ಬುಧವಾರದ ರಾಶಿಫಲ: ಈ ರಾಶಿ ಅವರಿಗಿಂದು ದೀರ್ಘ ಪ್ರಯಾಣದಿಂದ ಲಾಭ ಉತ್ತಮ ಧನಾರ್ಜನೆಯಾಗಲಿದೆ
Team Udayavani, Mar 8, 2023, 7:15 AM IST
ಮೇಷ: ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ದೀರ್ಘ ಪ್ರಯಾಣದಿಂದ ಲಾಭ ಉತ್ತಮ ಧನಾರ್ಜನೆ. ಆರೋಗ್ಯದಲ್ಲಿ ಸಣ್ಣ ಕಿರಿಕಿರಿ. ಆಸ್ತಿ ಸಂಚಯನ. ನೂತನ ಮಿತ್ರರ ಭೇಟಿ. ಮಾತೃಸಮಾನರಿಂದ ಸಂತೋಷ ವೃದ್ಧಿ.
ವೃಷಭ: ಆರೋಗ್ಯ ಮಧ್ಯಮ. ಉತ್ತಮ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ದಾಂಪತ್ಯ ತೃಪ್ತಿದಾಯಕ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ.
ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಉತ್ತಮ ಬೆಳವಣಿಗೆ. ಅಧಿಕ ಧನಾರ್ಜನೆ. ಗುರಹಿರಿಯರ ಉತ್ತಮ ಮಾರ್ಗದರ್ಶನ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ.
ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಅಧಿಕ ಶ್ರಮ. ನಿರೀಕ್ಷಿಸಿದ ಸ್ಥಾನಮಾನ ಸಿಗಲಿಲ್ಲವೆಂದು ಚಿಂತೆ ಕಾಡೀತು. ಗುರುಹಿರಿಯರೊಂದಿಗೆ ಸಂಯಮದಿಂದ ವರ್ತಿಸಿ. ಬೇಸರಕ್ಕೆ ಅವಕಾಶ ನೀಡದಿರಿ. ಮಧ್ಯಮ ಧನಾರ್ಜನೆ.
ಸಿಂಹ: ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಂತೋಷ ವೃದ್ಧಿ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಂಯಮ ಇರಲಿ.
ಕನ್ಯಾ: ಗೃಹೋಪಕರಣ ವಸ್ತು ಸಂಗ್ರಹ. ಅನಿರೀಕ್ಷಿತ ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಬದಲಾವಣೆ. ಬಂಧುಬಳಗದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ದಾಂಪತ್ಯದಲ್ಲಿ ಸುಖ ಮಧ್ಯಮ. ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ತೃಪ್ತಿ.
ತುಲಾ: ಆರೋಗ್ಯ ವೃದ್ಧಿ ಮಕ್ಕಳ ವಿಷಯದಲ್ಲಿ ಅನಗತ್ಯ ಚಿಂತೆಗೆ ಅವಕಾಶ ಕೊಡದಿರಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ.
ವೃಶ್ಚಿಕ: ಸರಕಾರಿ ಕೆಲಸಗಳಲ್ಲಿ ಮುನ್ನಡೆ. ಅಧಿಕ ಧನಲಾಭ. ಸಂಸಾರದಲ್ಲಿ ಮಾನಸಿಕ ನೆಮ್ಮದಿ. ಸಹೋದರರಿಂದ ಸಂತಸ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆಗೆ ಸಿಲುಕದಿರಿ. ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.
ಧನು: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜಾಗ್ರತೆ ವಹಿಸಿ. ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರುವುದು. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಿ.
ಮಕರ: ಪಾರದರ್ಶಕತೆಗೆ ಆದ್ಯತೆ ನೀಡಿ. ಯಾರ ಮಾತಿಗೂ ಮರುಳಾಗದಿರಿ. ಉದ್ಯೋಗ ವ್ಯವ್ಯಹಾರಗಳಲ್ಲಿ, ಆಸ್ತಿವಿಚಾರಗಳಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಅನ್ಯರ ಸಹಾಯ ಅಪೇಕ್ಷಿಸದೇ ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ.
ಕುಂಭ: ನಯವಿನಯದಿಂದ ಕಾರ್ಯ ಪ್ರವೃತ್ತರಾಗಿ. ಯಾವುದೇ ಆತುರದ ನಿರ್ಧಾರ ಮಾಡದಿರಿ. ಪರರ ಮಾತನ್ನು ಆಲಿಸುವಾಗ ನಿಮ್ಮ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುಟ್ಟನ್ನು ಕಾಪಾಡಿಕೊಳ್ಳಿ. ಉತ್ತಮ ಧನಸಂಪತ್ತು ವೃದ್ಧಿ.
ಮೀನ: ಮಾತಿನಲ್ಲಿ ತಾಳ್ಮೆ ಇರಲಿ. ದಾಂಪತ್ಯ ತೃಪ್ತಿಕರ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ. ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ ಪ್ರತಿಸ್ಪರ್ಧಿಗಳಿಗೆ ಅವಕಾಶವಿಲ್ಲದಂತೆ ಕಾರ್ಯಮಗ್ನರಾಗಿ. ಉತ್ತಮ ಧನಾರ್ಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.