ಸಾಸ್ತಾನ: ಟೋಲ್‌ಗೇಟ್: ಬೆಳಗ್ಗೆ ವಾಹನ ದಟ್ಟಣೆ; ಎರಡು ಗೇಟ್ ವ್ಯವಸ್ಥೆಗೆ ಸೂಚನೆ
Team Udayavani, Apr 25, 2020, 5:16 AM IST
ಕೋಟ: ಸಾಸ್ತಾನ ಟೋಲ್‌ಪ್ಲಾಜಾದಲ್ಲಿ ಎರಡು ಕಡೆ ಒಂದೊಂದು ಗೇಟ್‌ಗಳ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು ಇದರಿಂದ ಪ್ರತಿದಿನ ಬೆಳಗ್ಗೆ 11ಗಂಟೆಯ ತನಕ ಟೋಲ್‌ನಲ್ಲಿ ವಾಹನದಟ್ಟಣೆ ಹೆಚ್ಚುತ್ತಿದ್ದು ತುರ್ತು ಕಾರ್ಯಗಳಿಗೆ ತೆರಳುವವರಿಗೆ ಸಮಸ್ಯೆಯಾಗುತ್ತಿದೆ. ಉಡುಪಿ ಕಡೆ ಸಂಚರಿಸುವ ಗೇಟ್‌ನಲ್ಲೇ ಅತೀ ಹೆಚ್ಚು ದಟ್ಟಣೆ ಉಂಟಾಗುತ್ತಿದ್ದು ವಾಹನಗಳು ಟೋಲ್‌ಗೇಟ್ ದಾಟಲು 5-10 ನಿಮಿಷ ಬೇಕಾಗುತ್ತಿದೆ.
ಸ್ಥಳೀಯರ ದೂರಿನ ಮೇರೆಗೆ ಟೋಲ್‌ಗೆ ಭೇಟಿ ನೀಡಿದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರು ಶುಕ್ರವಾರ ಟೋಲ್‌ಗೆ ಭೇಟಿ ನೀಡಿ ಎರಡು ಗೇಟ್‌ಗಳಲ್ಲಿ ವಾಹನ ಸಂಚರಿಸಲು ವ್ಯವಸ್ಥೆ ಮಾಡುವಂತೆ, ಸಾರ್ವಜನಿಕರಿಗೆ ಸಮಸ್ಯೆಯಾಗ ದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಫಾಸ್ಟ್ಯಾಗ್ ಸ್ಕ್ಯಾನರ್ ಕೊರತೆ
ಸ್ವಯಂಚಾಲಿತ ಫಾಸ್ಟ್ಯಾಗ್ ವ್ಯವಸ್ಥೆ ಸ್ಥಗಿತಗೊಂಡಿದ್ದು ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ಶುಲ್ಕ ಪಡೆಯಬೇಕಿದೆ. ಆದರೆ ಒಂದೇ ಯಂತ್ರ ಇರುವುದರಿಂದ ಎರಡು ಗೇಟ್‌ಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಯಂತ್ರದ ವ್ಯವಸ್ಥೆ ಮಾಡಿ ಬೆಳಗ್ಗೆ ಕಡ್ಡಾಯವಾಗಿ ಎರಡು ಗೇಟ್‌ಗಳನ್ನು ತೆರೆಯುವಂತೆ ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.