ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಕೆನಡಾ : 2020ರ ಕೂಟದಲ್ಲಿ ಭಾಗವಹಿಸದಿರಲು ಕೆನಡಾ ನಿರ್ಧಾರ
Team Udayavani, Mar 24, 2020, 12:45 AM IST
ಮಾಂಟ್ರಿಯಲ್: ಟೋಕಿಯೊ ಒಲಿಂಪಿಕ್ಸ್‌ಗೆ ಮೊದಲ “ಹಿನ್ನಡೆಯ ಬಿಸಿ’ ತಟ್ಟಿದೆ. ಕೊರೊನಾ ಭೀತಿಯ ಕಾರಣದಿಂದಾಗಿ ಕೆನಡಾ ಈ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಆಸ್ಟ್ರೇಲಿಯ ಕೂಡ ಇದೇ ಹಾದಿಯಲ್ಲಿದ್ದು, ಅದು 2021ರ ಒಲಿಂಪಿಕ್ಸ್ ತಯಾರಿ ನಡೆಸಿ ಎಂದು ತನ್ನ ಕ್ರೀಡಾಪಟುಗಳಿಗೆ ಸೂಚಿಸಿದೆ.
ಸೋಮವಾರ ಕೆನಡಿಯನ್ ಒಲಿಂಪಿಕ್ ಕಮಿಟಿ (ಸಿಒಸಿ) ಮತ್ತು ಕೆನಡಿಯನ್ ಪ್ಯಾರಾಲಿಂಪಿಕ್ ಕಮಿಟಿ (ಸಿಪಿಸಿ) ಸೇರಿಕೊಂಡು ಒಲಿಂಪಿಕ್ಸ್ ನಿಂದ ದೂರ ಉಳಿಯುವ ತೀರ್ಮಾನ ತೆಗೆದುಕೊಂಡವು. ಇದಕ್ಕೆ ದೇಶದ ಆ್ಯತ್ಲೀಟ್ಸ್ ಕಮಿಷನ್ಸ್, ರಾಷ್ಟ್ರೀಯ ಕ್ರೀಡಾ ಸಂಘಟನೆಗಳು, ಕೆನಡಾ ಸರಕಾರ ಸಂಪೂರ್ಣ ಬೆಂಬಲ ಸೂಚಿಸಿವೆ. ಇದೊಂದು ಕಠಿನ ನಿರ್ಧಾರವಾಗಿದ್ದು, ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮುಂದೂಡಬೇಕೆಂಬುದೇ ತಮ್ಮ ಪ್ರಮುಖ ಉದ್ದೇಶ ಎಂದು ಸಿಒಸಿ ಸ್ಪಷ್ಟಪಡಿಸಿದೆ.
ಮುಂದೂಡಿದರೆ ಬೆಂಬಲ
ಕೆನಡಾದ ಈ ನಿರ್ಧಾರದಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಿದಂತಾಗಿದೆ. ಅದು ಮುಂದಿನ 4-5 ವಾರಗಳಲ್ಲಿ, ಎಲ್ಲ ರಾಷ್ಟ್ರಗಳ ಒಲಿಂಪಿಕ್ ಸಮಿತಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ನಿರ್ಧಾರಕ್ಕೆ ಬರುವುದಾಗಿ ಹೇಳಿತ್ತು. ಆದರೆ ಅಲ್ಲಿಯ ತನಕ ಕಾಯಲು ತಾನು ಸಿದ್ಧವಿಲ್ಲ ಎಂಬುದಾಗಿ ಕೆನಡಿಯನ್ ಒಲಿಂಪಿಕ್ ಕಮಿಟಿ ಸ್ಪಷ್ಟಪಡಿಸಿದೆ.
ಐಒಸಿ ಒಲಿಂಪಿಕ್ಸ್ ಕೂಟವನ್ನು ಕನಿಷ್ಠ ಒಂದು ವರ್ಷದ ಮಟ್ಟಿಗೆ ಮುಂದೂಡಲಿ, ಇದಕ್ಕೆ ತಾನು ಸಂಪೂರ್ಣ ಬೆಂಬಲ ನೀಡುವುದಾಗಿ ಸಿಒಸಿ ತಿಳಿಸಿದೆ.
“ಕ್ರೀಡಾಪಟುಗಳ ಹಾಗೂ ಸಾರ್ವ ಜನಿಕರ ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಕೊರೊನಾ ವೈರಸ್ ಇಷ್ಟೊಂದು ಭೀಕರವಾಗಿ ವಿಶ್ವಾದ್ಯಾಂತ ಕಾಡುತ್ತಿರುವಾಗ ಯಾರೂ ರಿಸ್ಕ್ ತೆಗೆದು ಕೊಳ್ಳಲು ಬಯಸುವುದಿಲ್ಲ. ಕ್ರೀಡಾಳುಗಳ, ಅವರ ಕುಟುಂಬದವರ ಹಾಗೂ ಇಡೀ ಕೆನಡಾದ ಹಿತ ಇದರಲ್ಲಿ ಅಡಗಿದೆ. ಇದು ಐಒಸಿಗೂ ಅರ್ಥವಾಗಬೇಕಿದೆ’ ಎಂಬುದಾಗಿ ಕೆನಡಿಯನ್ ಒಲಿಂಪಿಕ್ ಕಮಿಟಿ ಹೇಳಿದೆ.
ಮಾನವ ಸಂಕುಲದ ರಕ್ಷಣೆ
“ಐಒಸಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಗೊಳಿಸಿಲ್ಲ, ಮುಂದೂಡಿಕೆಯ ಸಾಧ್ಯತೆಯನ್ನು ತೆರೆದಿರಿಸಿದೆ. ಇದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಕೊರೊನಾ ಎಂಬುದೊಂದು ಜಾಗತಿಕ ಬಿಕ್ಕಟ್ಟು. ಆರೋಗ್ಯ ಸುಧಾರಣೆ ಹಾಗೂ ವೈರಸ್ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಮಾನವ ಸಂಕುಲವನ್ನು ರಕ್ಷಿಸುವುದು ಸಾಂ ಕ ಜವಾಬ್ದಾರಿ. ಹೀಗಾಗಿ ಟೋಕಿಯೊ ಒಲಿಂಪಿಕ್ಸ್ ಮುಂದೂಡುವ ಪ್ರಸ್ತಾವವನ್ನು ಐಒಸಿ ಒಪ್ಪಿಕೊಳ್ಳಲಿದೆ ಎಂದು ನಾವು ನಂಬಿದ್ದೇವೆ’ ಎಂದು ಕೆನಡಿಯನ್ ಒಲಿಂಪಿಕ್ ಕಮಿಟಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.