ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ


Team Udayavani, Jul 14, 2020, 3:06 PM IST

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ದಿನವೂ ಐದು ನಿಮಿಷ ಪದ್ಮಾಸನದಲ್ಲಿ ಕೂರುವುದರಿಂದ ಇರುವ ಲಾಭ ಏನೆಂದರೆ, ಮಂಡಿ ಹಾಗೂ ಪಾದದ ಭಾಗದಲ್ಲಿ ರಕ್ತ ಚಲನೆ ಸರಾಗವಾಗುತ್ತದೆ.

ಯೋಗದಿಂದ ಪ್ರಯೋಜನವೇನು ಎಂದು ತಿಳಿಯಬೇಕಾದರೆ, ದೇಹದಲ್ಲಿ ಸ್ವಲ್ಪ ನೋವುಗಳು ಸೇರಿಕೊಳ್ಳಬೇಕು. ನಿಮಗೆ ಕಾಲು ನೋವೋ, ಮಂಡಿನೋವೋ ಬಂದು, ಒಂದಷ್ಟು ಪೇನ್‌ ಕಿಲ್ಲರ್‌ ಮಾತ್ರೆಗಳನ್ನು ತಗೊಂಡು ಸುಸ್ತಾಗಿದ್ದರೆ, ಆಗಷ್ಟೇ ಯೋಗ ಮಾಡುವ ಮನಸ್ಸಾಗುತ್ತದೆ. ಈಗಂತೂ ವರ್ಕ್‌ ಫ್ರಂ ಹೋಂ ಜಮಾನ. ಲ್ಯಾಪ್‌ ಟಾಪ್‌ನ ಎಷ್ಟು ಹುಶಾರಾಗಿ ನೋಡಿಕೊಳ್ಳುತ್ತೀವೋ, ಅಷ್ಟೇ ಜೋಪಾನವಾಗಿ ಕಾಲು, ಬೆನ್ನನ್ನೂ ನೋಡಿಕೊಳ್ಳಬೇಕು. ಇದಕ್ಕಾಗಿ ಒಂದಷ್ಟು ಆಸನಗಳು ಇವೆ. ಅವನ್ನು ಪ್ರತಿದಿನ ಅರ್ಧ ಗಂಟೆ ಮಾಡಿದರೂ ಸಾಕು; ಹಲವು ಬಗೆಯ ನೋವುಗಳಿಂದ ಪಾರಾಗಬಹುದು.

ಆರಂಭದಲ್ಲಿ ನೀವು ಪದ್ಮಾಸನ ಹಾಕಬೇಕು. ಇದು ನೋಡಲು ಬಲು ಸುಲಭವಾದ ಆಸನ. ಆದರೆ, ಹಾಕಿದಾಗಲೇ ಹಿತವಾದ ನೋವು ತಿಳಿಯೋದು. ಪದ್ಮಾಸನದಿಂದ ಲಾಭ ಏನೆಂದರೆ, ಮಂಡಿ ಹಾಗೂ ಪಾದದ ಭಾಗದಲ್ಲಿ ರಕ್ತ ಚಲನೆ ಸರಾಗವಾಗುತ್ತದೆ. ಐದು ನಿಮಿಷಗಳ ಕಾಲ ಪದ್ಮಾಸನದಲ್ಲಿ ಕುಳಿತರೆ ಪಾದದ ಸುತ್ತಮುತ್ತಲ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಆಗ ಗಾಬರಿಯಾಗಬೇಡಿ. ಕೆಲವೇ ಸೆಕೆಂಡುಗಳಲ್ಲಿ ಆ ನೋವು ಮಾಯವಾಗಿ
ಕಾಲಿಗೆ ಬಲ ಬರುತ್ತದೆ.

ಇದಾದ ನಂತರ, ಕಾಲನ್ನು ಹಾಗೇ ಉದ್ದಕ್ಕೆ ಚಾಚಿ, ಎರಡೂ ಕೈಗಳಿಂದ ಆಯಾ ಕಾಲಿನ ಬೆರಳುಗಳನ್ನು ಮಟ್ಟುವ ಪ್ರಯತ್ನ ಮಾಡಿದರೆ ವಾರ್ಮಪ್‌ ಆಗುತ್ತದೆ. ನಂತರ ವಜ್ರಾಸನ ಹಾಕಿದರೆ, ಮಂಡಿಗೆ ಮತ್ತು ಸೊಂಟಕ್ಕೂ ಶಕ್ತಿ ಬರುತ್ತದೆ. ಇದೂ ಒಂದೇ ದಿನಕ್ಕೆ ಆಗುವ ಕೆಲಸವಲ್ಲ. ಸತತ ಅಭ್ಯಾಸದಿಂದಷ್ಟೇ ಇದನ್ನು
ಒಲಿಸಿಕೊಳ್ಳಲು ಸಾಧ್ಯ. ಬೆನ್ನನ್ನು ಸಂಪೂರ್ಣ ಬಾಗಿಸಿ ಹಣೆಯನ್ನು ಮಂಡಿಯ ಮುಂದಿನ ನೆಲಕ್ಕೆ ಮುಟ್ಟಿಸಿದರೆ ಬೊಜ್ಜು ಕೂಡ ಇಳಿಯುತ್ತದೆ. ಇದಾದ ಮೇಲೆ, ನೇರವಾಗಿ ನಿಂತು ಬಲಗಾಲನ್ನು ಮುಂದಡಿ ಇಡಿ. ಹಾಗೇ ಬೆಂಡ್‌ ಮಾಡಿ, ಎಡಗಾಲನ್ನು ಹಿಂದಕ್ಕೆ ಚಾಚಿ. ಎರಡೂ ಕೈಯನ್ನು ನಮಸ್ಕಾರದ ರೀತಿ ಮಾಡಿದರೆ ಇದೇ ವೀರಭದ್ರಾಸನ. ಇದರೊಂದಿಗೆ ವೀರಾಸನ, ತಾಡಾಸನಗಳನ್ನು ಮಾಡಿದರೆ ಒಳಿತು. ಭಸ್ಕಿ ಹೊಡೆಯೋದೇ ಆದರೆ, ಕಾಲಿನ ಎಲ್ಲ ಮಾಂಸಖಂಡಗಳಿಗೂ
ಲಾಭವಾಗುತ್ತದೆ.

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.