ಹಳೆಯ ನೆನಪುಗಳ ಸುತ್ತ ಹೀಗೊಂದು ಚಿತ್ರ
Team Udayavani, May 20, 2020, 4:13 AM IST
ನಿರ್ದೇಶಕ ಅರವಿಂದ್ ಕೌಶಿಕ್ ನಿರ್ದೇಶನದ “ಸ್ಟೀಲ್ ಪಾತ್ರೆ ಸಾಮಾನ್ ‘ ಸಿನಿಮಾ ಇದೀಗ ರಿಲೀಸ್ಗೆ ರೆಡಿಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್, ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲ, ಶನಿವಾರ ಸಂಜೆ ಕೂಡ ವಿಶೇಷವಾದ ಲೋಗೋ ಟೀಸರ್ ಕೂಡ ಹೊರಬಂದಿದ್ದು, ಅದಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.
ಅಂದಹಾಗೆ, ನಿರ್ದೇಶಕ ಅರವಿಂದ್ ಕೌಶಿಕ್ ಅವರು ಹೇಳುವ ಪ್ರಕಾರ, “ಸ್ಟೀಲ್ ಪಾತ್ರೆ ಸಾಮಾನ್ ‘ ನಿಮ್ಮ ನಿನ್ನೆಗಳನ್ನು ನೆನಪು ಮಾಡುವಂತಹ ಚಿತ್ರವಂತೆ. ಒಂದು ಸಿನಿಮಾನ ನೋಡಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋಕೆ ಸರಿಯಾಗಿ ಇಪ್ಪತ್ನಾಲಕ್ ಸೆಕೆಂಡ್ ಬೇಕು ಅಂತ ಯಾರೋ ಒಬ್ಬ ಪಂಡಿತರು ಹೇಳಿದ್ದರಂತೆ. ಹಾಗಾಗಿ ಶನಿವಾರ ಸಂಜೆ ಇಪ್ಪತ್ ನಾಲಕ್ ಸೆಕೆಂಡಿನ ಲೋಗೋ ಟೀಸರ್ ಬಿಡುಗಡೆ ಮಾಡಲಾಗಿದೆ.
ಆ ಇಪ್ಪತ್ ನಾಲಕ್ ಸೆಕೆಂಡಿನ ಲೋಗೋ ಟೀಸರ್ ನೋಡಿ ಎರಡವ್ವರ್ ಸಿನ್ಮಾ ನೋಡ್ತೀರಾ ಅಂತ ನಮ್ಮ ಫೀಲಿಂಗು ಎನ್ನುತ್ತಾರೆ ನಿರ್ದೇಶಕ ಅರವಿಂದ್ ಕೌಶಿಕ್. ಸದ್ಯಕ್ಕೆ ಲೋಗೋ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಲಾಕ್ಡೌನ್ ನಂತರ ಚಿತ್ರಮಂದಿರಗಳು ಶುರುವಾದರೆ, ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.