ಇಂದು ಗುಜರಾತ್ ಡೇ ಆಚರಣೆ
Team Udayavani, May 1, 2022, 6:55 AM IST
ಮುಂಬಯಿ: ಮೇ 1, 2022ರಂದು ಗುಜರಾತ್ ರಾಜ್ಯ ರಚನೆಯಾಗಿ 62 ವರ್ಷಪೂರ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸದಸ್ಯರು ರವಿವಾರ ತಮ್ಮ ಹೊಟೇಲ್‌ನಲ್ಲಿ ಸಂಪ್ರದಾಯ ಪ್ರೇರಿತ ಆಚರಣೆ ನಡೆಸಲಿದ್ದಾರೆ. ಈ ಆಚರಣೆಯು ಗುಜರಾತ್ ರಾಜ್ಯ ಮತ್ತು ಅದರ ಜನರ ಗೌರವದ ಸಂಕೇತವಾಗಿದೆ.
ಭಾರತದ ಸ್ವಾತಂತ್ರ್ಯೋತ್ತರ ಅಭಿವೃದ್ಧಿಗೆ ಕಥೆಗೆ ಗುಜರಾತ್ ಕೇಂದ್ರಬಿಂದುವಾಗಿದೆ. ಕ್ರಿಕೆಟ್ ವಲಯವಾಗಿಯೂ ಗುಜರಾತ್ ಗುರುತಿಸಿಕೊಂಡಿದೆ ಮಾತ್ರವಲ್ಲದೇ ಗುಜರಾತ್‌ನ ಹಲವು ಆಟಗಾರರು ಉನ್ನತ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಾವು ಗುಜರಾತ್ ದಿನವನ್ನು ಅತ್ಯಂತ ಉತ್ಸಾಹ ಮತ್ತು ಹೆಮ್ಮೆಯಿಂದ ಆಚರಿಸಲಿದ್ದೇವೆ ಎಂದು ಗುಜರಾತ್ ಟೈಟಾನ್ಸ್ ತಂಡದ ಸಿಒಒ ಅರವಿಂದರ್ ಸಿಂಗ್ ಹೇಳಿದ್ದಾರೆ.
ಗುಜರಾತಿನ ರುಚಿಕರವಾದ ತಿಂಡಿ ತಯಾರಿಸಲು ರವಿವಾರ ಸಂಜೆ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು, ಬೆಂಬಲ ಸಿಬಂದಿ ತಂಡದ ಹೊಟೇಲ್‌ನಲ್ಲಿ ಸೇರಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ, ಉಪನಾಯಕ ರಶೀದ್ ಖಾನ್ ಅವರನ್ನು ಒಳಗೊಂಡ ತಂಡಗಳು ಮೂರು ಪಂದ್ಯಗಳಲ್ಲಿ ಆಡಲಿರುವುದು ಆಚರಣೆಯಲ್ಲಿ ಒಳಗೊಂಡಿದೆ. ಅಭಿಮಾನಿಗಳು ಗುಜರಾತಿ ವೇಷದಲ್ಲಿ ಆಟಗಾರರ ಕೆಲವು ನೋಟಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವೀಕ್ಷಿಸಬಹುದು.
ಗುಜರಾತ್ ಡೇ ಎಂಬುದು ನಮ್ಮ ಪಾಲಿಗೆ ವಿಶೇಷ ಸಂದರ್ಭವಾಗಿದೆ ಮತ್ತು ತಂಡದ ಸದಸ್ಯರೊಂದಿಗೆ ಇದನ್ನು ಆಚರಿಸಲು ಉತ್ಸುಕನಾಗಿದ್ದೇನೆ. ಸದ್ಯದ ಸ್ಥಿತಿಯಲ್ಲಿ ನಾವು ತವರಿನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಆದರೆ ಗುಜರಾತ್ ದಿನವನ್ನು ಆಚರಿಸುವ ಮೂಲಕ ನಾವು ತವರಿನಲ್ಲಿ ಇದ್ದೇವೆ ಎಂಬ ಭಾವನೆ ನಮಗೆ ಸಿಗಲಿದೆ. ಪ್ರತಿಯೊಬ್ಬರಿಗೂ ಗುಜರಾತ್ ದಿನದ ಶುಭಾಷಯಗಳನ್ನು ತಿಳಿಸುತ್ತೇನೆ ಎಂದು ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಗುಜರಾತ್ ಶ್ರೇಷ್ಠ ನಿರ್ವಹಣೆ
ಗುಜರಾತ್ ಟೈಟಾನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡತ್ತಿದೆ. ಐಪಿಎಲ್‌ನ ನೂತನ ತಂಡವಾಗಿರುವ ಗುಜರಾತ್ ಆಡಿದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಚಜಯ ಸಾಧಿಸಿದ ಸಾಧನೆ ಮಾಡಿದೆ. ತಂಡದಲ್ಲಿ ಹೇಳಿಕೊಳ್ಳುವಂತಹ ಸೂಪರ್‌ತಾರೆಯರು ಇರದಿದ್ದರೂ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಪರಿಣಾಮಕಾರಿಯಾಗಿ ನಿರ್ವಹಣೆ ನೀಡಿ ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.