![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 18, 2021, 2:30 AM IST
ಉಡುಪಿ: ಸರಕಾರಿ ಶಾಲೆಗಳನ್ನು ಉಳಿ ಸಲು ಹಲವು ಯತ್ನಗಳು ನಡೆದಿರುವಂತೆ, ದೊಡ್ಡಣ ಗುಡ್ಡೆ ಸರಕಾರಿ ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿಯವರೂ ವಿನೂತನ ಯೋಜನೆಯೊಂದನ್ನು ಹೊರತಂದಿದ್ದಾರೆ.
ಸಾವಿರ ರೂ.ಬಾಂಡ್
ಇಲ್ಲಿನ ಶಾಲೆಗೆ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಸೇರಿದ ದಿನದಿಂದಲೇ ಸಾವಿರ ರೂ. ಬಾಂಡ್ ಕೊಡಲಾಗುತ್ತದೆ. ಆ ಮಗು 7ನೇ ತರಗತಿ ಪೂರ್ಣಗೊಳಿಸಿದ ಅನಂತರ ಅವರ ಆ ಒಂದು ಸಾವಿರ ರೂ.ಗಳ ಜತೆಗೆ ಬಡ್ಡಿ ಸಹಿತ ಹಣವನ್ನು ವಿದ್ಯಾರ್ಥಿಯ ಪೋಷಕರಿಗೆ ನೀಡಲಾಗುತ್ತದೆ.
ವಿದ್ಯಾರ್ಥಿಗಳಿದ್ದರಷ್ಟೇ ಶಿಕ್ಷಕರು
ಸದ್ಯಕ್ಕೆ ಈ ಶಾಲೆಯಲ್ಲಿ 1ನೇ ತರಗತಿಯಿಂದ 9ನೇ ತರಗತಿವರೆಗೆ ಇರುವುದು ಒಬ್ಬರೇ ಶಿಕ್ಷಕರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದರೆ ಮಾತ್ರ ಇಲಾಖೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಳಗೊಳಿಸಿ ಶಿಕ್ಷಕರನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ.
“ಬಾಂಡ್’ ರೂವಾರಿ ಕೆ.ಎಂ. ಉಡುಪ ನೀಲಾವರ
ಈ ಶಾಲೆ 1981ರಲ್ಲಿ ಸ್ಥಾಪನೆಯಾಗಿದ್ದು ಆ ಸಂದರ್ಭದಲ್ಲಿಯೇ ಕೆ.ಎಂ. ಉಡುಪ ಅವರು ಶಾಲಾಭಿವೃದ್ಧಿ ಸಮಿತಿಯಲ್ಲಿದ್ದರು. ನಿವೃತ್ತ ಬ್ಯಾಂಕ್ ಉದ್ಯೋಗಿಯಾದ ಇವರು ಲಕ್ಷಾಂತರ ರೂ. ವ್ಯಯಿಸಿ ಶಾಲೆಗೆ ಬಣ್ಣ ಬಳಿಯುವ ಹಾಗೂ ದುರಸ್ತಿ ಕೆಲಸವನ್ನು ಈಗಾಗಲೇ ಹಲವಾರು ಬಾರಿ ಮಾಡಿದ್ದಾರೆ. ಪಠ್ಯಪುಸ್ತಕಗಳನ್ನೂ ನೀಡುತ್ತಿದ್ದಾರೆ. ಈ ಬಾರಿಯಿಂದ 1ನೇ ತರಗತಿಗೆ ಸೇರುವ ಎಲ್ಲ ಮಕ್ಕಳಿಗೂ ಸ್ವತಃ ತಾವೇ ಸಾವಿರ ರೂ.ಗಳ ಬಾಂಡ್ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಸರಕಾರಿ ಶಾಲೆ ಉಳಿಯಬೇಕು
ಹಲವಾರು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ ಈ ಶಾಲೆ ಮುಂದೆಯೂ ಇದೇ ರೀತಿ ಮುಂದುವರಿಯಬೇಕು. ಸರಕಾರಿ ಶಾಲೆಗಳನ್ನು ಉಳಿಸಲು ವಿದ್ಯಾರ್ಥಿಗಳ ಪೋಷಕರೂ ಹೆಚ್ಚಿನ ಆಸಕ್ತಿ ವಹಿಸಿ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಗುಣಮಟ್ಟದ ಶಿಕ್ಷಣ ನೀಡುವ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು.
-ಸತ್ಯವತಿ ಬಿ.ಎಸ್. ಪ್ರಧಾನ ಶಿಕ್ಷಕರು (ಪ್ರಭಾರ)
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.