ಮನೆ-ಮನೆಗೆ ಮಳೆಕೊಯ್ಲು ಅಳವಡಿಕೆಗೆ ಸಕಾಲ
ಮಳೆಗಾಲಕ್ಕೆ ಮುನ್ನುಡಿ
Team Udayavani, May 22, 2020, 5:57 AM IST
ವಿಶೇಷ ವರದಿ- ಮಂಗಳೂರು: ಮಂಗಳೂರು ನಗರ ಸಹಿತ ಕರಾವಳಿಯಲ್ಲಿ ಒಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದ್ದು, ವಾಡಿಕೆಯಂತೆ ಮಳೆಗಾಲ ಆರಂಭಕ್ಕೂ ಎರಡು ವಾರಗಳಷ್ಟೇ ಬಾಕಿಯಿದೆ. ಬೇಸಗೆಯಲ್ಲಿ ಉಲ½ಣಿಸುವ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದಕ್ಕೆ ನಮ್ಮ ಮುಂದಿರುವ ಸುಲಭ ಯೋಚನೆ-ಯೋಜನೆಯೇ ಮಳೆಕೊಯ್ಲು. ಇದನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆ.
ಮಂಗಳೂರಿನಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ವಿಪರೀತವಾದರೆ, ದ.ಕ. ಮತ್ತು ಉಡುಪಿ ಜಿಲ್ಲಾದ್ಯಂತ ಕಳೆದ ವರ್ಷದ ಬೇಸಗೆ ಯಲ್ಲಿ ನೀರಿಗಾಗಿ ಪರಿತಪಿಸಿದ್ದೇ ಜಾಸ್ತಿ. ಈ ವರ್ಷದ ಮಟ್ಟಿಗೆ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಇದೇ ರೀತಿ ಬೇಸಗೆಯಲ್ಲಿನ ಜಲಕ್ಷಾಮ ದೂರಗೊಳಿಸಬೇಕಾದರೆ ಎಲ್ಲರ ಮನೆ-ಕಟ್ಟಡಗಳಲ್ಲಿಯೂ ಮಳೆಕೊಯ್ಲು ಅಳವಡಿಕೆಯಾಗಬೇಕು.
ಕಳೆದ ಬಾರಿ ಮಳೆಗಾಲ ಪ್ರಾರಂಭಕ್ಕೆ ಮುನ್ನುಡಿಯಾಗಿ “ಉದಯವಾಣಿ’ಯು “ಮನೆ-ಮನೆಗೆ ಮಳೆಕೊಯ್ಲು’ ಎನ್ನುವ ಜಲ ಸಾಕ್ಷರತಾ ಅಭಿಯಾನವನ್ನು ಸುಮಾರು 100 ದಿನಗಳ ಕಾಲ ಹಮ್ಮಿಕೊಂಡಿತ್ತು. ಜನಸಾಮಾನ್ಯರಲ್ಲಿ ನೀರು ಉಳಿತಾಯದ ಜಾಗೃತಿಗೆ ಎಲ್ಲೆಡೆಯಿಂದ ಅಭೂತಪೂರ್ವ ಬೆಂಬಲ-ಉತ್ತೇಜನ ವ್ಯಕ್ತವಾಗಿತ್ತು. ಪರಿಣಾಮವಾಗಿ ದ.ಕ. ಜಿಲ್ಲೆ ಮಾತ್ರವಲ್ಲದೆ, ನೆರೆಯ ಉಡುಪಿ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆ ಸಹಿತ ಸುಮಾರು 400ಕ್ಕೂ ಹೆಚ್ಚು ಮನೆಗಳಲ್ಲಿ, ಸಂಘ ಸಂಸ್ಥೆ, ಧಾರ್ಮಿಕ ಕ್ಷೇತ್ರ, ಶಾಲಾ ಕಾಲೇಜುಗಳಲ್ಲಿ ಮಳೆಕೊಯ್ಲು ಅಳವಡಿಸುವುದಕ್ಕೆ ಪ್ರೇರಣೆಯಾಗಿತ್ತು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲಾºವಿ ಮಾರ್ಗದರ್ಶನದಲ್ಲಿ ಹಲವಾರು ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆಯಾಗಿದೆ.
ನಳನಳಿಸುತ್ತಿದೆ ನೀರು
ಮಳೆಕೊಯ್ಲು ಅಳವಡಿಸಿಕೊಂಡವರೆಲ್ಲ ಈ ಬಾರಿ ತಮ್ಮ ಮನೆಯ ಬಾವಿ, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದಕ್ಕೆ ಖುಷಿಯಾಗಿದ್ದಾರೆ. ಈ ಬೇಸಗೆಯಲ್ಲಿ ನೀರಿನ ಅಭಾವ ಎದುರಾದರೂ ತಮ್ಮ ಮನೆಯ ಬಾವಿಯಲ್ಲಿ ಕಡಿಮೆಯಾಗದು ಎಂಬ ವಿಶ್ವಾಸವನ್ನು ಮೊದಲೇ ಹೊಂದಿದ್ದರು.
ಈಗ ಮತ್ತೂಂದು ಮಳೆಗಾಲಕ್ಕೆ ನಾವೆಲ್ಲ ಅಣಿಯಾಗುತ್ತಿದ್ದೇವೆ. ಮಳೆಕೊಯ್ಲು ಅಳವಡಿಸಿಕೊಳ್ಳಲು ಇದು ಪ್ರಶಸ್ತ ಸಮಯ. ಒಂದೆರಡು ಮಳೆ ಬಿದ್ದಾಗಲೇ ಮಳೆ ಕೊಯ್ಲು ಅಳವಡಿಸಿಕೊಂಡರೆ ಬಹುಶಃ ಮಳೆಗಾಲ ಕಳೆಯುವ ಹೊತ್ತಿಗೆ ಮಳೆ ನೀರು ಇಂಗಿ ಮುಂದಿನ ಬೇಸಗೆಯನ್ನು ನೀರಿನ ಬವಣೆಯಿಲ್ಲದೆ ಕಳೆಯಬಹುದು. ಸದ್ಯ ಭವಿಷ್ಯದಲ್ಲಿ ನೀರಿನ ಹಾಹಾಕಾರ ತಪ್ಪಿಸಲು ಜನ ಜಾಗ್ರತರಾಗಬೇಕೆಂಬುದೇ ಉದಯವಾಣಿಯ ಕಳಕಳಿಯಾಗಿದೆ.
ಈ ಬಾರಿಯೂ
ನಿರಂತರ ಜಾಗೃತಿ
ನಿರ್ಮಿತಿ ಕೇಂದ್ರದ ಮುಖಾಂತರ ಒಂದು ವರ್ಷದಿಂದ ನಿರಂತರವಾಗಿ ಮಳೆಕೊಯ್ಲು ಜಾಗೃತಿ ನಡೆಯುತ್ತಿದೆ. ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಪೂರಕವಾಗಿ ಮಳೆಕೊಯ್ಲು ಅಳವಡಿಸುವುದರ ಬಗ್ಗೆ ಉಚಿತವಾಗಿಯೇ ಪ್ರಾತ್ಯಕ್ಷಿಕೆ ನೀಡಲಾಗಿದೆ. ಯಾರೇ ಮಾಹಿತಿಗಾಗಿ ಕರೆದರೂ ನಿರ್ಮಿತಿ ಕೇಂದ್ರ ಉಚಿತವಾಗಿ ಮಾಹಿತಿ ಒದಗಿಸಲಿದೆ.
-ರಾಜೇಂದ್ರ ಕಲ್ಬಾವಿ, ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ಸುರತ್ಕಲ್
ಮಳೆಕೊಯ್ಲು ಅಳವಡಿಸಿ
ಕಳೆದ ಬೇಸಗೆಯಲ್ಲಿ ನೀರಿಗಾಗಿ ಪರಿತಪಿಸುವ ಹಾಗಾಗಿತ್ತು. ಈ ವರ್ಷ ನೀರಿನ ಸಮಸ್ಯೆ ಉಂಟಾಗಿಲ್ಲ. ಆದಾಗ್ಯೂ ಮುಂದೆ ಹೇಗೆಂದು ಹೇಳಲಾಗುವುದಿಲ್ಲ. ಜನ ಈಗಿಂದಲೇ ನೀರು ಉಳಿತಾಯದ ದಾರಿಗಳನ್ನು ಕಂಡುಕೊಳ್ಳಬೇಕು. “ಉದಯವಾಣಿ’ ಕಳೆದ ವರ್ಷ ಆರಂಭಿಸಿದ್ದ ಮನೆ-ಮನೆಗೆ ಮಳೆಕೊಯ್ಲು ಅಭಿಯಾನಕ್ಕೆ ಜನ ಸ್ಪಂದನೆ ನೀಡಿದ ರೀತಿ ಉತ್ತಮವಾಗಿತ್ತು. ಈ ಬಾರಿಯೂ ಮಳೆ ನೀರಿಂಗಿಸಲು ಇದು ಪ್ರಶಸ್ತವಾದ ಸಮಯ. ಜನರು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ನೀರಿಂಗಿಸುವುದು, ಮಳೆಕೊಯ್ಲು ಅಳವಡಿಸುವುದಕ್ಕೆ ಮುಂದಾಗಬೇಕು.
-ಡಾ| ಆರ್. ಸೆಲ್ವಮಣಿ,
ದ.ಕ. ಜಿಲ್ಲಾ ಪಂಚಾಯತ್ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.