಡಿ, ಅಂತಿಮ ಓವರಿನಲ್ಲಿ ನಡೆದ ಘಟನೆಯು ನಿರಾಶೆಯನ್ನುಂಟುಮಾಡಿದೆ. ಅಂಪಾಯರ್ ನಿರ್ಧಾರವನ್ನು ನಾವು ಒಪ್ಪಿಕೊಳ್ಳಲೇಬೇಕು. ಅದು ತಪ್ಪು ಅಥವಾ ಸರಿ ಇರಬಹುದು. ನಾವು ಒಪ್ಪಬೇಕಾಗುತ್ತದೆ. ಇದೇ ವೇಳೆ ಮೈದಾನಕ್ಕೆ ತೆರಳುವುದು ಕೂಡ ಸರಿಯಲ್ಲ. ನಾವು ನಿಜವಾಗಿಯೂ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ ಎಂದು ವಾಟ್ಸನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.