ಇದು ಪ್ರತಿ ಮನೆಯಲ್ಲಿರೋ ಸಲಗನ ಕಥೆ
Team Udayavani, May 13, 2020, 6:35 AM IST
“ದುನಿಯಾ’ ವಿಜಯ್ ಅಭಿನಯದ “ಸಲಗ ‘ ಬಗ್ಗೆ ಎಲ್ಲರಿಗೂ ಗೊತ್ತು. ವಿಜಯ್ ಇದೇ ಮೊದಲ ಸಲ ಆ್ಯಕ್ಷನ್-ಕಟ್ ಹೇಳಿದ್ದಾರೆ ಎಂಬುದು ವಿಶೇಷ. ಬಹುನಿರೀಕ್ಷೆಯ “ಸಲಗ ‘ ಚಿತ್ರೀಕರಣ ಮುಗಿದು ಇನ್ನೇನು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಸದ್ಯಕ್ಕೆ “ಸಲಗ ‘ ಹಿನ್ನೆಲೆ ಸಂಗೀತ ಮುಗಿಸಿದೆ. ಸಣ್ಣಪುಟ್ಟ ಸಿನಿಮಾ ಕೆಲಸಗಳನ್ನು ಸಾಮಾಜಿಕ ಅಂತರ ಕಾಪಾಡಿಕೊಂಡೇ ಸಣ್ಣಪುಟ್ಟ ಕೆಲಸ ಮುಗಿಸಿದೆ ಚಿತ್ರತಂಡ.
ಲಾಕ್‌ಡೌನ್ ಮುಗಿದ ನಂತರ “ಸಲಗ ‘ವನ್ನು ಜನರ ಮುಂದೆ ತಂದು ಬಿಡಲು ತಯಾರಿ ನಡೆಸಲಾಗಿದೆ. ಯಾವಾಗ ಚಿತ್ರಮಂದಿರಗಳು ಶುರುವಾಗುತ್ತವೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ ಚಿತ್ರಮಂದಿರ ಶುರುವಾದ ಬಳಿಕ ನೋಡಿಕೊಂಡು ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ನಿರ್ಧರಿಸಿದ್ದಾರೆ. ಸ್ವತಃ “ದುನಿಯಾ’ ವಿಜಯ್ ಹಾಗು ನಿರ್ಮಾಪಕ ಶ್ರೀಕಾಂತ್ ಅವರಿಗೂ “ಸಲಗ ‘ ಚಿತ್ರದ ಮೇಲೆ ನಿರೀಕ್ಷೆ ಇದೆ.
ಅದಕ್ಕೆ ಕಾರಣ, ಮೊದಲ ಸಲ ವಿಜಯ್ ನಿರ್ದೇಶನ ಮಾಡಿರುವುದು. ಬಹಳ ದಿನಗಳ ಬಳಿಕ ಜನರ ಮುಂದೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಅನ್ನೋದು ಇನ್ನೊಂದು ವಿಶೇಷ. ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ಕಾರಣ, ಈಗಾಗಲೇ ಸದ್ದು ಮಾಡಿರುವ ಹಾಡು, ಟೀಸರ್, ಪೋಸ್ಟರ್‌ಗಳು ಮತ್ತು ಕಥೆ ಎಂಬುದು ಚಿತ್ರತಂಡದ ಹೇಳಿಕೆ. “ಸಲಗ’ ಚಿತ್ರ ರೂಪುಗೊಳ್ಳಲು ಮೊದಲು ಕಥೆ. ಹಾಗಾಗಿ ಎಲ್ಲರೂ ಉತ್ಸಾಹದಿಂದಲೇ ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಗಿದೆ ಎನ್ನುವ ನಿರ್ಮಾಪಕರು, ಹಲವು ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
ಚಿತ್ರಮಂದಿರ ಶುರುವಾದರೆ ಎಲ್ಲರೂ ಬರುತ್ತಾರೆ. ಮೊದಲು ಹೊಸಬರು ಕಷ್ಟದಲ್ಲಿದ್ದಾರೆ. ಅಂತಹವರಿಗೆ ಆದ್ಯತೆ ಕೊಡಬೇಕು. ಇಲ್ಲಿ ಎಲ್ಲರಿಗೂ ಒಳ್ಳೆಯದಾಗಬೇಕು. ಮೊದಲು ನಿರ್ಮಾಪಕರಿಗೆ ಹಾಕಿದ ಹಣ ಬರಬೇಕು ಎಂಬ ಉದ್ದೇಶದಿಂದ ಮೊದಲು ಬರುವವರೆಲ್ಲರಿಗೂ ಒಳ್ಳೆಯದಾಗಬೇಕು ಎಂಬುದು ಚಿತ್ರತಂಡದ ಹೇಳಿಕೆ ಸದ್ಯ ಸಲಗ ಚಿತ್ರದ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಚಿತ್ರಕ್ಕೆ ಅಭಿಮಾನಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.