![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 7, 2020, 6:15 AM IST
ಉಡುಪಿ: ಆಗಸದಲ್ಲಿ ಎ. 7ಮತ್ತು 8ರಂದು ರಾತ್ರಿ ವಿಸ್ಮಯ ಗೋಚರಿಸಲಿದೆ. ವರ್ಷದಲ್ಲೇ ಅತೀ ದೊಡ್ಡ ಚಂದ್ರ ಅಂದು ಆಗಸದಲ್ಲಿ ಗೋಚರಿಸಲಿದ್ದಾನೆ. ಭಾರತದಲ್ಲಿ 8ರಂದು ಹುಣ್ಣಿಮೆ. ಆದರೆ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿ ಬರುವುದು 8ರ ಬೆಳಗ್ಗೆ 8 ಗಂಟೆಗೆ. ಹಾಗಾಗಿ 7 ಹಾಗೂ 8ರ ರಾತ್ರಿ ಹುಣ್ಣಿಮೆ ಚಂದ್ರ ಮಾಮೂಲಿ ಕಾಣುವುದಕ್ಕಿಂತ ಸುಮಾರು 15 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ. ಈ ವರ್ಷ ಮಾರ್ಚ್, ಎಪ್ರಿಲ್, ಮೇ ಅನಂತರ ಸೆಪ್ಟಂಬರ್, ಅಕ್ಟೊಬರ್ ಹಾಗೂ ನವೆಂಬರ್‌ಗಳಲ್ಲಿ ಹುಣ್ಣಿಮೆ ಸೂಪರ್ ಮೂನ್‌ಗಳಾದರೂ ನಾಳಿನದ್ದು ಅತೀ ಸಮೀಪ ದರ್ಶನವಾಗಿರುತ್ತದೆ ಎಂದು ಭೌತಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.