ಇಂದು ರಾಷ್ಟ್ರೀಯ ರೈತ ದಿನ- ಕೃಷಿಯನುದ್ಯೋಗಿಸುವ ಜನವನು ಪಾಲಿಸೋಣ
Team Udayavani, Dec 23, 2023, 1:32 AM IST
ಅಂದಿನ ಕೃಷಿ: ಕುಮಾರವ್ಯಾಸ ಭಾರತದ ಸಭಾಪರ್ವದಲ್ಲಿ ಕೃಷಿ ಕುರಿತು ಭಾಮಿನಿಯೊಂದಿದೆ. ಅದರ ಒಂದು ಸಾಲು ಕೃಷಿ ಮೊದಲು ದೇಶಕ್ಕೆ. ನಮ್ಮ ದೇಶವೂ ಕೃಷಿ ಪ್ರಧಾನ. ಕೃಷಿಯೇ ಇಲ್ಲಿ ಬದುಕಿನ ಜೀವಾಳ. ದೇಶದಲ್ಲಿ ಒಂದು ಕಾಲದಲ್ಲಿ ಕೃಷಿಗೆ ಎಷ್ಟು ಗೌರವ ಎಂದರೆ ವೇತನ ಪಡೆಯುವ ಉದ್ಯೋಗಗಳಿಂದ ಹೊರಬಂದು ಕೃಷಿಯನ್ನೇ ಕೈಗೆತ್ತಿಕೊಳ್ಳುತ್ತಿದ್ದರು. ಇದರ ಹಿಂದಿರುವುದು ಸ್ವಾಭಿಮಾನ ಹಾಗೂ ಸ್ವತಂತ್ರ ಬದುಕಿನ ಹಂಬಲ. ನಮ್ಮ ಬಾಲ್ಯದ ದಿನಗಳಲ್ಲಿ ಕಂಡ ಕೃಷಿಯ ಖುಷಿ ಇಂದು ನೆನಪು ಮಾತ್ರ. ಅವಿಭಕ್ತ ಕುಟುಂಬ. ಮನೆಯವರೆಲ್ಲರ ಕಾಯಕ ಕೃಷಿ.
ಜಾನುವಾರುಗಳೇ ಉಳುಮೆ, ಹಾಲು ಹಾಗೂ ಕೃಷಿಗೆ ಅಗತ್ಯವಾದ ಗೊಬ್ಬ ರಕ್ಕೆ ಆಧಾರ. ಯಂತ್ರಗಳಿಲ್ಲದ ಕಾಲ. ಸಾವಯವ ಕೃಷಿಗೆ ಆದ್ಯತೆ. ಮರದ ನೇಗಿಲು, ನೊಗಗಳೇ ಕೃಷಿಕನ ಉಳು ಮೆಯ ಆಯುಧ. ಮಳೆಗಾಲದ ತುಸು ಬಿರುಸಿನ ಮಳೆಯ ನಡುವೆಯೂ ಉತ್ಸಾಹದ ನಾಟಿಕಾರ್ಯ. ಮನೆಮಂದಿಯೆಲ್ಲ ಗದ್ದೆಯ ನಾಟಿಕಾಯಕದಲ್ಲಿ. ಮನೆಯ ಕಣದಲ್ಲಿ ಬೆಳೆದ ಭತ್ತವನ್ನು ಒಡಲೊಳು ಹೊತ್ತು ನಿಂತ ತಿರಿ. ಭತ್ತದೊಂದಿಗೆ ಸಾವಯವ ಆಧಾರಿತ ತರಕಾರಿಗಳ ಬೆಳೆ. ಮನೆಗೆ ಸಾಕಾಗಿ ಮಾರುವ ಮಟ್ಟದಲ್ಲಿ ಹುಲುಸಾದ ಬೆಳೆ. ಅಂದಿನ ಅವಿಭಕ್ತ ಕೃಷಿಕುಟುಂಬದ ಮೊದಲ ನಿರೀಕ್ಷೆ ಬದುಕಿಗೆ ಅಗತ್ಯವಾದಷ್ಟು ಆಹಾರ ಉತ್ಪಾದನೆ. ಬೆಳೆದ ಕೃಷಿ ಉತ್ಪನ್ನಗಳಿಂದ ರುಚಿಯಾದ ಹಾಗೂ ಸತ್ವ ಭರಿತವಾದ ಊಟ. ಮಾನಸಿಕವಾಗಿ ಯೂ ಆರೋಗ್ಯಪೂರ್ಣ ಪರಿಸರ. ಹಿರಿಯ ರಿಗೆ ಮನ್ನಣೆ.
ಇಂದಿನ ಸ್ಥಿತಿ: ಇಂದಿನ ಕೃಷಿ ಪರಿಸರ ಬದಲಾಗಿದೆ. ಕೃಷಿ ಕ್ಷೇತ್ರಕ್ಕೆ ಕಾಲಿಡಲೂ ಹಿಂಜರಿಕೆ. ಕೃಷಿಯನ್ನು ಕೈಹಿಡಿವ ವಿದ್ಯಾವಂತ ಯುವಕೃಷಿಕರಿಗೆ ಕನ್ಯೆ ಕೈಹಿಡಿವಳ್ಳೋ ಇಲ್ಲವೋ? ಎಂಬ ಸಂದೇಹ. ಹಿಂದೆ ಇದ್ದ ಅವಿಭಕ್ತ ಕುಟುಂಬಗಳು ಇಂದು ವಿಭಕ್ತ ಕುಟುಂಬಗಳಾಗಿವೆ. ಕೃಷಿಕುಟುಂಬದ ವಿದ್ಯಾವಂ ತರು ಹಳ್ಳಿಯ ಜೀವನವನ್ನು ತೊರೆಯಲು ಮುಂದಾಗು ತ್ತಿದ್ಧಾರೆ. ವೇತನ ಎಷ್ಟೇ ಸಿಗಲಿ, ನಗರದಲ್ಲಿ ಬದುಕು ಬೇಕೆಂಬ ಬಯಕೆ. ಹಾಗಾಗಿ ಹಳ್ಳಿಗಳಲ್ಲಿ ಕೃಷಿಕುಟುಂ ಬಗಳು ಖಾಲಿಯಾಗುತ್ತಿವೆ. ಈ ಸಮಸ್ಯೆಗಳ ನಡುವೆ ಯೂ ಕೃಷಿಯನ್ನು ಕೈ ಬಿಡದ ಕೆಲವು ಮಂದಿ ನಮ್ಮ ನಡುವೆ ಇದ್ಧಾರೆ. ಹಳೆಯ ಪದ್ಧತಿಯ ಜಾಗದಲ್ಲಿ ಹೊಸ ಪದ್ಧತಿ ಕೃಷಿಕ್ಷೇತ್ರವನ್ನು ಆವರಿಸಿದೆ. ರಾಸಾಯನಿಕ ಗೊಬ್ಬರಗಳ ಬೇಡಿಕೆ ಹೆಚ್ಚುತ್ತಿದೆ. ಕಾರ್ಮಿಕರ ಕೊರತೆಯ ಕೂಗಿಗೆ ಯಂತ್ರಗಳು ಕೊಂಚ ಪರಿಹಾರ ಒದಗಿಸಿವೆ. ಆದರೂ ಹೊಸ ವಿಧಾನದಿಂದ ಕೃಷಿ ಭೂಮಿಯ ಮಣ್ಣಿನ ಸತ್ವ ವರ್ಷದಿಂದ ವರ್ಷಕ್ಕೆ ಕುಸಿಯಬಹುದೆಂಬ ಆತಂಕ ಕಾಡುತ್ತಿದೆ. ಲಾಭದಾಯಕವಾದ ವಾಣಿಜ್ಯ ಬೆಳೆಗಳಿಂದಾಗಿ ಆಹಾರಕ್ಕೆ ಅಗತ್ಯವಾದ ಭತ್ತದ ಬೆಳೆ ಬತ್ತಲಾರಂಭಿಸಿದೆ. ಕೃಷಿಯೋಗ್ಯ ಭೂಮಿಯಲ್ಲಿ ಗಗನ ಚುಂಬಿ ಕಟ್ಟಡಗಳ ನಿರ್ಮಾಣ ಮುಂದುವರಿ ದರೆ ಕೃಷಿಗೆ ಮತ್ತಷ್ಟು ಹೊಡೆತ. ಕೃಷಿಭೂಮಿ ಯನ್ನು ಹಡಿಲು ಭೂಮಿಯನ್ನಾಗಿರಿಸಿದರೆ ಅದೂ ಇಳುವರಿಗೆ ಆತಂಕ.
ಮುಂದಿನ ದಿನ: ಕೃಷಿ ಉಳಿಯಲು ಮೊದಲು ಆಗಬೇಕಾದ ಕೆಲಸ ಕೃಷಿ ಕ್ಷೇತ್ರವನ್ನು ಆಕರ್ಷಕವನ್ನಾ ಗಿರಿಸಲು ಯೋಜನೆಗಳನ್ನು ರೂಪಿಸುವುದು. ವಿದ್ಯಾ ವಂತ ಯುವಕರು ನಗರದತ್ತ ವಲಸೆ ಹೋಗುವುದನ್ನು ತಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹದ ವಾತಾವರಣದ ನಿರ್ಮಾಣ. ಕೃಷಿಕ್ಷೇತ್ರದ ಸಮಸ್ಯೆಗಳಿಗೆ ಶೀಘ್ರ ಸ್ಪಂದನ. ಕೃಷಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮ ಗಳು. ಕೃಷಿಯಲ್ಲಿ ಅಗತ್ಯವಾದ ಯಂತ್ರಗಳ ಪ್ರಯೋಗ ಹಾಗೂ ಈ ಕುರಿತು ಅಗತ್ಯ ಮಾಹಿತಿ. ಕೃಷಿಯನ್ನು ಲಾಭದಾಯಕವನ್ನಾಗಿ ರೂಪಿಸಲು ಅಗತ್ಯವಾದ ಸಲಹೆ ಹಾಗೂ ಮಾರ್ಗದರ್ಶನ. ಭಾರತದ ಪ್ರಧಾನಿಯಾಗಿದ್ದ ಚರಣ್‌ಸಿಂಗ್ ಅವರ ಜನ್ಮದಿನವಾದ ಡಿ.23ರಂದು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಕುಮಾರವ್ಯಾಸನ ಸಲಹೆಯಂತೆ ಕೃಷಿಯಂ ಪಸರಿಸುವುದರೊಂದಿಗೆ ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸೋಣ.
ಡಾ| ಶ್ರೀಕಾಂತ್ , ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.