ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಪರಿಕರಗಳು
Team Udayavani, Jun 20, 2019, 3:07 AM IST
ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ-2ಕ್ಕೆ ಇಸ್ರೋ ಸಜ್ಜಾಗಿದ್ದು, ಬೆಂಗಳೂರಿನ ಇಸ್ರೋ ಸ್ಪೇಸ್‌ಕ್ರಾಫ್ಟ್ ಇಂಟಿಗ್ರೇಷನ್ ಟೆಸ್ಟ್ ಎಸ್ಟಾಬ್ಲಿಷ್‌ಮೆಂಟ್(ಐಸೈಟ್)ನಲ್ಲಿ ಸಿದ್ಧಗೊಂಡ ಆರ್ಬಿಟ್, ಲ್ಯಾಂಡರ್ ಹಾಗೂ ರೋವರ್, ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ತಲುಪಿವೆ.
ಚಂದ್ರಯಾನ -2 ಪರಿಕರಗಳಾದ ಆರ್ಬಿಟ್ (ಕಕ್ಷೆಗಾಮಿ), ವಿಕ್ರಂ ಹೆಸರಿನ ಲ್ಯಾಂಡರ್ (ಚಂದ್ರನ ಮೇಲೆ ಪರಿಕರ ಇಳಿಸುವ ಸಾಧನ), ಪ್ರಗ್ಯಾನ್ ಹೆಸರಿನ ರೋವರ್ (ಚಂದ್ರನ ಮೇಲೆ ವಿವಿಧ ಪ್ರಯೋಗ ನಡೆಸುವ ರೋಬೋಟ್ ಸಾಧನ)ಗಳನ್ನು ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಸ್ಪೇಸ್‌ಕ್ರಾಫ್ಟ್ ಇಂಟಿಗ್ರೇಷನ್ ಟೆಸ್ಟ್ ಎಸ್ಟಾಬ್ಲಿಷ್‌ಮೆಂಟ್(ಐಸೈಟ್)ನಲ್ಲಿಯೇ ಸಿದ್ಧಪಡಿಸಲಾಗಿದೆ. ಈ ಎರಡೂ ಉಪಕರಣಗಳನ್ನು ಸಾಕಷ್ಟು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಸ್ರೋ ಚಂದ್ರಯಾನ-2ಕ್ಕೆ ದಿನಾಂಕ ನಿಗದಿ ಮಾಡಿದ ಬಳಿಕ ಅವುಗಳನ್ನು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜೂ.14ಕ್ಕೆ ಆರ್ಬಿಟ್ (ಕಕ್ಷೆಗಾಮಿ), ಜೂ.18ರ ಮಂಗಳವಾರ ವಿಕ್ರಂ ಲ್ಯಾಡರ್, ಪ್ರಜ್ಞಾನ್ ರೋವರ್ ಬಾಹ್ಯಾಕಾಶ ಕೇಂದ್ರ ತಲುಪಿವೆ. ಈ ಮೂರೂ ಪರಿಕರಗಳನ್ನು ಜುಲೈ 15ರಂದು ಅಂತರಿಕ್ಷ ವಾಹನ ಜಿಎಸ್‌ಎಲ್‌ವಿ ಮಾರ್ಕ್-3 ಚಂದ್ರನಲ್ಲಿ ಹೊತ್ತೂಯ್ಯಲಿದ್ದು, ಸೆಪ್ಟಂಬರ್ 6 ರಂದು ಚಂದ್ರನ ಅಂಗಳ ತಲುಪಲಿವೆ.
ಚಂದ್ರನಲ್ಲಿ ಕಾರ್ಯಾಚರಣೆ ಹೇಗೆ?: ಸೆ.6ರಂದು ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೆ„ ತಲುಪಲಿದ್ದು, ಆರ್ಬಿಟ್ ಚಂದ್ರನ ಕಕ್ಷೆಯನ್ನು ಮೇಲ್ಮೆ„ನಿಂದ 100 ಕಿ.ಮೀ. ಅಂತರದಲ್ಲಿ ಸುತ್ತಾಟ ನಡೆಸುತ್ತದೆ. ಇನ್ನೊಂದೆಡೆ, ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ರೋವರ್‌ನ್ನು ಇಳಿಸಲಿದೆ. ನಂತರ ರೋವರ್ ಚಂದ್ರನ ಮೇಲ್ಮೆ„ ಮೇಲೆ ಪ್ರತಿ ಸೆಕೆಂಡಿಗೆ 1 ಸೆಂ.ಮೀ.ನಷ್ಟು ವೇಗದಲ್ಲಿ ಚಲಿಸುತ್ತಾ ವಿವಿಧ ಪ್ರಯೋಗಗಳನ್ನು ನಡೆಸಲಿದೆ. ಆ ಪ್ರಯೋಗಗಳ ಮಾಹಿತಿಯನ್ನು ಲ್ಯಾಂಡರ್ ಮೂಲಕ ಚಂದ್ರನ ಕಕ್ಷೆ ಸುತ್ತುತ್ತಿರುವ ಆರ್ಬಿಟ್‌ಗೆ ತಲುಪಿಸುತ್ತದೆ. ನಂತರ ಆರ್ಬಿಟ್ ಭೂಮಿಯ ಇಸ್ರೋ ಕೇಂದ್ರಕ್ಕೆ ಮಾಹಿತಿಯನ್ನು ವರ್ಗಾಯಿಸುತ್ತದೆ.
ಚಂದ್ರಯಾನದ ಉದ್ದೇಶವೇನು?: ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸುವುದು, ನೀರಿನ ನಿಖರತೆಯನ್ನು ಇನ್ನಷ್ಟು ಖಚಿತ ಪಡಿಸಿಕೊಳ್ಳುವುದು, ಖನಿಜ ಸೇರಿ ಇತರ ಧಾತುಗಳನ್ನು ಪತ್ತೆ ಹಚ್ಚುವುದು ಯಾನದ ಉದ್ದೇಶ.
ಅಶೋಕ ಚಕ್ರ ಅಚ್ಚೊತ್ತಲಿದೆ: ಪ್ರಗ್ಯಾನ್ ರೋವರ್‌ನಲ್ಲಿ ಒಟ್ಟು ಆರು ಚಕ್ರಗಳಿದ್ದು, ಅವುಗಳಲ್ಲಿ ಎರಡೂ ಚಕ್ರಗಳಲ್ಲಿ ಒಂದು ಬದಿಯ ಚಕ್ರದಲ್ಲಿ ಅಶೋಕ ಚಕ್ರ, ಮತ್ತೂಂದರಲ್ಲಿ ಇಸ್ರೋ ಲಾಂಛನ ಹಾಕಲಾಗಿದೆ. ಲ್ಯಾಡರ್‌ನಲ್ಲಿ ತ್ರಿವರ್ಣ ಧ್ವಜ ಹಾಕಲಾಗಿದೆ. ಚಂದ್ರನ ಮೇಲೆ ರೋವರ್ ಸಂಚರಿಸುವಾಗ ಅಶೋಕ ಚಕ್ರ, ಇಸ್ರೋ ಲಾಂಛನವನ್ನು ಅಚ್ಚೊತ್ತಲಿದೆ. ಈ ಅಚ್ಚು ಚಂದ್ರನ ಮೇಲ್ಮೆ„ನಲ್ಲಿ ನೂರಾರು ವರ್ಷ ಉಳಿಯಲಿದೆ. ಈ ಕಾರ್ಯಾಚರಣೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಒಟ್ಟು 1 ಚಂದ್ರಮಾನ ದಿನ (14 ಭೂಮಿ ದಿನ) ಅಂದರೆ, ಸೆ.6 ರಿಂದ 20ರವರೆಗೆ ನಡೆಯಲಿದೆ.
* 2019ರ ಜುಲೈ 15ರಂದು ಜಿಎಸ್‌ಎಲ್‌ವಿ ಮಾರ್ಕ್-3 ಬಾಹ್ಯಾಕಾಶ ನೌಕೆ ಮೂಲಕ ಉಡಾವಣೆ. (3.8 ಟನ್ ತೂಕ) 14 ಪೇಲೋಡ್ಸ್ ಬಳಕೆ.
* ಜುಲೈ 15 ನಸುಕು 2 ಗಂಟೆ 51 ನಿಮಿಷಕ್ಕೆ ಉಡಾವಣೆ. ಆ.1ರಂದು ಚಂದ್ರನ ಕಕ್ಷೆ ಪ್ರವೇಶ. ಸೆ. 6ರಂದು ಚಂದ್ರನ ಮೇಲ್ಮೆ„ ಸ್ಪರ್ಶ. ಸೆ.6 ರಿಂದ 20ರವರೆಗೆ ಕಾರ್ಯಾಚರಣೆ.
* ಆರ್ಬಿಟ್ ಆಯಸ್ಸು – 1 ವರ್ಷ. ತೂಕ – 2,378 ಕೆ.ಜಿ. ಚಂದ್ರನ ಮೇಲ್ಮೆ„ನಿಂದ 100 ಕಿ.ಮೀ ಅಂತರದಲ್ಲಿ ಸುತ್ತಾಟ.
* ಲ್ಯಾಂಡರ್ ಆಯಸ್ಸು – 14 ದಿನ, 1,471 ಕೆ.ಜಿ. (1 ಚಂದ್ರಮಾನ ದಿನ).
*ರೋವರ್ ಆಯಸ್ಸು – 14 ದಿನ. 27 ಕೆ.ಜಿ. (1 ಚಂದ್ರಮಾನ ದಿನ).
* ಚಂದ್ರಯಾನದ ಒಟ್ಟು ದೂರ – 3.84 ಲಕ್ಷ ಕಿ.ಮೀ.
* ಚಂದ್ರಯಾನ-2ರ ವೆಚ್ಚ – 603 ಕೋಟಿ ರೂ. ಬಾಹ್ಯಾಕಾಶ ನೌಕೆಯ ವೆಚ್ಚ – 375 ಕೋಟಿ ರೂ. ಒಟ್ಟು ವೆಚ್ಚ – 978 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.