“ಎನ್ ಮಣ್, ಎನ್ ಮಕ್ಕಳ್” ಪಾದಯಾತ್ರೆಗೆ ಇಂದು ಅಮಿತ್ ಶಾ ಚಾಲನೆ
- 6 ತಿಂಗಳ ಕಾಲ 234 ಕ್ಷೇತ್ರಗಳಲ್ಲಿ ಅಣ್ಣಾಮಲೈ ಸಂಚಾರ
Team Udayavani, Jul 28, 2023, 7:20 AM IST
ಮಧುರೈ: 2024ರ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ತಮಿಳುನಾಡು ಬಿಜೆಪಿ ವತಿಯಿಂದ ಆಯೋಜಿಸಿರುವ “ಎನ್ ಮಣ್, ಎನ್ ಮಕ್ಕಳ್'(ನನ್ನ ನೆಲ, ನನ್ನ ಜನ) ಪಾದಯಾತ್ರಗೆ ರಾಮೇಶ್ವರದಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ನೇತೃತ್ವದಲ್ಲಿ ಆರು ತಿಂಗಳ ಸುದೀರ್ಘ ಅವಧಿಗೆ ನಡೆಯುವ ಈ ಪಾದಯಾತ್ರೆಯು ರಾಜ್ಯದ 234 ವಿಧಾನಸಭಾ ಕ್ಷೇತ್ರಗಳು ಹಾಗೂ 39 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳಲಿದೆ. ರಾಮೇಶ್ವರದಿಂದ ಜು.29ರಂದು ಪಾದಯಾತ್ರೆ ಆರಂಭವಾಗಲಿದೆ” ಎಂದರು.
“ಈ ಪಾದಯಾತ್ರೆಯನ್ನು 1,770 ಕಿ.ಮೀ. ನಡಿಗೆ ಮೂಲಕ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉಳಿದ ಮಾರ್ಗವನ್ನು ವಾಹನದ ಮೂಲಕ ಕ್ರಮಿಸಲಾಗುವುದು. ಯಾತ್ರೆಯ ವೇಳೆ ನಡೆಯುವ 10 ಪ್ರಮುಖ ರ್ಯಾಲಿಗಳಲ್ಲಿ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಪಾದಯಾತ್ರೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಈ ವೇಳೆ, “ಮೋದಿ ಏನು ಮಾಡಿದರು’ ಪುಸ್ತಕದ ಒಂದು ಲಕ್ಷ ಪ್ರತಿಗಳನ್ನು ಹಂಚಲಾಗುವುದು,’ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota ಸರಣಿ ಸುಸೈ*ಡ್ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!
LDF; ನೀಲಂಬೂರ್ ಶಾಸಕ ಅನ್ವರ್ ರಾಜೀನಾಮೆ: ‘ಕೈ’ಗೆ ಬೆಂಬಲ
Odisha:ಎಮರ್ಜೆನ್ಸಿ ವೇಳೆ ಜೈಲು ಸೇರಿದ್ದವರಿಗೆ 20,000 ಪಿಂಚಣಿ
Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್ ಬಣ ಪಾಠ
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
MUST WATCH
ಹೊಸ ಸೇರ್ಪಡೆ
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.