ಸೌರವ್ಯವಸ್ಥೆಯಾಚೆಗಿನ ನಿಗೂಢ ಜಗತ್ತಿನತ್ತ ಪಯಣ?
ತಾರಾಂತರೀಯ ಪ್ರದೇಶದಲ್ಲಿ ಅಧ್ಯಯನ ನಡೆಸಲು ಚಿಂತನೆ; ಜಾನ್ಸ್ ಹಾಪ್‌ಕಿನ್ಸ್ ವಿಜ್ಞಾನಿಗಳ ಹೊಸ ಯೋಜನೆ
Team Udayavani, Jan 4, 2022, 9:15 PM IST
ನ್ಯೂಯಾರ್ಕ್: ಲಕ್ಷಕೋಟಿಗೂ ಹೆಚ್ಚು ನಕ್ಷತ್ರಗಳು, ಕೋಟ್ಯಂತರ ಗ್ರಹಗಳು, ಅಸಂಖ್ಯಾತ ಸಾಧ್ಯತೆಗಳು ತುಂಬಿರುವ ಬ್ರಹ್ಮಾಂಡದಲ್ಲಿ ಮಾನವ ವಾಸಯೋಗ್ಯವಾದ ಮತ್ತೊಂದು ಜಗತ್ತಿದೆಯೇ, ಇನ್ನೊಂದು ನಾಗರಿಕತೆಯಿದೆಯೇ ಎಂಬ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಈಗ ಇಂಥ ನಿಗೂಢ ಲೋಕದ ರಹಸ್ಯವನ್ನು ಭೇದಿಸಲು ಖಗೋಳವಿಜ್ಞಾನಿಗಳು ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ.
ಇದು ಸೌರ ವ್ಯವಸ್ಥೆಯ ಹೊರಗಿನ ಜಗತ್ತಿನತ್ತ ಸಂಚರಿಸಿ, ತಾರಾಂತರೀಯ ಪ್ರದೇಶಕ್ಕೆ ಪ್ರವೇಶಿಸುವ ಯೋಜನೆಯಾಗಿದೆ.
ಸೂರ್ಯನ ಪ್ರಭಾವಲಯವನ್ನು ದಾಟಿ ನಕ್ಷತ್ರಗಳತ್ತ ಪ್ರಯಾಣಿಸುವ ಈ ಯೋಜನೆ ಕುರಿತು ಜಾನ್ಸ್ ಹಾಪ್‌ಕಿನ್ಸ್ ವಿವಿಯ ಅನ್ವಯಿಕ ಭೌತಶಾಸ್ತ್ರ ಪ್ರಯೋಗಾಲಯದ ಖಗೋಳವಿಜ್ಞಾನಿಗಳು ವರದಿಯೊಂದನ್ನು ಪ್ರಕಟಿಸಿದ್ದಾರೆ. ಬಹಳಷ್ಟು ದೂರ ಮತ್ತು ಬಹಳಷ್ಟು ಕ್ಷಿಪ್ರವಾಗಿ ಸಂಚರಿಸಿ, ನಾವು ಮತ್ತು ನಮ್ಮ ನೆರೆಯ ನಕ್ಷತ್ರಗಳ ನಡುವಿನ ಅಂತರ, ಅಲ್ಲಿರುವ ನಿಗೂಢ ಪ್ರದೇಶಗಳ ಕುರಿತು ಅಧ್ಯಯನ ನಡೆಸುವುದೇ ಈ ಯೋಜನೆಯ ಉದ್ದೇಶ.
ಇದನ್ನೂ ಓದಿ:ಖಾಲಿ ಜಾಗದಲ್ಲಿ ಬಂಗಾರದಂಥ ಬೆಳೆ : ಕೃಷಿಯಲ್ಲಿ ಯಶಸ್ಸು ಕಂಡ ಮಲೆನಾಡಿನ ರೈತನ ಕಥೆ
ಯಾವ ಪ್ರದೇಶದ ಅಧ್ಯಯನ?
ಸೂರ್ಯನಿಂದ ಹೊರಕ್ಕೆ ತಳ್ಳಲ್ಪಟ್ಟ(ಸೌರ ಮಾರುತ) ವಿದ್ಯುದಾವೇಶಪೂರಿತ ಕಣಗಳಿಗೆ ಸೂರ್ಯ ಮತ್ತು ಪ್ಲುಟೊದ ಅಂತರವೆಷ್ಟಿದೆಯೋ ಅದರ ಮೂರು ಪಟ್ಟು ದೂರಕ್ಕೆ ತಲುಪುವ ಸಾಮರ್ಥ್ಯವಿರುತ್ತವೆ. ಇದರಾಚೆಗೆ, ಈ ಕಣಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಅಲ್ಲಿಂದ ಆರಂಭವಾಗುವುದೇ ಅಂತರತಾರಾ ಮಾಧ್ಯಮ. ಈ ಸೂರ್ಯಗೋಳವು ನಮ್ಮ ಸೌರ ವ್ಯವಸ್ಥೆಯ ಸುತ್ತಲಿನ ಹೊದಿಕೆಯಂತಿರುತ್ತದೆ. ಈಗ ಖಗೋಳವಿಜ್ಞಾನಿಗಳು ಅಧ್ಯಯನ ನಡೆಸಲು ಉದ್ದೇಶಿಸಿರುವುದು ಇದೇ ಪ್ರದೇಶವನ್ನು.
2036-2042ರ ಅವಧಿಯಲ್ಲಿ ಈ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ. ಪ್ರಸ್ತಾವಿತ ಬಾಹ್ಯಾಕಾಶ ನೌಕೆಯ ಜೀವಿತಾವಧಿ 50 ವರ್ಷಗಳಾಗಿರಲಿವೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.