ಮಕ್ಕಳ ಬಿಸಿಯೂಟಕ್ಕೆ ಹುಳ ಮಿಶ್ರಿತ ತೊಗರಿ ಬೇಳೆ : ಸಿಂಧನೂರು ತಾಲೂಕಿನಲ್ಲಿ ವ್ಯಾಪಕ ವಿರೋಧ
Team Udayavani, Feb 17, 2022, 7:19 PM IST
ಸಿಂಧನೂರು : ಹುಳು ಮಿಶ್ರಿತ ತೊಗರಿ ಬೇಳೆಯನ್ನು ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಆಯಾ ಶಾಲಾ ಮುಖ್ಯಸ್ಥರೇ ವಾಪಸ್ ಮಾಡಲಾರಂಭಿಸಿದ್ದಾರೆ.
ತಾಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಬೇಕಾಗುವ ಬೇಳೆಯಲ್ಲೂ ನಡೆದ ವ್ಯವಹಾರ ಇಂತಹ ಬೆಳವಣಿಗೆಗೆ ಕಾರಣವಾಗಿದೆ. ಆಯಾ ಶಾಲೆಗಳಿಗೆ ಆಹಾರ ನಾಗರಿಕ ಸರಬರಾಜು ನಿಗಮದಿಂದ ಪೂರೈಕೆಯಾಗಿದ್ದ ಬೇಳೆ ಗುಣಮಟ್ಟ ಸರಿಯಿಲ್ಲವೆಂದು ವಾಪಸ್ ಕಳಿಸಲಾಗಿದೆ. ಅದನ್ನು ಸ್ವೀಕರಿಸಿ, ಬೇರೆ ಬೇಳೆಯನ್ನು ಆಹಾರ ನಿಗಮದವರು ವರ್ಗಾಯಿಸಿ ಕೊಡಲಾರಂಭಿಸಿದ್ದಾರೆ.
ಏನಿದು ಸಮಸ್ಯೆ?:
ತಾಲೂಕಿನ 348 ಸರಕಾರಿ ಶಾಲೆಗಳಿಗೆ ಬಿಸಿಯೂಟಕ್ಕಾಗಿ 310 ಕ್ವಿಂಟಾಲ್ ತೊಗರಿ ಬೇಳೆಗೆ ಬೇಡಿಕೆಯಿದೆ. 54,084 ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕಲಬುರಗಿ ಶಿವಶಕ್ತಿ ಏಜೆನ್ಸಿಯವರ ಮೂಲಕ ತೊಗರಿ ಬೇಳೆಯನ್ನು ಪೂರೈಕೆ ಮಾಡಲಾಗಿದೆ. ಈ ಬೇಳೆಯನ್ನು ನೋಡುತ್ತಿದ್ದಂತೆ ತಾಲೂಕಿನ ಗೊಬ್ಬರಕಲ್, ಜವಳಗೇರಾ, ಸಿಂಗಾಪುರ ಶಾಲೆಯ ಸಿಬ್ಬಂದಿ, ಬಿಸಿಯೂಟಕ್ಕೆ ಬಳಸಲು ಸೂಕ್ತವಾಗಿಲ್ಲವೆಂದು ವಾಪಸ್ ಮಾಡಿದ್ದಾರೆ.
ಬದಲಾಯಿಸುತ್ತಿರುವ ಸಿಬ್ಬಂದಿ:
ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿ ಹಂಚಿಕೆಯಾದ ತೊಗರಿ ಬೇಳೆಯ ಪೈಕಿ 140 ಚೀಲಗಳನ್ನು ತೆಗೆದು ಇರಿಸಲಾಗಿದೆ. 70 ಕ್ವಿಂಟಾಲ್‍ನ್ನು ಟೆಂಡರ್ ಪಡೆದುಕೊಂಡಿರುವ ಸಂಸ್ಥೆಗೆ ವಾಪಸ್ ಕಳುಹಿಸಲಾಗಿದೆ.
ಇದನ್ನೂ ಓದಿ : ಮಲ್ಪೆಯ ರೆಸಾರ್ಟ್‌ನಲ್ಲಿ ಅನ್ಯ ಕೋಮಿನ ಜೋಡಿ ಪತ್ತೆ: ಪೊಲೀಸ್ ವಶಕ್ಕೆ
ಶಾಲಾ ಸಿಬ್ಬಂದಿ ಇದನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಬೆಳಕಿಗೆ ಬಂದಿದೆ. ಈಗಾಗಲೇ ಶಾಲೆಗಳಿಗೆ ತಲುಪಿರುವ ದಾಸ್ತಾನು ವಾಪಸ್ ನೀಡುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. 1,400 ಕ್ವಿಂಟಾಲ್ ಬೇಳೆಯನ್ನು ಕೊಟ್ಟಿರುವ ಸಂಸ್ಥೆಗೆ ಇದರಿಂದ ಬಿಸಿ ತಟ್ಟಲಾರಂಭಿಸಿದೆ.
ಮಾರುಕಟ್ಟೆ ದರ ವ್ಯತ್ಯಾಸ
ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿ ಮಾಡುತ್ತಿರುವ ತೊಗರಿ ಬೇಳೆಯ ಬೆಲೆ ಪ್ರತಿ ಕೆಜಿಗೆ 95-110 ರೂ.ದರವಿದೆ. ಆದರೆ, ಸರಕಾರದ ಅಕ್ಷರ ದಾಸೋಹ ಯೋಜನೆಗೆ ಪೂರೈಕೆ ಮಾಡುವ ಏಜೇನ್ಸಿಯವರು 84.50 ರೂ.ಗೆ ಸರಬರಾಜು ಮಾಡುತ್ತಿದ್ದಾರೆ. ಈ ಮಧ್ಯೆ ಉಳಿಕೆ ಮಾರ್ಗ ಅನುಸರಿಸಿದ ಪರಿಣಾಮ ಕಳಪೆ ಬೇಳೆ ಶಾಲೆಗಳಿಗೆ ತಲುಪಿವೆ.
ಆಹಾರ ನಿಗಮದ ಉಗ್ರಾಣದಲ್ಲಿ ಗೋಧಿ ಪಕ್ಕದಲ್ಲಿ ಬೇಳೆ ಇಟ್ಟಿರುವುದರಿಂದ ಹುಳು ಬಂದಿವೆ. ನಾನು ಭೇಟಿಗೆ ಹೋದಾಗ ಎಲ್ಲ ಕಡೆ ದೂರುಗಳಿಲ್ಲ. ಸಮಸ್ಯೆ ಇದ್ದ ಕಡೆಗಳಲ್ಲಿ ಆಹಾರ ನಿಗಮ ವ್ಯವಸ್ಥಾಪಕರು ತಕ್ಷಣವೇ ಬದಲಾವಣೆ ಮಾಡಿ ಕೊಟ್ಟಿದ್ದಾರೆ.
– ಶರಣಪ್ಪ, ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ ಯೋಜನೆ, ಸಿಂಧನೂರು
– ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.