ಟೊಮೆಟೋ ದರ ಮತ್ತೆ ಏರಿಕೆ; ಇನ್ನಷ್ಟು ಹೆಚ್ಚಳ ಸಂಭವ; ಈರುಳ್ಳಿ ಬೆಲೆ ಇಳಿಕೆ
ಒಂದು ಲಿಂಬೆ ಹುಳಿಗೆ 10- 12 ರೂ.
Team Udayavani, May 9, 2022, 1:04 AM IST
ಕುಂದಾಪುರ: ಕಳೆದ ವಾರ 40-45 ರೂ. ಇದ್ದ ಟೊಮೆಟೋ ದರ ಈಗ ಮತ್ತೆ ಏಕಾಏಕಿ ಭಾರೀ ಏರಿಕೆಯಾಗಿದೆ. ಕೆ.ಜಿ.ಗೆ 40 ರೂ. ಆಸುಪಾಸಿನಲ್ಲಿದ್ದ ದರ 70-80 ರೂ. ಆಗಿದೆ. ಕಾರ್ಯಕ್ರಮಗಳು ಹೆಚ್ಚಾಗಿದ್ದು, ಮಾರುಕಟ್ಟೆಗಳಿಗೆ ಬೇಡಿಕೆಯಷ್ಟು ಟೊಮೆಟೋ ಪೂರೈಕೆಯಾಗದೆ ದರ ಇನ್ನಷ್ಟು ಏರಿಕೆಯಾಗುವ ಸಂಭವವೂ ಇದೆ ಎನ್ನಲಾಗುತ್ತಿದೆ.
ಕಳೆದ ಡಿಸೆಂಬರ್ – ಜನವರಿಯಿಂದೀಚೆಗೆ ಇದು ಎರಡನೇ ಬಾರಿಗೆ ಟೊಮೆಟೋ ಬೆಲೆ ಈ ಪ್ರಮಾಣದಲ್ಲಿ ಏರಿದೆ. ಆಗಲೂ 80-90 ರೂ. ಆಸುಪಾಸಿನವರೆಗೆ ಹೆಚ್ಚಿತ್ತು. ಜೂ. 10 ವರೆಗೆ, ಅಂದರೆ ಮಳೆಗಾಲದ ವರೆಗೆ ದರ ಇದೇ ಸ್ಥಿತಿ ಇರಬಹುದು.
ಲಿಂಬೆಹುಳಿ ದುಬಾರಿ
ಬಿಸಿಲಿನ ಬೇಗೆ, ಸಮಾರಂಭಗಳು, ಪೂರೈಕೆ ಕೊರತೆಯಿಂದಾಗಿ ಲಿಂಬೆಹುಳಿಯ ಬೆಲೆಯೂ ಹೆಚ್ಚಿದೆ. ಸದ್ಯ ಒಂದು ಲಿಂಬೆ ಹುಳಿಯ ಬೆಲೆ 10-12 ರೂ. ಇದೆ. ಸ್ವಲ್ಪ ಸಮಯದ ಹಿಂದೆ 10 ರೂ.ಗೆ 4 ಲಿಂಬೆ ಸಿಗುತ್ತಿತ್ತು. ಆಗ ಒಂದು ಚೀಲ (1 ಸಾವಿರ ಲಿಂಬೆ)ಕ್ಕೆ 1,500 ರೂ. ಇದ್ದುದು ಈಗ 6-7 ಸಾವಿರ ರೂ. ಆಗಿದೆ.
ಈರುಳ್ಳಿ ಬೆಲೆ ಇಳಿಕೆ
ಬೀನ್ಸ್, ತೊಂಡೆ, ನುಗ್ಗೆ, ಬದನೆ, ಸೌತೆ ಸಹಿತ ಬಹುತೇಕ ಇತರ ತರಕಾರಿಗಳ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಈ ವಾರದಲ್ಲಿ ಈರುಳ್ಳಿ ಬೆಲೆ ಮಾತ್ರ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಮಾಧಾನ ತಂದಿದೆ. 30-35ರ ಆಸುಪಾಸಿನಲ್ಲಿದ್ದ ಈರುಳ್ಳಿ ದರ ಈಗ 20-25 ರೂ. ಆಸುಪಾಸಿನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.