ಒಲಿಂಪಿಕ್ಸ್ ಶೂಟಿಂಗ್: ಕ್ರಿಕೆಟಿಗ ತಿವಾರಿ ಗುರಿ
Team Udayavani, May 2, 2020, 5:56 AM IST
ಕೋಲ್ಕತಾ: ಕ್ರಿಕೆಟಿಗರೆಲ್ಲ ನಿವೃತ್ತರಾದ ಬಳಿಕ ಸಾಮಾನ್ಯವಾಗಿ ವೀಕ್ಷಕ ವಿವರಣಕಾರರಾಗಿ, ತರಬೇತುದಾರರಾಗಿ ಕಾಣಿಸಿಕೊಳ್ಳು ವುದು ಮಾಮೂಲು. ಆದರೆ ಬಂಗಾಲದ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ವಿಶಿಷ್ಟವಾದ ಬಯಕೆಯನ್ನು ಹೊರಗೆಡಹಿದ್ದಾರೆ. 10 ಮೀ. ರೈಫಲ್ ಶೂಟಿಂಗ್‌ನಲ್ಲಿ ಉತ್ತಮ ಸಾಧನೆಗೈದು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ತಿವಾರಿ ಗುರಿ!
ಮನೋಜ್ ತಿವಾರಿ ಇತ್ತೀಚಿನ ಸಂದರ್ಶನವೊಂದರ ವೇಳೆ ತಮ್ಮ ಶೂಟಿಂಗ್ ಪ್ರೀತಿಯನ್ನು ಬಹಿರಂಗಗೊಳಿಸಿದರು. “ಕ್ರಿಕೆಟ್ ಬಳಿಕ ನೀವು ನನ್ನನ್ನು 10 ಮೀ. ರೈಫಲ್ ಶೂಟಿಂಗ್‌ನಲ್ಲಿ ಕಾಣುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಒಲಿಂಪಿಕ್ಸ್ ನಲ್ಲೂ ನೋಡಬಹುದು. ಆದರೆ ಇದು ಸುಲಭವಲ್ಲ. ನನ್ನ ಮುಂದೆ ಇತರ ಜವಾಬ್ದಾರಿಗಳೂ ಇವೆ. ಬಿಡುವಿಲ್ಲದಷ್ಟು ಕಾರ್ಯಗಳ ನಡುವೆ ಶೂಟಿಂಗ್‌ಗೆ ಎಷ್ಟು ಸಮಯ ಮೀಸಲಿಡಬಹುದು ಎಂಬುದನ್ನು ಕಾದು ನೋಡಬೇಕು’ ಎಂದಿದ್ದಾರೆ ತಿವಾರಿ.
34 ವರ್ಷದ ಮನೋಜ್ ತಿವಾರಿ 2008ರಲ್ಲಿ ಮೊದಲ ಸಲ ಭಾರತವನ್ನು ಪ್ರತಿನಿಧಿಸಿದ್ದರು. ಆಡಿದ್ದು 12 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಮಾತ್ರ. ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಿವಾರಿ ಸಾಧನೆ ಅಮೋಘ. 125 ಪಂದ್ಯಗಳಿಂದ 8,965 ರನ್ ಪೇರಿಸಿದ್ದಾರೆ. ಇದರಲ್ಲಿ 27 ಶತಕ, 37 ಅರ್ಧ ಶತಕ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malaysia Super 1000; ಸಾತ್ವಿಕ್-ಚಿರಾಗ್ ಕ್ವಾರ್ಟರ್‌ಫೈನಲಿಗೆ
Australian Open ಗ್ರ್ಯಾನ್ ಸ್ಲಾಮ್ ಟೆನಿಸ್ ಡ್ರಾ
Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್ ಫೈನಲ್‌ಗೆ
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.