Vande Bharat: ಇಂದು 9 ವಂದೇ ಭಾರತ್ ಶುರು; ದಿಲ್ಲಿಯಿಂದ ವರ್ಚುವಲ್ ಮೂಲಕ ಪ್ರಧಾನಿ ಚಾಲನೆ
ಕರ್ನಾಟಕಕ್ಕೆ 3 ರೈಲು ಸೇರ್ಪಡೆ
Team Udayavani, Sep 24, 2023, 12:01 AM IST
ನವದೆಹಲಿ: ಕರ್ನಾಟಕ, ಕೇರಳ ಸೇರಿದಂತೆ 11ರಾಜ್ಯಗಳ ಸಂಚಾರ ವ್ಯವಸ್ಥೆಗೆ ವೇಗ ಒದಗಿಸ ಲಿರುವ 9 ನೂತನ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.
ಕರ್ನಾಟಕದಲ್ಲಿ ಚೆನ್ನೈ- ಮೈಸೂರು, ಬೆಂಗಳೂರು -ಹುಬ್ಬಳಿ ಮಾರ್ಗದ ವಂದೇ ಭಾರತ್ ರೈಲು ಗಳು ರಾಜ್ಯದಲ್ಲಿ ಸಂಚರಿಸುತ್ತಿವೆ. ಇದರೊಂದಿಗೆ ಹೈದರಾಬಾದ್-ಬೆಂಗ ಳೂರು ವಂದೇ ಭಾರತ್ ರೈಲು ಸೇರ್ಪಡೆಗೊಳ್ಳಲಿದೆ. ಈ ನೂತನ ರೈಲು ಹೈದರಾಬಾದ್ ಮತ್ತು ಬೆಂಗಳೂರಿನ ನಡುವಿನ ಪ್ರಯಾಣ ಸಮಯವನ್ನು 2.5 ಗಂಟೆಗಳಷ್ಟು ಕಡಿಮೆ ಮಾಡಲಿದೆ.
ಕಾಸರಗೋಡು-ತಿರುವನಂತಪುರದ ನಡುವೆ ಸಂಚರಿಸಲಿ ರುವ ನೂತನ ವಂದೇ ಭಾರತ್ ಅನ್ನು ಕೇರಳ ಹೊಂದಲಿದ್ದು, ರಾಜ್ಯದಲ್ಲಿ ಒಟ್ಟು 2 ವಂದೇ ಭಾರತ್ ರೈಲುಗಳ ಸೇವೆ ಆರಂಭವಾದಂತಾಗುತ್ತದೆ.
ಯಾವೆಲ್ಲ ಮಾರ್ಗಗಳ ರೈಲಿಗೆ ಚಾಲನೆ?: ಉದಯ ಪುರ- ಜೈಪುರ,ತಿರುನಲ್ವೇಲಿ-ಮದುರೈ-ಚೆನ್ನೈ, ವಿಜಯ ವಾಡ- ಚೆನ್ನೈ, ಪಾಟ್ನಾ-ಹೌರಾ, ರೂರ್ಕೆಲಾ- ಭುವನೇಶ್ವರ್-ಪುರಿ, ರಾಂಚಿ-ಹೌರಾ, ಜಾಮ್‌ನಗರ- ಅಹ್ಮದಾಬಾದ್.
ಕೇಸರಿ ಬಣ್ಣದ ವಂದೇ ಭಾರತ್
ಈ ಬಾರಿ ಚಾಲನೆ ಪಡೆಯುತ್ತಿರುವ ವಂದೇ ಭಾರತ್ ರೈಲುಗಳ ಪೈಕಿ ಕೇರಳ ಹೊಂದಲಿರುವ ಒಂದು ರೈಲು ಕೇಸರಿ ಬಣ್ಣದ್ದು. ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಅದನ್ನು ಅಭಿವೃದ್ಧಿಪಡಿಸಿದೆ. ನೀಲಿ-ಬಿಳಿ ಮಿಶ್ರಿತ ವಂದೇ ಭಾರತ್ ರೈಲಿನ ಬದಲಿಗೆ ತ್ರಿವರ್ಣದಿಂದ ಪ್ರೇರಿತವಾಗಿ ಕೇಸರಿ ಬಣ್ಣದಲ್ಲಿ ಈ ರೈಲು ವಿನ್ಯಾಸಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.