ಇಂದು ಐತಿಹಾಸಿಕ ಅಸಂಖ್ಯ ಪ್ರಮಥರ ಗಣಮೇಳ


Team Udayavani, Feb 16, 2020, 3:10 AM IST

indu-itihasika

ಬೆಂಗಳೂರು: ಇಂದು ಎಲ್ಲ ಕ್ಷೇತ್ರಗಳಲ್ಲಿ ನೈತಿಕತೆಯ ಅಧ:ಪತನವನ್ನು ಕಾಣುತ್ತಿದ್ದೇವೆ. ನೈತಿಕತೆ ಎಂದರೆ ಬದುಕಿನ ಬದ್ಧತೆ. ಆದರೆ, ಬದ್ಧತೆ ಇಲ್ಲದೇ ನೈತಿ ಕತೆಯೂ ಕಾಣದಾಗಿದೆ. ಹಾಗಾಗಿ, ಇಂದಿನ ಜನರಿಗೆ ಬದ್ಧತೆಯ ಪಾಠದ ಅಗತ್ಯವಿದೆ. ವಂಚನೆ, ಶೋಷಣೆ, ಅಸ್ಪೃಶ್ಯತೆ, ಅನಾಗರಿಕತೆ, ಅಮಾನವೀಯತೆ ಇಲ್ಲದ ಒಂದು ಸಮಾಜ ನಿರ್ಮಾಣದ ಆಶಯವನ್ನು “ಅಸಂಖ್ಯ ಪ್ರಮಥರ ಗಣಮೇಳ’ದ ಮೂಲಕ ಸಾಕಾರ ಗೊಳಿಸುವ ಪ್ರಯತ್ನ ನಡೆದಿದೆ.

ಇವು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವ ಮೂರ್ತಿ ಮುರುಘಾ ಶರಣರ ಆಶಯ ನುಡಿಗಳು. ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಬಸವ ಕೇಂದ್ರಗಳು, ಬಸವ ಸಂಘ ಟನೆ ಗಳು, ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ಸರ್ವ ಜನಾಂಗದ ಮಠಾಧೀಶರ ಸಹಯೋಗದಲ್ಲಿ ಭಾನು ವಾರ ಬೆಂಗಳೂರಿನಲ್ಲಿ ಐತಿಹಾಸಿಕ ಶಿವಯೋಗ ಸಂಭ್ರಮ “ಅಸಂಖ್ಯ ಪ್ರಮಥರ ಗಣಮೇಳ’ ಹಾಗೂ ಸರ್ವ ಶರಣರ ಸಮ್ಮೇಳನ ಆಯೋಜಿಸಿದೆ. ಈ ಹಿನ್ನೆಲೆ ಯಲ್ಲಿ ಶಿವಮೂರ್ತಿ ಮುರುಘಾ ಶರಣರು ಗಣಮೇಳ ಆಯೋಜನೆಯ ಆಶಯ, ಸದುದ್ದೇಶ, ಪ್ರಯತ್ನಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದು, ಅದರ ಸಂಕ್ಷಿಪ್ತ ಸಾರ ಹೀಗಿದೆ.

* ಇಂದಿನ ಆಧುನಿಕ ಜಗತ್ತಿನಲ್ಲಿ ದಿನ ಬೆಳಗಾದರೆ ಅಪರಾಧೀಕರಣ ಕಾಣುತ್ತಿದ್ದೇವೆ. ಜಾಗತೀಕರಣದ ಜತೆಗೆ, ಅಪರಾಧೀಕರಣ ಸಾಮಾನ್ಯವಾಗುತ್ತಿದೆ. ಈ ಅಪ ರಾಧೀ ಕರಣದ ಪ್ರವೃತ್ತಿ ಎಲ್ಲ ವಯೋ ಮಾನ ದವರಲ್ಲಿ ಕಾಣುತ್ತಿದೆ. ಶುದ್ಧೀಕರಣದತ್ತ ಸಾಗಬೇಕಿದ್ದ ಬದುಕು ದುರ್ದೈವವಶಾತ್‌ ಅಪರಾಧಿಕರಣವಾಗುತ್ತಿದೆ.

* ಇಡೀ ಸಮಾಜ, ವ್ಯವಸ್ಥೆ ಒಂದಲ್ಲ ಒಂದು ರೀತಿ ಯಲ್ಲಿ ಅಪರಾಧಕ್ಕೆ ಹತ್ತಿರವಾಗುತ್ತಿರುವುದು ಒಳ್ಳೆಯ ವಿದ್ಯಮಾನವಲ್ಲ. ಸಣ್ಣ ಪುಟ್ಟ ಕಾರಣಗಳಿಗೂ ಕಾನೂನು ಕೈಗೆತ್ತಿಕೊಳ್ಳುವ, ಶಸ್ತ್ರಾಸ್ತ್ರ ತೆಗೆದುಕೊಳ್ಳುವ ಸಂದರ್ಭ ಸಾಮಾನ್ಯವಾಗುತ್ತಿದೆ. ಮಾನವ ಒಂದು ಹಂತದಲ್ಲಿ ವಿವೇ ಚನೆಯನ್ನೇ ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಅನುಮಾನ ಮೂಡುತ್ತದೆ.

* ವಿವೇಕದ ನಡೆ-ನುಡಿ ಮಾಯವಾಗಿ ಅವಿವೇಕದ ವರ್ತನೆ, ಮಾತುಗಳು ಹೆಚ್ಚಾಗುತ್ತಿದ್ದು, ಇವು ಪುನರಾವರ್ತನೆಯಾಗುತ್ತಿವೆ. ಜಗತ್ತು ಹಿಂಸೆಯ ಕಡೆಗೆ ವಾಲುತ್ತಿದೆಯೋ ಏನೋ ಎಂಬ ಆತಂಕ ಮೂಡುತ್ತಿದೆ. ಹಿಂಸೆ ಇರುವ ಕಡೆ ಅಶಾಂತಿ ಇರುತ್ತದೆ. ಅಶಾಂತಿಯ ಮುಂದಿನ ಹಂತವೇ ಹಿಂಸೆ, ದೌರ್ಜನ್ಯ. ಇಂದು ಎಲ್ಲ ಕ್ಷೇತ್ರ, ಹಂತ, ಸ್ತರಗಳಲ್ಲಿ ಅಪರಾಧೀಕರಣವಾಗುತ್ತಿದೆ.

* ಪರಿಸರ ಮಾಲಿನ್ಯ ಕೇವಲ ನಿಸರ್ಗದಿಂದಷ್ಟೇ ಅಲ್ಲದೇ ಮಾನವ ಪ್ರೇರಿತವಾಗಿರುವ ಪ್ರಚೋದನೆಗಳಿಂದಲೂ ನಿರ್ಮಾಣವಾಗುತ್ತಿದೆ. ಪ್ರತಿಯೊಂದು ವಸ್ತು, ಜೀವಿಗೂ ಬೆಲೆಯಿದ್ದು, ಅದನ್ನು ಹಾಳು ಮಾಡಬಾರದು ಎಂಬ ಪ್ರಜ್ಞೆ ಕಾಣದಾಗುತ್ತಿದೆ. ಜಗತ್ತಿನಲ್ಲಿ ಎಲ್ಲವನ್ನೂ ಕೊಂಡು ಕೊಳ್ಳಬಹುದು. ಆದರೆ, ಜೀವವನ್ನು ಕೊಡಲು, ಪಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಉದಾಸೀನ ಮನೋಭಾವ ತೋರುವುದು ಇನ್ನೊಂದು ಸಮಸ್ಯೆ. ಇದಕ್ಕೆಲ್ಲಾ ಅಜ್ಞಾನ, ಮೂರ್ಖತನ ಕಾರಣವಾಗಿದೆ.

* ಇಂದು ಎಲ್ಲ ಕ್ಷೇತ್ರಗಳಲ್ಲಿ ನೈತಿಕತೆಯ ಕುಸಿತವನ್ನು ಕಾಣುತ್ತಿದ್ದೇವೆ. ನೈತಿಕತೆ ಎಂದರೆ ಬದುಕಿನ ಬದ್ಧತೆ. ಆದರೆ, ಬದುಕಿನ ಬದ್ಧತೆಯೇ ಇಲ್ಲವಾಗುತ್ತಿದೆ. ಮನುಷ್ಯನಿಗೆ ಮುಖ್ಯವಾಗಿ ಬದ್ಧತೆಯ ಪಾಠದ ಅಗತ್ಯವಿದೆ. ಬಸವಾದಿ ಶರಣರು ಎಂದರೆ ಬದ್ಧತೆಯ ಮೇಲೆ ಬದುಕನ್ನು ಕಟ್ಟಿಕೊಂಡವರು. “ನಾವಳಿದರೂ ಅಡ್ಡಿಯಿಲ್ಲ, ಅನ್ಯರಿಗೆ ಅಪಾಯವಾಗಬಾರದು’ ಎಂಬ ಮಾನವ ಸಹಜ ಕಾಳಜಿಯೊಂದಿಗೆ ಅವರು ಜೀವನ ಸಾಗಿಸಿದರು.

ಆದರೆ, ಇಂದು ಎಲ್ಲವೂ ಉಲ್ಪಾಪಲ್ಟಾ ಆಗಿದೆ. “ನೀ ಅಳಿದರೂ ಅಡ್ಡಿಯಿಲ್ಲ, ನಾನು ಉಳಿಯ ಬೇಕು’ ಎಂಬ ಮನೋಭಾವ ಹೆಚ್ಚುತ್ತಿದೆ. ವ್ಯವಸ್ಥೆ ಅಳಿದರೂ ಅಡ್ಡಿಯಿಲ್ಲ. ನಾನು ಉಳಿಯಬೇಕು ಎಂಬ ಸ್ವಾರ್ಥಪರ ಚಿಂತನೆ ಹೆಚ್ಚುತ್ತಿದೆ. ಅಹಿತಕರ ವಿದ್ಯಮಾನ ವೆಂದರೆ ಹಿಂಸಾಚಾರ, ಅತ್ಯಾಚಾರ, ಭ್ರಷ್ಟಾಚಾರಗಳು ಹೆಚ್ಚಾಗುತ್ತಿವೆ. ಭೌತಿಕ ಬಂಧನ, ದಾಸ್ಯ ಹೆಚ್ಚಾಗುತ್ತಿದ್ದು, ಬೌದ್ಧಿಕ ಮಟ್ಟ ಇಲ್ಲವಾಗುತ್ತಿದೆ.

ಸಮಸ್ಯೆಯ ಮೂಲ
* ಇಂದಿನ ಶಿಕ್ಷಣ ಅಂಕ ಆಧಾರಿತವಾಗಿದೆ. ಮಕ್ಕಳು ಇಂತಿಷ್ಟು ಅಂಕ ಗಳಿಸಲೇಬೇಕು ಎಂದು ಪೋಷಕರು ಬಯಸುತ್ತಾರೆ. ಗುಣ ಆಧಾರಿತ ಶಿಕ್ಷಣ ಇಲ್ಲದಾಗಿದೆ. ಅಂಕ ಗಳಿಕೆ ಜೊತೆಯಲ್ಲಿ ಗುಣಗಳನ್ನೂ ರೂಢಿಸಿ ಕೊಳ್ಳಬೇಕು. ಅಂಕ ಆಧಾರಿತ, ಹಣ ಕೇಂದ್ರಿತ ಶಿಕ್ಷಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಪ್ರಚೋದಿಸುತ್ತಿದ್ದಾರೆ ಎನಿಸುತ್ತದೆ. ಮುಂದೆ ಅದೇ ಮನೋಭಾವ ಪೋಷ ಕರು ಮತ್ತು ಮಕ್ಕಳು ದೂರವಾಗುವ ಸನ್ನಿವೇಶದ ಸೃಷ್ಟಿಗೆ ಕಾರಣವಾಗಬಹುದು. ಈ ಪ್ರಕ್ರಿಯೆಯಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬುದು ಏಕೆ ಅರ್ಥವಾಗುತ್ತಿಲ್ಲವೋ ಗೊತ್ತಾಗದು.

* ಮಕ್ಕಳಿಗೆ ಪಠ್ಯಕ್ರಮವಿರುವಂತೆ ನೈತಿಕ ಕ್ರಮವಿರ ಬೇಕು. ಬದುಕಿಗೆ ಬೇಕಾದ ನೈತಿಕ ಕ್ರಮ ಪಾಲನೆಗೆ ಒತ್ತು ನೀಡಬೇಕು. ಈ ನೈತಿಕ ಕ್ರಮಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಹೋದರೆ ಅವರ ಬದುಕು ನೈತಿ ಕತೆಯ ಕ್ರಮ ತಪ್ಪದು. ವಂಚನೆ, ಶೋಷಣೆ, ಅಸ್ಪೃಶ್ಯತೆ ಇಲ್ಲದ ಅನಾಗರಿಕ, ಅಮಾನವೀಯವಲ್ಲದ ಒಂದು ಸಮಾಜ ನಿರ್ಮಾಣವಾಗಬೇಕು ಎಂಬ ಆಶಯ, ಉದ್ದೇಶದೊಂದಿಗೆ ಅದನ್ನು ಸಾಕಾರಗೊಳಿಸಲು ಪ್ರಯತ್ನ ನಡೆಯಲಿದೆ.

ಚಿಂತನೆ ಮೂಡಿದ್ದು ಹೇಗೆ?: ಹಿಂದೆ ಬಸವಣ್ಣನವರ ನೇತೃತ್ವದಲ್ಲಿ 1.96 ಲಕ್ಷ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಇತಿಹಾಸದ ಒಂದು ರೋಚಕ ಅಂಶ. ಅದನ್ನು 21ನೇ ಶತಮಾನದಲ್ಲಿ ನೆನಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಬೇರೆ, ಬೇರೆ ಆಯಾಮಗಳ ಮೂಲಕ ಇದನ್ನು ನಿರಂತರವಾಗಿಟ್ಟುಕೊಳ್ಳಲು ಪ್ರಯತ್ನಿಸಲಾಗುವುದು. ಕಳೆದ 30 ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬೆಂಗಳೂರಿನಲ್ಲೂ ಶರಣ ಸಂಸ್ಕೃತಿ ಉತ್ಸವ, ಶಿವಯೋಗ ಸಂಭ್ರಮ ಆಯೋಜಿಸಲಾಗುತ್ತಿದೆ.

ಇದಕ್ಕೆ ಸಾಕಷ್ಟು ಮಂದಿ ಒಲವು ತೋರುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಆ ಜನರ ಅಪೇಕ್ಷೆಯಂತೆ ಅಸಂಖ್ಯ ಪ್ರಮಥರ ಗಣಮೇಳ ಆಯೋಜನೆಯಾಗಿದೆ. ಗಣಮೇಳದಲ್ಲಿ ಭವಿಷ್ಯದ ಪ್ರಜೆಗಳೆನಿಸಿದ ಯುವಜನತೆಯ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿದೆ. ಭಾನುವಾರ ಮುಂಜಾನೆಯ ಶಿವಯೋಗದಲ್ಲಿ ವಿದ್ಯಾರ್ಥಿ ಸಮೂಹವೂ ಪಾಲ್ಗೊಳ್ಳಲಿದೆ. ಉಪನ್ಯಾಸ, ಪ್ರವಚನಕ್ಕಿಂತ ಚಿಂತನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ರೀತಿಯ ಮೇಳ ಸಂಘಟಿಸುವ ಉದ್ದೇಶವಿದೆ.

ಬಸವಣ್ಣನವರ ಸಂದೇಶ, ಬೋಧನೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮುಂದುವರಿಯಲಿದೆ. ಬಸವ ತತ್ವ ಎಂದರೆ ಬಿಡುಗಡೆಯ ತತ್ವ. ಅದನ್ನು ಪ್ರತಿಪಾದಿಸಲಾಗುವುದು. ಒಂದೇ ಒಂದು ಸಮಾವೇಶದ ಮುಖಾಂತರ ಇಡೀ ಜನಸಮೂಹದ ಬದುಕನ್ನು ಪರಿವರ್ತನೆ ಮಾಡುತ್ತೇವೆ ಎಂಬ ಭ್ರಮೆ ಇಲ್ಲ. ಇಂತಹ ಸಮಾವೇಶ ನಿರಂತರವಾಗಿ ನಡೆಯುತ್ತಿರಬೇಕು. ಶ್ರಮ ಹಾಕಿದಾಗ ಶರೀರದಿಂದ ಬೆವರು ಬರುತ್ತದೆ. ಆ ಕೊಳೆಯನ್ನು ತೊಳೆದುಕೊಳ್ಳಬೇಕಾಗುತ್ತದೆ. ಹಾಗೆಯೇ ನಾವು ಅಂತರಂಗ, ಬಹಿರಂಗ ಶುದ್ಧಿ ಮಾಡಿಕೊಳ್ಳುವುದು ಅನಿವಾರ್ಯ.

ನಾನೊಬ್ಬ ಆಶಾವಾದಿಯಾಗಿದ್ದೇನೆ. ಆಶಾವಾದಿಯಾಗಿಯೇ ಈ ಪ್ರಯತ್ನ ಮಾಡುತ್ತಿದ್ದೇನೆ. ಜನರೂ ಸ್ಪಂದಿಸುವ ನಿರೀಕ್ಷೆ ಇದೆ. ಶರಣರದು ಜೀವಪರ ಹಾಗೂ ಸರ್ವಶರಣ ಪರ ಧೋರಣೆಯಾದರೆ ಇಂದಿನ ಬಹುತೇಕ ಜನರಲ್ಲಿ ಸ್ವಾರ್ಥಪರವಾದ ಧೋರಣೆ ಕಾಣುತ್ತಿದೆ. ಮಾನವೀಯ ಮೌಲ್ಯಗಳು, ದಾರ್ಶನಿಕರ ಆದರ್ಶಗಳಿಗೆ ಆ ಕಾಲ- ಈ ಕಾಲ ಎಂಬುದಿಲ್ಲ. ಎಲ್ಲ ಕಾಲದಲ್ಲೂ ಅವುಗಳಿಗೆ ಮಹತ್ವ ಇದ್ದೇ ಇರುತ್ತದೆ. ಅದನ್ನು ಪ್ರತಿಪಾದಿಸಿ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮುಂದುವರಿಸುತ್ತೇವೆ.

ಜನರಲ್ಲಿ ಸ್ವಾರ್ಥಪರ ಧೋರಣೆ ಹೆಚ್ಚಾಗುತ್ತಿದೆ. ಹಣದ ದಾಹ ಅಧಿಕವಾಗುತ್ತಿರುವುದರಿಂದ ಗುಣದ ಕಡೆಗಿನ ತುಡಿತ ಕಡಿಮೆಯಾಗುತ್ತಿದೆ. ಹಣವೇ ಸರ್ವಸ್ವ ಎಂದು ತಿಳಿದವರಿಗೆ ಒಂದು ದಿನ ಹಣ ಅಳಿಯುತ್ತದೆ. ಗುಣ ಶಾಶ್ವತವಾಗಿ ಉಳಿಯುತ್ತದೆ ಎಂಬು ದನ್ನು ಅರ್ಥಪಡಿಸಬೇಕಿದೆ. ಗಣ ಅಂದರೆ ಗುಣ. ಗುಣ ಎಂದರೆ ಗಣ. ಗಣ+ಗುಣ = ಕಲ್ಯಾಣ. ಇದೊಂದು ಲೆಕ್ಕ!
-ಶಿವಮೂರ್ತಿ ಮುರುಘಾ, ಶರಣರು, ಮುರುಘಾ ಮಠ

ಟಾಪ್ ನ್ಯೂಸ್

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

Team India;  key players to miss England series; young batsman takes on leadership role

Team India: ಇಂಗ್ಲೆಂಡ್‌ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್‌ ಗೆ ನಾಯಕತ್ವದ ಹೊಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; Three teams formed to investigate microfinance loan fraud case: Satish Jarkiholi

Belagavi; ಮೈಕ್ರೋಫೈನಾನ್ಸ್‌ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ

Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು

Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು

Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ

Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.