MAHE ಟೈಮ್ಸ್ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ
Team Udayavani, May 21, 2024, 11:39 PM IST
ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯವು ಟೈಮ್ಸ್ ಉನ್ನತ ಶಿಕ್ಷಣ ಯುವ ವಿಶ್ವವಿದ್ಯಾನಿಲಯ ಶ್ರೇಯಾಂಕದಲ್ಲಿ 175ನೇ ಸ್ಥಾನ ಪಡೆದಿದ್ದು ಸಮಗ್ರ 43.6 ಅಂಕ ಗಳಿಸಿದೆ. ಕಳೆದ ವರ್ಷ 251-300ರ ಪಟ್ಟಿಯಲ್ಲಿ ಮಾಹೆ ವಿ.ವಿ. ಈ ಬಾರಿ 75 ಸ್ಥಾನಗಳಷ್ಟು ಏರಿಕೆ ಕಂಡಿದೆ.
ಟೈಮ್ಸ್ ಉನ್ನತ ಶಿಕ್ಷಣ ಯುವ ವಿ.ವಿ ಶ್ರೇಯಾಂಕವನ್ನು ಮೇ 14ರಂದು ಬಿಡುಗಡೆ ಮಾಡಿದ್ದು 50 ವರ್ಷಗಳಾಗಿರುವ ಅಂದರೆ 1975ರಿಂದ ಈ ನಡುವೆ ಸ್ಥಾಪನೆಗೊಂಡಿರುವ ಯುವ ವಿ.ವಿ.ಗಳನ್ನು ಈ ಶ್ರೇಣಿ ನಿರ್ಣಯಕ್ಕೆ ಆಯ್ದುಕೊಳ್ಳಲಾಗಿದೆ.
ಬೋಧನೆ, ಸಂಶೋಧನೆ. ಜ್ಞಾನ ಪ್ರಸರಣ, ಅಂತಾರಾಷ್ಟ್ರೀಯ ಸ್ಥಾನಮಾನದ ವಿಭಾಗಗಳಲ್ಲಿ ಆಯಾ ಸಂಸ್ಥೆಗಳ ಸಾಧನೆಯನ್ನು ಪರಿಗಣಿಸಿ 18 ಮಾನದಂಡಗಳನ್ನು ಬಳಸಿ ಶ್ರೇಯಾಂಕ ನೀಡಲಾಗಿದೆ. 673 ಉನ್ನತ ಸ್ಥಾನ ಪಡೆದಿರುವ ಮತ್ತು 499 ಪರಿಗಣಿತ ಪಟ್ಟಿಯಲ್ಲಿರುವ ವಿ.ವಿ.ಗಳು ಸೇರಿ 1,172 ವಿ.ವಿ.ಗಳು ಶ್ರೇಯಾಂಕದ ಯಾದಿಯಲ್ಲಿದ್ದವು. ಭಾರತದಿಂದ 55 ಉನ್ನತ ದರ್ಜೆಯ ವಿ.ವಿ.ಗಳು ಭಾಗವಹಿಸಿದ್ದವು.
ಮಾಹೆಯ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ವಿ.ವಿ.ಯ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿ, ಈ ಶ್ರೇಯಾಂಕವು ಭಾರತದ ಉನ್ನತ ಶಿಕ್ಷಣ ಮತ್ತು ಸಂಶೋಧನ ವಲಯದಲ್ಲಿ ಮಾಹೆಯ ಸ್ಥಾನಮಾನ ಹೆಚ್ಚಿಸಿದೆ. ಮುಂದೆಯೂ ಮಾಹೆಯು ಅತ್ಯುನ್ನತ ಬೋಧನಕ್ರಮ, ನವೀನ ಸಂಶೋಧನೆ, ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಒದಗಿಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.