ಡೊನಾಲ್ಡ್ ಟ್ರಂಪ್‌ಗೆ ಮೂವರು ಭಾರತೀಯರ ಪ್ರಬಲ ಪ್ರತಿಸ್ಪರ್ಧೆ
Team Udayavani, Jul 31, 2023, 7:30 AM IST
ವಾಷಿಂಗ್ಟನ್: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಡೆಮೋಕ್ರಾಟ್‌ನಿಂದ ಸ್ಪರ್ಧಿಸಲು ಹಾಲಿ ಅಧ್ಯಕ್ಷ ಜೋ ಬೈಡೆನ್‌ಗೆ, ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಪ್ರತಿಸ್ಪರ್ಧಿ ಎಂಬ ಮಾತು ಎಲ್ಲ ಕಡೆಯೂ ಕೇಳಿ ಬರುತ್ತಿದೆ. ಇದರ ನಡುವೆ ಟ್ರಂಪ್‌ಗೆ ತಮ್ಮದೇ ಪಕ್ಷದಿಂದ ಭಾರತೀಯ ಮೂಲದ ಮೂವರು ಪ್ರತಿಸ್ಪರ್ಧಿಗಳಾಗಿದ್ದಾರೆ. ವಿವೇಕ್ ರಾಮಸ್ವಾಮಿ, ನಿಕ್ಕಿ ಹ್ಯಾಲೆ, ಹರ್ಷವರ್ಧನ್ ಸಿಂಗ್ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸಿದೆ.
ನಿಕ್ಕಿ ಹ್ಯಾಲೆ
ದಕ್ಷಿಣ ಕೊರೊಲಿನಾದ ಮಾಜಿ ಗವರ್ನರ್ ಆಗಿರುವ ನಿಕ್ಕಿ ಹ್ಯಾಲೆ, ಮೂಲತಃ ಭಾರತೀಯಳು. ಡೊನಾಲ್ಡ್ ಟ್ರಂಪ್ ಅವರ ಆಡಳಿತವಾಧಿಯಲ್ಲಿ ವಿಶ್ವಸಂಸ್ಥೆಯ ರಾಯಭಾರಿಯಾಗಿದ್ದವರು. ಅಲ್ಲದೇ, ರಿಪಬ್ಲಿಕನ್ ಪಕ್ಷದಲ್ಲಿಯೂ ಉನ್ನತ ಸ್ಥಾನದಲ್ಲಿರುವ ಹಾಗೂ ಪ್ರೈಮರಿ ಹಂತದಲ್ಲಿ ಸ್ಪರ್ಧಿಸಲು ಮುಂದಾಗಿರುವ ಏಕೈಕ ಮಹಿಳೆ! ಈವರೆಗೆ ಯಾವುದೇ ಚುನಾವಣೆಯಲ್ಲಿ ಸೋಲನ್ನು ಕಂಡಿರದ ನಿಕ್ಕಿ, ಅಮೆರಿಕ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಲು ಸಜ್ಜುಗೊಂಡಿರುವ ಉತ್ಸಾಹಿ. 2020ರ ಚುನಾವಣೆಯಲ್ಲಿ ಸೋತ ಟ್ರಂಪ್, ಮತದಾರರು ತನ್ನನ್ನು ವಂಚಿಸಿದ್ದರಿಂದ ನನಗೆ ನಷ್ಟವಾಗಿದೆ ಎಂದು ಹೇಳಿಕೊಂಡಿದ್ದರು. ಆ ಹೇಳಿಕೆಯನ್ನು ಸ್ವತಃ ನಿಕ್ಕಿ ವಿರೋಧಿಸಿ, ಜನಪರವಾಗಿ ವಾದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಮೆರಿಕದಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ನಿಕ್ಕಿ ಬೆನ್ನಿಗಿದ್ದು, ಆಕೆಯ ಚುನಾವಣೆ ವೆಚ್ಚಕ್ಕಾಗಿ ಈಗಾಗಲೇ 6 ಸಾವಿರ ಡಾಲರ್‌ಗಳವರೆಗೆ ದೇಣಿಗೆಯನ್ನೂ ಸಂಗ್ರಹಿಸಿ ಕೊಟ್ಟು ಪ್ರೋತ್ಸಾಹಿಸುತ್ತಿವೆ.
ವಿವೇಕ್ ರಾಮಸ್ವಾಮಿ
ರಿಪಬ್ಲಿಕನ್ ಪಕ್ಷದ ವತಿಯಿಂದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮುಂದಡಿ ಇಟ್ಟಿರುವ ಮತ್ತೋರ್ವ ಭಾರತೀಯ ವಿವೇಕ್ ರಾಮಸ್ವಾಮಿ! ಯಶಸ್ವಿ ಟೆಕ್ ಉದ್ಯಮಿಯಾಗಿರುವ ವಿವೇಕ್, ಮೂಲತಃ ಕೇರಳದವರಾಗಿದ್ದು, ಅಮೆರಿಕ ರಿಪಬ್ಲಿಕನ್ ಪಕ್ಷದ ಶೇ.9ರಷ್ಟು ನಾಯಕರ ಬೆಂಬಲವನ್ನು ಹೊಂದಿದ್ದಾರೆ. 37 ವರ್ಷದ ವಿವೇಕ್ ಅಮೆರಿಕವನ್ನು ಚೀನಾದ ಮೇಲಿನ ಅವಲಂಬನೆಯಿಂದ ಸಂಪೂರ್ಣ ಹೊರತರುವ ಗುರಿ ಹೊಂದಿದ್ದು, ಅಮೆರಿಕದ ಬಗೆಗಿನ ಅವರ ಅಭಿಮಾನದಿಂದಲೇ ಪ್ರಜೆಗಳ ಮನಗೆದ್ದಿದ್ದಾರೆ. ಈಗಾಗಲೇ ಚುನಾವಣೆಗಾಗಿ ಪ್ರಚಾರಕ್ಕೆ ಮುಂದಾಗಿರುವ ವಿವೇಕ್ ಈ ಸಿದ್ಧತೆಗಳಿಗಾಗಿ ತಮ್ಮ ಸ್ವಂತ 16 ದಶಲಕ್ಷ ಡಾಲರ್ ಹಣವನ್ನು ವ್ಯಯಿಸಿದ್ದಾರೆ.
ಹರ್ಷವರ್ಧನ್
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಹರ್ಷವರ್ಧನ್ ಅವರ ಪೂರ್ವಜರು ಭಾರತೀಯರು. ಬೇರು ಭಾರತದ್ದಾದರೂ ಅಮೆರಿಕನ್ನರ ಮೇಲೆ ಅತೀವ ಅಭಿಮಾನ ಹೊಂದಿರುವ ಹರ್ಷ, ದೇಶದಲ್ಲಿನ ಮೂಲ ನಾಗರಿಕರಿಗೆ ಪ್ರಾಶಸ್ತ್ಯ ನೀಡುವ ಗುರಿ ಹೊಂದಿದ್ದಾರೆ. ಅಲ್ಲದೇ, ನ್ಯೂಜೆರ್ಸಿ ರಿಪಬ್ಲಿಕನ್ ಸ್ಟೇಟ್ ಅನ್ನು ಪುನಸ್ಥಾಪಿಸಲು ಕೆಲಸ ಮಾಡಿರುವ ಹರ್ಷ ಅಮೆರಿಕ ಮೊದಲು ಎನ್ನುವ ಸಿದ್ಧಾಂತವನ್ನೇ ತಮ್ಮ ಚುನಾವಣೆ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಟ್ರಂಪ್ ಮಾನಹಾನಿ ಅರ್ಜಿ ವಜಾ
2020 ಚುನಾವಣೆಯಲ್ಲಿ ಧೋಖಾ ನಡೆದಿದೆ ಎಂಬ ಟ್ರಂಪ್ ಅವರ ವಾದವೇ ದೊಡ್ಡ ಸುಳ್ಳು ಎಂದು ವರದಿ ಮಾಡಿದ್ದ ಮಾಧ್ಯಮ ಸಂಸ್ಥೆ ಸಿಎನ್‌ಎನ್ ವಿರುದ್ಧ ಟ್ರಂಪ್ 475 ದಶಲಕ್ಷ ಡಾಲರ್‌ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೀಗ ಫ್ಲೋರಿಡಾ ಜಿಲ್ಲಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.