![ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು](https://www.udayavani.com/wp-content/uploads/2024/12/SADGURU-415x281.jpg)
ಕೊಡುವುದರಲ್ಲಿ ಸಂತೃಪ್ತಿ ಪಡುವುದು ಒಲುಮೆ
Team Udayavani, Feb 10, 2021, 8:00 AM IST
![ಕೊಡುವುದರಲ್ಲಿ ಸಂತೃಪ್ತಿ ಪಡುವುದು ಒಲುಮೆ](https://www.udayavani.com/wp-content/uploads/2021/02/koduvudu-620x388.jpg)
ಒಂದೂರಿನಲ್ಲಿ ಒಂದು ಮಾವಿನ ಮರ ಇತ್ತು. ಬಹಳ ಹಳೆಯ ಮರ. ರೆಂಬೆ ಕೊಂಬೆಗಳನ್ನು ಚಾಚಿ ವಿಶಾಲವಾಗಿ ಹರಡಿತ್ತು. ಅದು ಹೂಬಿಡುವ ಕಾಲದಲ್ಲಿ ಚಿಟ್ಟೆಗಳು, ಜೇನ್ನೊಣಗಳ ದಂಡು ಅದರ ಸುತ್ತ ನೆರೆಯುತ್ತಿತ್ತು. ಹಣ್ಣುಗಳಾದಾಗ ಪಕ್ಷಿಗಳು ಧಾವಿಸಿ ಬರುತ್ತಿದ್ದವು. ಮರದ ಕೊಂಬೆಗಳು ಎಲ್ಲರನ್ನೂ ಸ್ವಾಗತಿಸಿ ಆಶೀರ್ವದಿಸಿ ಕಳುಹಿಸುತ್ತಿದ್ದವು. ಆ ಊರಿನ ಒಬ್ಬ ಸಣ್ಣ ಹುಡುಗ ಆ ಮರದ ನೆರಳಿಗೆ ಬಂದು ಆಡಿಕೊಂಡಿರುತ್ತಿದ್ದ. ಅವನನ್ನು ಮರ ಬಹಳ ಇಷ್ಟಪಡುತ್ತಿತ್ತು.
ಹಿರಿದಕ್ಕೆ ಕಿರಿಯದರ ಜತೆಗೆ ಪ್ರೀತಿ, ಒಲುಮೆ ಮೂಡು ವುದು ಸಾಧ್ಯ. ಮರಕ್ಕೆ ತಾನು ಬಹಳ ದೊಡ್ಡದು ಎಂಬುದು ಗೊತ್ತಿರಲಿಲ್ಲ. ಒಲವಿಗೆ ದೊಡ್ಡದು – ಸಣ್ಣ ದೆಂಬುದು ಇಲ್ಲ.
ಮಾವಿನ ಮರವು ಬಾಲಕನನ್ನು ಇಷ್ಟಪ ಟ್ಟದ್ದು ಹೀಗೆ. ಆತ ಆಡಲು ಬಂದಾಗ ಅದರ ರೆಂಬೆಗಳು ಕೆಳಕ್ಕೆ ಬಾಗುತ್ತಿದ್ದವು. ಅವನು ತಿನ್ನಲಿ ಎಂದು ಅದು ಹಣ್ಣು ಗಳನ್ನು ತಾನಾಗಿ ಉದುರಿಸುತ್ತಿತ್ತು. ಪ್ರೀತಿ ಬಾಗಬಲ್ಲುದು, ಆದರೆ ಅಹಂ ಎದೆ ಸೆಟೆಸಿ ನಿಲ್ಲುತ್ತದೆ.
ಮಗು ತನ್ನ ನೆರಳಿನಲ್ಲಿ ಆಟವಾಡಿ ದಾಗ, ಹಣ್ಣುಗಳನ್ನು ತಿಂದಾಗ ಮರಕ್ಕೆ ಅಮಿತಾನಂದವಾಗುತ್ತಿತ್ತು. ಪ್ರೀತಿ ತಾನು ಏನನ್ನಾದರೂ ಕೊಟ್ಟರೆ ಬಹಳ ಸಂತುಷ್ಟ ವಾಗುತ್ತದೆ; ಆದರೆ ಅಹಂ ಪಡೆದು ಕೊಂಡಾಗಲಷ್ಟೇ ಖುಷಿಪಡುತ್ತದೆ.
ಬಾಲಕ ಬೆಳೆದು ದೊಡ್ಡವನಾದ. ಮರವೇರಿ ಕೊಂಬೆಗಳಲ್ಲಿ ಜೋಕಾಲಿ ಆಡು ತ್ತಿದ್ದ. ಅದರ ಎಲೆ, ಹೂಗೊಂಚಲು ಗಳನ್ನು ಕಿತ್ತು ಪೋಣಿಸಿ ತಲೆಯ ಮೇಲೆ ಧರಿಸಿ ಕಾಡಿನ ರಾಜನಂತೆ ನಟಿಸುತ್ತಿದ್ದ. ಪ್ರೀತಿಯ ಹೂವುಗಳಿದ್ದಾಗ ರಾಜರಂತಿರ ಬಹುದು. ಆದರೆ ಅಹಂನ ಮುಳ್ಳುಗಳಿ ದ್ದಾಗ ಎಲ್ಲವೂ ನರಕ.
ಕಾಲ ಸರಿದು ಬಾಲಕ ಯುವಕ ನಾದ. ಮಹತ್ವಾಕಾಂಕ್ಷೆಗಳು ಬೆಳೆದವು. ಆತ ಸದಾ ಮರದಡಿಗೆ ಬರುತ್ತಿರಲಿಲ್ಲ. ಮರ ಅವನಿಗಾಗಿ ಕಾಯುತ್ತಿತ್ತು. ಆತ ಬಾರದೆ ಇದ್ದಾಗ ವೇದನೆ ಪಡುತ್ತಿತ್ತು. ಪ್ರೀತಿ ಎಷ್ಟು ಕಾಲವೂ ಕಾಯಬಲ್ಲುದು, ತಾನು ಏನೂ ನೀಡದೆ ಇದ್ದಾಗ ಬೇಸರಿಸುವುದು. ತಾನು ಸಂಪೂರ್ಣ ಶರಣಾಗತಿಯಾದಾಗ ಪ್ರೀತಿ ಬಹಳ ಸಂತುಷ್ಟವಾಗಿರುತ್ತದೆ. ಆದರೆ ಅಹಂ ಕಾಯುವುದಿಲ್ಲ, ಬಾಗುವುದಿಲ್ಲ.
ಒಂದು ದಿನ ಯುವಕ ಹಾದು ಹೋಗುತ್ತಿದ್ದಾಗ ಮರ ಆತನನ್ನು ಬಾ ಬಾ ಎಂದು ಕರೆಯಿತು. ಆತ ಅದರ ಹತ್ತಿರ ಬಂದು, “ನಾನೀಗ ದೊಡ್ಡವನಾಗಿದ್ದೇನೆ. ಈಗ ನನಗೆ ಹಣ ಬೇಕಾಗಿದೆ, ನಿನ್ನ ಪ್ರೀತಿಯಲ್ಲ’ ಎಂದ. ಮರ ಸ್ಥಂಭೀಭೂತ ವಾಯಿತು. “ನನ್ನಲ್ಲಿ ಹಣವಿಲ್ಲ, ಪ್ರೀತಿ ಮಾತ್ರ ಇದೆ. ಬೇಕಿದ್ದರೆ ನನ್ನ ಹಣ್ಣುಗಳನ್ನು ಒಯ್ದು ಮಾರಿಕೋ’ ಎಂದಿತು.
“ಹೌದಲ್ಲ’ ಅನಿಸಿತು ಯುವಕನಿಗೆ. ಆತ ಮರವೇರಿ ಹಣ್ಣುಗಳನ್ನು ಮಾತ್ರ ವಲ್ಲ, ಕಾಯಿಗಳನ್ನೂ ಉದುರಿಸಿದ. ಹಲವು ಎಲೆಗಳು, ಕೊಂಬೆಗಳು ಮುರಿ ದವು. ಆದರೂ ಮರ ಕೃತಾರ್ಥತೆಯನ್ನು ಅನುಭವಿಸಿತು. . ಕೊಡುವ ಪ್ರಕ್ರಿಯೆ ಯಲ್ಲಿ ತಾನು ಘಾಸಿ ಗೊಂಡರೂ ಪ್ರೀತಿ ಸಂತೃಪ್ತ. ಆದರೆ ಅಹಂ ಹಾಗಲ್ಲ; ಎಷ್ಟು ಪಡೆದರೂ ಅದಕ್ಕೆ ಅಸಂತೃಪ್ತಿಯೇ.
ಬಹಳ ವರ್ಷಗಳ ಬಳಿಕ ಮತ್ತೆ ಬಂದಾಗ ಆತ ಮಧ್ಯವಯಸ್ಕನಾಗಿದ್ದ. ಮನೆ ಕಟ್ಟುವುದಕ್ಕಾಗಿ ಮರ ಕಡಿಯಲು ಬಂದಿದ್ದ. ಮರ ಸಂತೋಷದಿಂದ ಒಪ್ಪಿಕೊಂಡಿತು. ಆತ ಕೊಡಲಿ ತಂದು ಕಡಿದು ಕೊಂಡೊಯ್ದ. ಈಗ ಮರದ ಕಾಂಡ ಮಾತ್ರ ಉಳಿದುಕೊಂಡಿತ್ತು. ಹೋಗುವಾಗ ಕೃತಜ್ಞತೆ ಹೇಳುವುದಕ್ಕೂ ಆತ ತಿರುಗಿ ನೋಡಲಿಲ್ಲ. ಆದರೂ ಮರ ಬಹಳ ಸಂತೋಷಪಟ್ಟಿತು.
ಬಹಳ ವರ್ಷಗಳ ಬಳಿಕ ಮತ್ತೆ ಮರದತ್ತ ಬಂದಾಗ ಆತ ವೃದ್ಧನಾಗಿದ್ದ. “ನನಗೆ ದೂರ ದೇಶಕ್ಕೆ ವ್ಯಾಪಾರಕ್ಕಾಗಿ ಹೋಗುವುದಕ್ಕೆ ದೋಣಿ ಮಾಡ ಬೇಕಾಗಿದೆ. ಅದಕ್ಕೆ ನೀನು ಬೇಕು’ ಎಂದ. ಮರ ಅದಕ್ಕೂ ಖುಷಿಯಿಂದ ಒಪ್ಪಿಕೊಂಡಿತು. ವೃದ್ಧ ಗರಗಸ ತಂದು ಕಾಂಡವನ್ನು ಕತ್ತರಿಸಿ ಒಯ್ದ. ಈಗಲೂ ಕೃತಜ್ಞತೆಯ ಮಾತು ಹೇಳಲಿಲ್ಲ. ಆದರೂ ಮರ ಸಂತೋಷ ಪಟ್ಟಿತು.
ಈಗ ಮರವಿದ್ದಲ್ಲಿ ಒಂದು ಮೋಟು ಕುತ್ತಿ ಮಾತ್ರ ಇದೆ. ದೂರ ದೇಶಕ್ಕೆ ಹೋದ ವೃದ್ಧ ಮರಳಿ ಬಂದಿಲ್ಲ. ಆತ ಮತ್ತೆ ಬಂದಾನು, ಕನಿಷ್ಠ ಅವನು ಹೇಗಿದ್ದಾನೆ ಎಂಬ ಸುದ್ದಿಯಾದರೂ ಕೇಳಿಬರ ಬಹುದು ಎಂದು ಅದು ಕುಟುಕು ಜೀವ ಹಿಡಿದುಕೊಂಡು ಕಾಯುತ್ತಿದೆ. ವೃದ್ಧ ಎಲ್ಲಿ ಹೋಗಿದ್ದಾನೆ, ಚೆನ್ನಾಗಿ ದ್ದಾನೆಯೇ ಎಂಬುದು ನಿಮಗೇ ನಾದರೂ ಗೊತ್ತಿದ್ದರೆ ಅದಕ್ಕೆ ತಿಳಿಸಿಬಿಡಿ.
( ಸಾರ ಸಂಗ್ರಹ)
ಟಾಪ್ ನ್ಯೂಸ್
![ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು](https://www.udayavani.com/wp-content/uploads/2024/12/SADGURU-415x281.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.