ತೋಂಟದಾರ್ಯ ಮಠ- ಸಹೋದರತ್ವ ಮೂಡಿಸುವ “ರೊಟ್ಟಿ ಜಾತ್ರೆ”
Team Udayavani, Feb 23, 2024, 6:17 PM IST
ಉದಯವಾಣಿ ಸಮಾಚಾರ
ಡಂಬಳ: ಕೋಮು ಸೌಹಾರ್ದತಗೆ ಹಾಗೂ ಜಾತ್ಯತೀತ ಮನೋಭಾವ ಮೂಡಿಸುವಲ್ಲಿ ಹೆಸರುವಾಸಿಯಾದ ಡಂಬಳ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆ ವಿಜೃಂಭಣೆಯಿಂದ ಜರುಗಲಿದೆ.
ಗ್ರಾಮದ ತೋಂಟದಾರ್ಯ ಮಠದ 284ನೇ ಜಾತ್ರಾ ಮಹೋತ್ಸವ ನಿಮಿತ್ತ ಫೆ. 24 ರಥೋತ್ಸವ, ಫೆ. 25ರಂದು ಲಘು ರಥೋತ್ಸವ
ಜರುಗಲಿದೆ. ಜಾತ್ರೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ. ರೊಟ್ಟಿ ಜಾತ್ರೆಗೂ ಮುನ್ನ ನಡೆಯುವ
ತೋಂಟದಾರ್ಯ ರಥೋತ್ಸವ ವೈಶಿಷ್ಟ್ಯದಿಂದ ಕೂಡಿದೆ. ತೇರಿನ ಮುಂದೆ ತೋಂಟದಾರ್ಯ ಡಾ| ಸಿದ್ಧರಾಮ ಶ್ರೀಗಳು ನಡೆಯುತ್ತ ಸಾಗಿದರೆ, ಅವರ ಜೊತೆಯಲ್ಲಿ ಷಟಸ್ಥಲ ಜ್ಞಾನ ಸಾರಾಮೃತ ವಚನ ಸಂಪುಟಗಳ ಮೆರವಣಿಗೆ ಸಾಗುತ್ತದೆ. ಸಮಾಜದಲ್ಲಿ ಸಹೋದರತ್ವ ಭಾವ ಮೂಡಿಸುವ ಉದ್ದೇಶದಿಂದ ರೊಟ್ಟಿ ಜಾತ್ರೆ 1976ರಲ್ಲಿ ಡಂಬಳ ತೋಟದಾರ್ಯ ಮಠದಲ್ಲಿ ಲಿಂಗೈಕ್ಯ ಡಾ| ಸಿದ್ಧಲಿಂಗ ಸ್ವಾಮೀಜಿ ಪ್ರಾರಂಭಿಸಿದರು.
20 ಕ್ವಿಂಟಲ್ ಬಿಳಿ ಜೋಳದ ರೊಟ್ಟಿ: ಈ ಬಾರಿ 20 ಕ್ವಿಂಟಲ್ ಜೋಳದ ಹಿಟ್ಟು ಬಳಸಿ 40 ಸಾವಿರ ರೊಟ್ಟಿ ತಯಾರಿಸಲಾಗಿದೆ. ಡೋಣಿ, ಡೋಣಿ ತಾಂಡಾ, ಯಕ್ಲಾಸಪುರ, ಹೈತಾಪುರ ಗ್ರಾಮ ಸೇರಿ ಸುತ್ತಮುತ್ತಲಿನ ಭಕ್ತರ ಪ್ರತಿ ಮನೆಯಿಂದ 50 ರಿಂದ 100ಕ್ಕೂ ಅಧಿಕ ರೊಟ್ಟಿ ಸಿದ್ಧಪಡಿಸಿ ಚಕ್ಕಡಿ, ಟ್ರಾಕ್ಟರ್ ಮೂಲಕ ಮಠಕ್ಕೆ ತರುತ್ತಾರೆ.
ಕರಂಡಿ-ಖಡಕ್ ರೊಟ್ಟಿ ವಿಶೇಷ: ಜಾತ್ರೆಯಲ್ಲಿ ಖಡಕ್ ರೊಟ್ಟಿಯೊಂದಿಗೆ ಅಗಸಿ ಚಟ್ನಿ, ಮೊಸರು, ಗುರೆಳ್ಳು ಹಿಂಡಿ, ತರಕಾರಿ, ಭಜ್ಜಿ ಬಾನದ ಅನ್ನದ, ಗೋಧಿ ಹುಗ್ಗಿ, ವಿವಿಧ ತರಕಾರಿ ಪಲ್ಯ, ಸಿಹಿ ಪೊಂಗಲ್ ತಯಾರಿಸಲಾಗುತ್ತದೆ. ಎರಡು ವಾರದ ಹಿಂದೆಯೇ ವಿವಿಧ ತರಕಾರಿಯಿಂದ ಕರಂಡಿ ತಯಾರಿಸಲಾಗಿದೆ. ಹಾವೇರಿ, ಗದಗ, ಧಾರವಾಡ, ಕೊಪ್ಪಳ ಸೇರಿ ಸುತ್ತಲಿನ ಭಕ್ತರು
ರೊಟ್ಟಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಜಾತ್ಯತೀತ ಸಮಾಜ ಕಟ್ಟುವುದಕ್ಕಾಗಿ, ಸಮಾಜಗಳಲ್ಲಿ ಅಡಗಿರುವ ಮೌಡ್ಯ, ಅಂಧಕಾರ ಹೊಡೆದೊಡಿಸುವ ಉದ್ದೇಶದಿಂದ ಲಿಂ| ತೋಂಟದ ಡಾ| ಸಿದ್ಧಲಿಂಗ ಶ್ರೀ ರೊಟ್ಟಿ ಜಾತ್ರೆ ಆರಂಭಿಸಿದರು. ಈ ಬಾರಿ ತೋಂಟದ ಡಾ| ಸಿದ್ಧರಾಮ ಶ್ರೀ ಮಾರ್ಗದರ್ಶನದಲ್ಲಿ ರೊಟ್ಟಿ ಜಾತ್ರೆ ಆಚರಿಸಲಾಗುತ್ತದೆ.
ಜಾತ್ರಾ ಸಮಿತಿ ಅಧ್ಯಕ್ಷ
ಬಸವರಾಜ ಹಮ್ಮಿಗಿ,
*ವಿಜಯ ಸೊರಟೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ಗದಗ: ಜನಮಾನಸದಲ್ಲಿ ಅಚ್ಚಳಿಯದ ರಾಣಿ ಚನ್ನಮ್ಮ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.