ಅಫ್ಘಾನಿಸ್ಥಾನ: 12 ಸಾವಿರ ಕೈದಿಗಳಿಗೆ ಬಿಡುಗಡೆ ಭಾಗ್ಯ
Team Udayavani, Apr 28, 2020, 6:39 PM IST
ಮಣಿಪಾಲ: ಕೋವಿಡ್ ವೈರಸ್ ಅಬ್ಬರಿಸುತ್ತಿರುವ ಹಿನ್ನೆಲೆ ಯಲ್ಲಿ ಈಗ ಎಲ್ಲೆಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕಾದ ಅಗತ್ಯತೆ ಇದೆ. ಹೀಗಾಗಿ, ಜೈಲುಗಳಲ್ಲಿನ ಜನದಟ್ಟಣೆ ತಡೆಯಲು ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಇದೇ ಹಾದಿಯನ್ನು ಅಫ್ಘಾನಿಸ್ಥಾನ ಸರಕಾರವೂ ಹಿಡಿದಿದ್ದು, 12 ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ವಿಶ್ವದ್ಯಾಂತ ನಡುಕವನ್ನ ಹುಟ್ಟಿಸಿದ ಸೋಂಕು ಕೈದಿಗಳ ಪಾಲಿಗೆ ಮಾತ್ರ ಖುಷಿ ತಂದಂತೆ ಭಾಸವಾಗುತ್ತಿದೆ.
ದೇಶಾದ್ಯಂತ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದ್ದು, ಕಾರಾಗೃಹಗಳಲ್ಲಿಯೂ ಜನಸಂದಣಿ ಹೆಚ್ಚಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ನಿಯಂತ್ರಣ ಪ್ರಮುಖವಾಗಿದ್ದು, ಸುಮಾರು 12 ಸಾವಿರ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಅಫ್ಘಾನಿಸ್ತಾನ ಸರಕಾರ ಸೋಮವಾರ ತಿಳಿಸಿದೆ.
ಸರಿಸುಮಾರು 3.2 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಕೇವಲ 1,703 ಸೋಂಕು ಪ್ರಕರಣಗಳು ದಾಖಲಾಗಿವೆ. ಹಾಗೆಂದು ಇಲ್ಲಿ ಸೋಂಕು ಪ್ರಮಾಣ ಕಡಿಮೆ ಇದೆ ಎಂದು ಅರ್ಥವಲ್ಲ. ಬದಲಾಗಿ ಇಲ್ಲಿ ಶಂಕಿತರ ಗಂಟಲು ಮತ್ತು ರಕ್ತ ಮಾದರಿ ಪರೀಕ್ಷೆಗಳನ್ನು ವೇಗವಾಗಿ ಮಾಡುವಲ್ಲಿ ದೇಶ ವಿಫಲವಾಗಿದ್ದು, ಚಿಕಿತ್ಸಾ ವಿಧಾನದಲ್ಲಿ ಹಿಂದೆ ಬಿದ್ದಿದೆ.
ಸರಕಾರ ಮತ್ತು ತಾಲಿಬಾನ್ ನಡುವಿನ ಯುದ್ಧದ ಸಮಯದಲ್ಲಿ ಬಂಧಿಸಲಾಗಿದ್ದ 5 ಸಾವಿರ ತಾಲಿಬಾನ್ ಸದಸ್ಯರನ್ನು ಬಿಡುಗಡೆ ಹೊಂದುವ ಕೈದಿಗಳ ಗುಂಪಿಂದ ಹೊರಗಿಡಲಾಗಿದೆ. ಈ ವಿಷಯವಾಗಿ ಸರಕಾರ ಮತ್ತು ದಂಗೆಕೋರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದು, ಒಂದು ವೇಳೆ ಅವರನ್ನು ಬಿಡುಗಡೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡರೂ ಅಷ್ಟು ಮಂದಿಯನ್ನು ಒಮ್ಮೆಲೆ ಬಿಡುಗಡೆ ಮಾಡದು. 100 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ಕೈದಿಗಳ ಬಿಡುಗಡೆಯು ಒಮ್ಮೆ ಪೂರ್ಣಗೊಂಡರೆ, ದೇಶದ 36 ಸಾವಿರ ಕೈದಿಗಳ ಪೈಕಿ ಶೇ.60 ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧನದಿಂದ ಮುಕ್ತಿಗೊಳಿಸಿದಂತಾಗಲಿದೆ. ಆದರೂ ದೇಶದ ಕಾರಾಗೃಹಗಳಲ್ಲಿ 18 ಸಾವಿರಕ್ಕೂ ಕೈದಿಗಳಿದ್ದು, ಇದು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿದೆ ಎನ್ನಲಾಗುತ್ತಿದೆ ಮಾಧ್ಯಮದ ವರದಿಗಳು. ಅಫ್ಘಾನಿಸ್ತಾನದಲ್ಲೂ ಈಗಾಗಲೇ 1,700 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 57 ಮಂದಿ ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.