ತೊಗರಿ ಕಟ್ಟಿಗೆ ಮರು ಬಳಕೆಯಿಂದ ಲಾಭ
Team Udayavani, Apr 6, 2022, 11:45 AM IST
ಆಳಂದ: ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬೆಳೆ ಫಸಲಿನೊಂದಿಗೆ ಅದರ ಕಟ್ಟಿಗೆಯನ್ನು ಸಮರ್ಪಕವಾಗಿ ಕೊಳೆಸಿ ಭೂಮಿಗೆ ಗೊಬ್ಬರವನ್ನಾಗಿ ಬಳಸಿದರೇ ಲಾಭ ಹೆಚ್ಚು. ಆದರೆ ರೈತರು ತೊಗರಿ ಕಟ್ಟಿಗೆಗೆ ಬೆಂಕಿ ಹಚ್ಚಿ ಬೂದಿ ಮಾಡುವವರೇ ಹೆಚ್ಚು.
ಕಟ್ಟಿಗೆ ಮರುಬಳಕೆ ಮಾಡಿಕೊಳ್ಳಲು ಇದರ ಲಾಗೋಡಿ ಆರ್ಥಿಕ ಹೊರೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಗೊಬ್ಬರ ಮಾಡಿ ಮಳೆಗಾಲದಲ್ಲಿ ಬಳಕೆ ಮಾಡಿದರೇ ಗೊಬ್ಬರ ಖರೀದಿಯಂತ ತಾಪತ್ರಯ ತಪ್ಪಿಸಬಹುದು. ಆದರೆ ಇದರ ಗೋಜಿಗೆ ಬಹುತೇಕರು ಹೋಗುವುದಿಲ್ಲ. ಹೀಗಾಗಿ ಕಲಬರಗಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತೊಗರಿ ಕಟ್ಟಿಗೆ ಮರುಬಳಕೆ ಕುರಿತು ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ.
ಮುಂಗಾರಿನ ಪ್ರಮುಖ ಬೆಳೆಯಾಗಿರುವ ತೊಗರಿ ಬೆಳೆ ವಾತಾವರಣದಲ್ಲಿರುವ ಸಾರ ಜನಕವನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಈ ಮಾಹಿತಿ ರೈತರಿಗೂ ತಿಳಿದಿದೆ. ಇದರ ಲಾಗೋಡಿ ಹೊರೆಯಾಗಿ ವಿಧಿಯಿಲ್ಲದೇ ರಸಗೊಬ್ಬರದ ಮೊರೆ ಹೋಗುವ ಪರಿಸ್ಥಿತಿ ಎದುರಿಸುತ್ತಾರೆ. ಇದಕ್ಕೆ ಪರಿಹಾರವಾಗಿ ತೊಗರಿ ಕಟ್ಟಿಗೆ, ಬೆಳೆಯುಳಿಕೆ ವರದಾನವಾಗಿದೆ. ಪ್ರತಿ ವರ್ಷ ತೊಗರಿ ಇಳುವರಿ ಜತೆಗೆ ಕಟ್ಟಿಗೆ ಉತ್ಪಾದನೆಯೂ ಹೆಚ್ಚಾಗುತ್ತದೆ. ಆದರೆ ಶೇ.90 ರಷ್ಟು ಉರುವಲುಗಾಗಿಯೇ ಈ ಕಟ್ಟಿಗೆ ಬಳಸುತ್ತಿರುವುದರಿಂದ ಅದರಲ್ಲಿನ ಉಪಯುಕ್ತ ಸಸ್ಯ ಪೋಷಕಾಂಶಗಳು ಬೆಳೆ ಉತ್ಪಾದನೆಯಲ್ಲಿ ಬಳಕೆಯಾಗುತ್ತಿಲ್ಲ. ಕಟ್ಟಿಗೆಯ ಸಮರ್ಥ ಬಳಕೆಯಿಂದ ಪ್ರಮುಖ ಪೋಷಕಾಂಶಗಳಾದ ಸಾರಜನಕ, ರಂಜಕ ಜತೆಗೆ ಲಘು ಪೋಷಕಾಂಶಗಳನ್ನೂ ಮಣ್ಣಿಗೆ ಒದಗಿಸಲು ಕೃಷಿಕರು ಮುಂದಾಗಬೇಕಾಗಿದೆ.
ತೊಗರಿ ಕಟ್ಟಿಗೆಯಲ್ಲಿನ ಪೋಷಕಾಂಶ
ತೊಗರಿ ಕಟ್ಟಿಗೆ ಸರಾಸರಿ ಶೇ.0.84 ಸಾರಜನಕ, 0.04 ರಂಜಕ ಹಾಗೂ ಶೇ. 0.35ರಷ್ಟು ಪೋಟ್ಯಾಷ್ ಪೋಷಕಾಂಶದ ಜತೆಗೆ ಲಘು ಪೋಷಕಾಂಶಗಳನ್ನು ಹೊಂದಿದೆ. ಆದರೆ ತೊಗರಿಕಟ್ಟಿಗೆ ಸದ್ಬಳಕೆಯಾಗದೇ ನಿರ್ಲಕ್ಷÂದಿಂದ ಅದರಲ್ಲಿನ ಪೋಷಕಾಂಶಗಳು ವ್ಯರ್ಥಗೊಳಿಸುತ್ತಿರುವುದು ಆಘಾತಕಾರಿ ಎನ್ನಲಾಗಿದೆ. ಈ ಕಟ್ಟಿಗೆಯನ್ನು ಸೂಕ್ತವಾಗಿ ಬೆಳೆ ಉತ್ಪಾದನೆಯಲ್ಲಿ ಮರುಬಳಕೆ ಮಾಡಿದರೆ ಬೆಳೆಯ ಇಳುವರಿಯ ಸ್ಥಿರತೆಯೊಂದಿಗೆ ಖರ್ಚಿಲ್ಲದೇ ಮಣ್ಣಿನ ಫಲವತ್ತತೆ ಸುಧಾರಿಸಿ ಉಳಿತಾಯಕ್ಕೆ ರೈತರು ಮುಂದಾಗಬೇಕಾಗಿದೆ.
ಕಟ್ಟಿಗೆ ಮಣ್ಣಿಗೆ ಸೇರಿಸಿ
ತೊಗರಿ ಕಾಯಿಗಳನ್ನು ರಾಶಿ ಮಾಡಿದ ನಂತರ ಉಳಿದ ಕಟ್ಟಿಗೆ ಮತ್ತು ಬೆಳೆಯ ಉಳಿಕೆಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ಯಂತ್ರೋಪಕರಣಗಳ ಸಹಾಯದಿಂದ ಕಟ್ಟಿಗೆಯನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ ಹೊಲದ ಮೇಲೆ ಹೊದಿಕೆಯಂತೆ ಹಾಕಿ ನಂತರ ಮುಂಗಾರಿನಲ್ಲಿ ರಂಟೆ ಹೊಡೆಯುವ ಮೂಲಕವೂ ಮಣ್ಣಿಗೆ ಸೇರಿಸಬಹುದು. ತೊಗರಿಕಟ್ಟಿಗೆ ಚಿಕ್ಕದಾಗಿ ತುಂಡರಿಸಿ ಅಥವಾ ಪುಡಿ ಮಾಡಿ ನೇರವಾಗಿ ಮಣ್ಣಿನಲ್ಲಿ ಸೇರಿಸುವುದು ಅಥವಾ ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್ ತಯಾರಿಕೆಯಲ್ಲಿ ಕಚ್ಚಾ ಸಾಮಗ್ರಿಯಾಗಿ ಬಳಸಬಹುದು.
ತೊಗರಿ ಕಟ್ಟಿಗೆ ಗೊಬ್ಬರವನ್ನಾಗಿಸಿ
ರಾಶಿಯಾದ ಮೇಲೆ ತೊಗರಿ ಕಟ್ಟಿಗೆ ಸುಡದೇ ಅದನ್ನು ಹಲವು ವಿಧಿಧಾನಗಳಲ್ಲಿ ಗೊಬ್ಬರ ರೂಪದಲ್ಲಿ ಭೂಮಿಗೆ ಹಾಕಿದರೆ ಸಾಕಷ್ಟು ಲಾಭವಿದೆ. ಇದಕ್ಕಾಗಿ ರೈತರು ಶ್ರಮವಹಿಸಬೇಕು. ಇದರಿಂದ ಗೊಬ್ಬರ ಖರೀದಿ ಹಣ ಉಳಿಸಿ ಅದೇ ಲಾಗೋಡಿ ಇಲ್ಲಿ ವ್ಯಯ ಮಾಡಿದರೆ ಭೂಮಿಯ ಫಲವತ್ತತೆ ಜೊತೆಗೆ ಪೋಷಕಾಂಶ ಹೆಚ್ಚಾಗಿ ಇಳುವರಿ ಅಧಿಕವಾಗುತ್ತದೆ. ರೈತರು ಈ ಕೆಲಸ ಮಾಡಿ ಲಾಭ ಮಾಡಿಕೊಳ್ಳಬೇಕು ಎನ್ನುತ್ತಾರೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ| ಜಹೀರ ಅಹೆಮದ್ ಹಾಗೂ ಡಾ| ಶ್ರೀನಿವಾಸ ಬಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.