ಇಂದು Librarian’s Day: ಭಾರತದ ಗ್ರಂಥಾಲಯ ಪಿತಾಮಹ ಎಸ್‌.ಆರ್‌. ರಂಗನಾಥನ್‌


Team Udayavani, Aug 11, 2023, 11:34 PM IST

lib

ಪ್ರತಿವರ್ಷ ಆ.12ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಆಚರಿಸುತ್ತಾ ಬಂದಿದ್ದೇವೆ. ಇಂದಿನ ಡಿಜಿಟಲ್‌ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾ ಮಹರಾದ ಡಾ| ಎಸ್‌.ಆರ್‌. ರಂಗನಾಥನ್‌ ಅವರನ್ನು ನಾವು ಸ್ಮರಿಸಲೇಬೇಕು. ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್‌ ಯುಗದ ವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿ¨ªಾರೆ. ಇಂತಹ ಜ್ಞಾನ ದೇಗುಲವೇ ಗ್ರಂಥಾಲಯ. ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ.

ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ| ಎಸ್‌.ಆರ್‌.ರಂಗನಾಥನ್‌ರವರು ಮದ್ರಾಸ್‌ ಪ್ರಾಂತದ ಒಂದು ಪುಟ್ಟ ಹಳ್ಳಿ ಶಿಯಾಳಿ ಎಂಬಲ್ಲಿ ಆಗಸ್ಟ್‌ 12, 1892ರಲ್ಲಿ ಜನಿಸಿದರು. ಬಾಲ್ಯದಿಂದಲೂ ಶಿಸ್ತಿನ ಸಿಪಾಯಿಯಂತೆ ಬೆಳೆದವರಾಗಿದ್ದರಿಂದ ಚುರುಕು ಬುದ್ಧಿಯವರಾಗಿದ್ದರು. ಸೇವಾ ಅವಧಿಯಲ್ಲಿ ಮೊದಲಿಗೆ ಗಣಿತದ ಪ್ರಾಧ್ಯಾಪಕರಾಗಿ ಬಳಿಕ, ಮದ್ರಾಸ್‌ ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಪ್ರಥಮ ಗ್ರಂಥಪಾಲಕ ಆಗಿ ನೇಮಕವಾದರು. 1924ರಲ್ಲಿ ಇವರ ಅನುಭವ, ಶಿಸ್ತು, ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ಲಂಡನ್ನಿನ ಬ್ರಿಟಿಷ್‌ ವಸ್ತು ಸಂಗ್ರಹಾಲಯದ ಗ್ರಂಥ ಭಂಡಾರದಲ್ಲಿ ನಡೆಯುವ ಗ್ರಂಥ ಪರಿಚಲನೆ, ಆಡಳಿತ ಪರಿಶೀಲನೆಗಾಗಿ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗಿತ್ತು. ಆಸಕ್ತಿ ಇರುವುದರಿಂದ ಅಲ್ಲಿಯೇ ಮುಂದಿನ ಉನ್ನತ ಶಿಕ್ಷಣ ಪಡೆಯಲು ಉಳಿದುಕೊಂಡರು. ಅಲ್ಲಿ ಗ್ರಂಥಾಲಯ ಮಹತ್ವದ ಬಗ್ಗೆ ಮಾಹಿತಿ ಕಲೆಹಾಕಿ ತಮ್ಮ ಗುರುಗಳಾದ ಬರ್ವಿಕ್‌ ಸೇಯರ್ಸ್‌ ಅವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಪರಿಣತಿ ಹೊಂದಿದರು.

ಶಿಯಾಳಿ ರಾಮಾಮೃತ ರಂಗನಾಥನ್‌ ಸಾಮಾನ್ಯ ಬಡ ಕುಟುಂಬಕ್ಕೆ ಸೇರಿದವರಾಗಿದ್ದರು. ಎನ್‌.ರಾಮಾಮೃತ ರಂಗನಾಥನ್‌, ಸೀತಾಲಕ್ಷ್ಮೀ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀಯುತರು ಅತೀ ಬಡತನದಲ್ಲೇ ಬೆಳೆದು ಉನ್ನತ ಸ್ಥಾನಕ್ಕೆ ಬಂದವರು.

ಡಾ| ಎಸ್‌. ಆರ್‌. ರಂಗನಾಥನ್‌ ಗ್ರಂಥಾಲಯ ವಿಜ್ಞಾನವನ್ನು ಕುರಿತು 60ಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ಹಾಗೂ ಸುಮಾರು 2500 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲಯದ ಪಂಚ ಸೂತ್ರಗಳು, ರಾಮಾನುಜನ್‌-ದ ಮ್ಯಾನ್‌ ಆ್ಯಂಡ್‌ ಮೆಥಮೆಟೀ ಶಿಯನ್‌, ಕ್ಲಾಸಿಫೈಡ್‌ ಕೆಟ್ಲಾಗ್‌, ಡಿಕ್ಷನರಿ ಕೆಟ್ಲಾಗ್‌, ಲೈಬ್ರರಿ ಅಡ್ಮಿನಿಸ್ಟ್ರೇಶ‌ನ್‌, ಇಂಡಿಯನ್‌ ಲೈಬ್ರರಿ ಮ್ಯಾನಿ ಫೆಸ್ಟೋ, ಲೈಬ್ರರಿ ಮ್ಯಾನುವಲ್‌ ಫಾರ್‌ ಲೈಬ್ರರಿ ಅಥಾರಿಟೀಸ್‌, ಲೈಬ್ರರಿಯ®Õ… ಆ್ಯಂಡ್‌ ಲೈಬ್ರರಿ ವರ್ಕರ್ಸ್‌, ಕ್ಲಾಸಿಫಿಕೇಶನ್‌-ಕಮ್ಯುನಿಕೇಶನ್‌, ಕಂಪ್ಯಾರಿ ಟಿವ್‌ ಸ್ಟಡಿ ಆಫ್ ಫೈವ್‌ ಕ್ಯಾಟ ಲಾಗ್ಸ್‌ ಹೀಗೆ ಹತ್ತು ಹಲವಾರು ಗ್ರಂಥಗಳು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವನ್ನು ಎತ್ತಿ ತೋರಿಸುತ್ತವೆ.

ದಿಲ್ಲಿ ವಿಶ್ವವಿದ್ಯಾನಿಲಯ 1948ರಲ್ಲಿ ಪಿಎಚ್‌.ಡಿ ಮತ್ತು ಪಿಟ್ಸ್‌ಬರ್ಗ್‌ ವಿಶ್ವವಿದ್ಯಾನಿಲಯ 1964ರಲ್ಲಿ ಡಿ.ಲಿಟ್‌ ಪದವಿಯನ್ನು ಹಾಗೂ 1935ರಲ್ಲಿ ಬ್ರಿಟಿಷ್‌ ಸರಕಾರ ರಾವ್‌ ಸಾಹೇಬ್‌ ಬಿರುದು, ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. 1970ರಲ್ಲಿ ಅಮೆರಿಕದ ಮಾರ್ಗರೇಟ್‌ ಮಾನ್‌ ಪಾರಿತೋ ಷಕವನ್ನು ಪಡೆದ ಪ್ರಥಮ ಭಾರತೀಯರಿವರು. ಅಷ್ಟೇ ಅಲ್ಲ, ಭಾರತದಲ್ಲಿ 2007ರಿಂದ ಅವರ ಹುಟ್ಟು ಹಬ್ಬದ ದಿನವಾದ ಆ.12 ಅನ್ನು ಗ್ರಂಥಪಾಲಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಗ್ರಂಥಾಲಯ ಸೇವೆಯಲ್ಲಿರುವವರಿಗೆ ಡಾ| ಎಸ್‌. ಆರ್‌. ರಂಗನಾಥನ್‌ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚಸೂತ್ರ ಗಳು 1. ಗ್ರಂಥ ಓದಲು 2.  ಗ್ರಂಥಕ್ಕೊಬ್ಬರು 3.  ಎಲ್ಲರಿಗೂ ಗ್ರಂಥಗಳು 4.  ಓದುಗರ ಸಮಯವನ್ನು ಉಳಿಸಿರಿ 5.  ಗ್ರಂಥಾಲಯ ಬೆಳೆಯುವ ಶಿಶು ಗ್ರಂಥಪಾಲಕರಿಗೆ ದಾರಿದೀಪವಾಗಿವೆ.

ಲಂಡನ್‌ನಲ್ಲಿ ಇದ್ಧಾಗ ಸೇಯರ್ಸ್‌ ಸಹಾಯದಿಂದ ಶಿಷ್ಯತ್ವ ವಹಿಸಿ ವರ್ಗೀಕರಣ ಪದ್ಧತಿಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಆಳವಾಗಿ ಅಭ್ಯಾಸ ಮಾಡಿದರು. ಅಲ್ಲಿಯ ಹಲವಾರು ಪದ್ಧತಿಗಳು ನಮ್ಮ ದೇಶದಲ್ಲಿ ಅನ್ವಯವಾಗುವುದಿಲ್ಲ ಎಂದು ಅರಿತ ಮೇಲೆ ತಾವೇ ಯೋಚನೆ ಮಾಡತ್ತಾ ಹಡಗಿನಲ್ಲಿ ಭಾರತಕ್ಕೆ ಬರುವಾಗಲೇ ದ್ವಿಬಿಂದು ವರ್ಗೀಕರಣ ಪದ್ಧತಿಯ ರೂಪುರೇಷೆ ಹಾಕಿ ದರು. ಬಳಿಕ ಮದ್ರಾಸ್‌ ವಿಶ್ವವಿದ್ಯಾನಿಲಯದ ಗ್ರಂಥಾಲ ಯದ ಗ್ರಂಥಗಳನ್ನು ವರ್ಗಿಕರಿಸಲಾರಂಭಿ ಸಿದರು. ಮದ್ರಾಸ್‌ ಗ್ರಂಥಾಲಯ ಸಂಘದಿಂದ ದ್ವಿಬಿಂದು ಪ್ರಥಮ ಮುದ್ರಣ ಕಂಡಿತು. ಮುಂದೆ ಅದು ಜಗದ್ವಿಖ್ಯಾತ ಪ್ರಸಿದ್ಧಿ ಪಡೆಯಿತು. ಈಗ ಏಳನೇ ಆವೃತ್ತಿ ಪರಿಷ್ಕೃ ತಗೊಂಡು ಡಾ| ಎಂ.ಎ. ಗೋಪಿನಾಥರ ವರು 1987 ರಲ್ಲಿ ಸಂಪಾದಿಸಿ ಕೊಟ್ಟಿದ್ಧಾರೆ. ಇದರ ಕನ್ನಡ ಅನುವಾದವನ್ನು ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಿಂದ ಡಾ| ಬಿ.ಎ.ಶಾರದಾ ಅವರು 2010ರಲ್ಲಿ ಅನುವಾದ ಮಾಡಿದ್ದಾರೆ.

ಈ ಗ್ರಂಥ ಜಗತ್ತಿನ ಅನೇಕ ವಿವಿಗಳಲ್ಲಿ ಗ್ರಂಥಾಲಯ ವಿಜ್ಞಾನ ವಿಭಾಗದಲ್ಲಿ ಪಠ್ಯಪುಸ್ತಕವೆಂದು ಅಂಗೀಕರಿಸಲ್ಪಟ್ಟಿದೆ. ಆಗ ಭಾರತೀಯ ಗ್ರಂಥಾಲಯ ಸಂಘ 1933ರಲ್ಲಿ ಪ್ರಾರಂಭವಾಯಿತು. ಈ ಸಂಘವು ರಂಗನಾ ಥನ್‌ ಅವರ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಈ ಸಂಘ ದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವತಂತ್ರ ಗ್ರಂಥ ಗಳನ್ನು ಪ್ರಕಟಿಸಿದರು. ಅಬ್ಗಿಲಾ ಎಂಬ ಪತ್ರಿಕೆ ನಡೆಸಿದರು. ಈ ಪತ್ರಿಕೆಯಲ್ಲಿ ಗ್ರಂಥಾಲಯ ವಿಜ್ಞಾನದ ಮೇಲೆ ಬರೆಯ ಲಾದ ಸಂಶೋಧನ ಲೇಖನಗಳು ಪ್ರಕಟವಾಗಿವೆ.ವಿಶೇ ಷವಾಗಿ ಈ ಪತ್ರಿಕೆಯಲ್ಲಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಲೇಖನಗಳು ಪ್ರಕಟವಾಗಿವೆ. ಈ ಪತ್ರಿಕೆ ನಿಂತರೂ ಛಲ ದಿಂದ ಮತ್ತೇ Annals of Library Science ಎಂಬ ಮತ್ತೂಂದು ಪತ್ರಿಕೆ ಆರಂಭಿಸಿದರು. ಇಂದಿಗೂ ದಿಲ್ಲಿಯಿಂದ ಪ್ರಕಟವಾಗುತ್ತಿದೆ.

ಗ್ರಂಥಾಲಯದ ಮಹತ್ವ, ಉಪಯೋಗ ತಿಳಿಸಬೇ ಕೆಂದರೆ ಗ್ರಂಥಪಾಲಕರಿಗೆ ತರಬೇತಿ ಮುಖ್ಯ ಎಂದು ತರಬೇತಿ ಕೇಂದ್ರ ಪ್ರಾರಂಭಿಸಿದರು. ಭಾರತದಲ್ಲಿ ಇಬ್ಬರು ವಿದೇಶಿ ಗ್ರಂಥಪಾಲಕರು ಬಂದರೂ ಸಹ ಕೆಲವೇ ತಿಂಗಳು ಗಳಲ್ಲಿ ಪುನಃ ತಮ್ಮ ದೇಶಕ್ಕೆ ಮರಳುತ್ತಿದ್ದರು. ಆದರೆ ನಮ್ಮ ದೇಶದ ಪ್ರತಿಭೆ ಎಸ್‌.ಆರ್‌.ರಂಗನಾಥನ್‌ ಅವರು ಭಾರತಕ್ಕೆ ಮೂರನೇ ಗ್ರಂಥಪಾಲಕ ಆಗಿ ನೇಮಕವಾದರು. ದಕ್ಷಿಣ ಭಾರತದ ಶಿಕ್ಷಕರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಗ್ರಂಥಾಲಯ ವಿಜ್ಞಾನದ ಬಗ್ಗೆ ಭಾಷಣ ಮಾಡಿದರು. ಸಾವಿ ರಕ್ಕೂ ಹೆಚ್ಚು ಶಿಕ್ಷಕರು ಹಾಜರಿದ್ದರು. ಮುಂದೆ ಇವರು ಶ್ರಮದ ಫ‌ಲವಾಗಿ ಡಿಪ್ಲೊಮಾ ಕೋರ್ಸ್‌ ಆರಂಭ ಆಯಿತು. 1945ರಲ್ಲಿ ನಿವೃತ್ತಿ ಆದರೂ ಅವರ ಕ್ರಿಯಾಶೀಲತೆ ಮೆಚ್ಚಿ ಬನಾರಸ್‌ ವಿಶ್ವವಿದ್ಯಾನಿಲಯದಲ್ಲಿ ಕುಲಪತಿಗಳಾದ ಡಾ| ರಾಧಾಕೃಷ್ಣನ್‌ ಅವರು ತಮ್ಮ ವಿಶ್ವವಿದ್ಯಾನಿಲಯದ ಗ್ರಂಥಾಲಯವನ್ನು ನವೀಕರಿಸಬೇಕು ಎಂದು ವಿನಂತಿಸಿ ಕೊಂಡರು. ಮುಂದೆ ಕಾಶಿಯಲ್ಲಿ ಒಂದು ಲಕ್ಷ ಗ್ರಂಥಗಳನ್ನು ವರ್ಗೀಕರಿಸಿದ್ದು ಮಹತ್ವದ ಸಾಧನೆ. ದಿಲ್ಲಿಯ ವಿಶ್ವ ವಿದ್ಯಾ ನಿಲಯದ ಕುಲಪತಿಗಳಾದ ಪ್ರೊ| ಮಾರಿಸ್‌ ಗ್ವಾರ್ಯ ರಿಂದ ತಮ್ಮ ವಿದ್ಯಾಪೀಠದ ಗ್ರಂಥಾಲಯವನ್ನು ನವೀಕರಿ ಸಬೇಕು ಎಂದು ಕೇಳಿಕೊಂಡರು. ಅಲ್ಲಿಯೂ ಸಹ ಗ್ರಂಥಾ ಲಯ ಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅನಂತರ ಎರಡು ವರ್ಷದ ಲೈಬ್ರರಿ ಸೈನ್ಸ್‌ ಪ್ರಾರಂಭ ಮಾಡಿದರು.

1961ರಿಂದ ಬೆಂಗಳೂರಿನ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರಲೇಖನ ಸಂಶೋಧನ ಮತ್ತು ತರಬೇತಿ ಕೇಂದ್ರದಲ್ಲಿ ಗೌರವ ಪ್ರಾಧ್ಯಾ ಪಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಇಂಗ್ಲೆಂಡ್‌, ಫ್ರಾನ್ಸ್‌, ಅಮೆರಿಕ, ಜಪಾನ್‌ ಇತ್ಯಾದಿ ದೇಶಗಳಲ್ಲಿ ಎಸ್‌.ಆರ್‌.ರಂಗನಾಥನ್‌ ಅವರು ಅತಿಥಿ ಗೌರವ ಉಪ ನ್ಯಾಸಕರಾಗಿ ಸೇವೆ ಸಲ್ಲಿಸಿ ಇಡೀ ಜಗತ್ತಿಗೆ ಮಾದರಿ ಹಿರಿಯ ಮುತ್ಸದ್ದಿ ಭಾರತದ ಗ್ರಂಥಾಲಯ ಪಿತಾಮಹ ಎಂದು ಅನಿಸಿಕೊಂಡರು. ಅನಂತರ  ಸಾರ್ವಜನಿಕ ಗ್ರಂಥಾಲ ಯಗಳು, ಮಕ್ಕಳ ಗ್ರಂಥಾಲಯ, ಸಂಚಾರಿ ಗ್ರಂಥಾಲಯ, ಪಂಚಾಯತ್‌ ಗ್ರಂಥಾಲಯಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗ್ರಂಥಾಲಯದ ಕೊಡುಗೆ ಅಪಾರವಾಗಿದೆ. ಅವರು ಮಾಡಿದ ಸಾಧನೆಯನ್ನು ಗುರುತಿಸಿ ಅವರಿಗೆ ಗೌರವ ಸಮರ್ಪಣೆ ಮಾಡೋಣ. ಅಂದರೆ ಈ ದಿನ ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯವನ್ನು ಪ್ರೀತಿಸೋಣ, ಬೆಳೆಸೋಣ ಜ್ಞಾನ ದೀವಿಗೆ ಹಚ್ಚೋಣ.

ಡಾ| ಸತೀಶಕುಮಾರ ಎಸ್‌. ಹೊಸಮನಿ

(ಲೇಖಕರು: ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು, ಬೆಂಗಳೂರು)

ಟಾಪ್ ನ್ಯೂಸ್

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.