![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Apr 13, 2022, 5:01 PM IST
ಪಣಜಿ: ಗೋವಾದ ಗಾಲಜೀಬಾಗ್ ಬೀಚ್‍ನಲ್ಲಿ ಈ ವರ್ಷ ಇದುವರೆಗೂ ಆಲಿವ್ ರಿಡಲೆ ಜಾತಿಯ ಆಮೆಗಳು ಆಗಮಿಸಿ 1162 ಮತ್ತು 28 ಸಾಗರಿ ಆಮೆಗಳು ಆಗಮಿಸಿ 2762 ಮೊಟ್ಟೆಗಳನ್ನು ಇಟ್ಟಿವೆ. ಗಾಲಜೀಬಾಗ್ ಬೀಚ್‍ನಲ್ಲಿ ಮೊಟ್ಟೆಗಳಿಂದ ಮರಿಗಳಾಗಿ ಹೊರಬಿದ್ದಿದ್ದ 2287 ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದೆ ಎಂದು ಖೋತಿಗಾಂವ ಅಭಯಾರಣ್ಯದ ಕ್ಷೇತ್ರ ಅರಣ್ಯಾಧಿಕಾರಿ ಅನಂತ ವೇಳಿಪ್ ಮಾಹಿತಿ ನೀಡಿದ್ದಾರೆ.
ಬದಲಾದ ವಾತಾವರಣದಿಂದಾಗಿ ಸಾಗರಿ ಆಮೆಗಳ ಆಗಮನ ವಿಳಂಬವಾಗಿದ್ದು,ಅಂತೆಯೇ ಮೊಟ್ಟೆಯೊಡೆದು ಮರಿಯಾಗುವ ಪ್ರಮಾಣ ಕೂಡ ಸಮಾಧಾನಕರವಾಗಿದೆ ಎಂದು ಅರಣ್ಯಾಧಿಕಾರಿ ಅನಂತ ವೇಳಿಪ್ ಮಾಹಿತಿ ನೀಡಿದರು.
ಗೋವಾದ ಗಾಲಜೀಬಾಗ್ ಸಮುದ್ರ ತೀರವನ್ನು ಅಧಿಕೃತವಾಗಿ ಆಮೆಗಳಿಗೆ ಮಾತ್ರ ಮೀಸಲಿಡಲಾಗಿದೆ. ಇದರಿಂದಾಗಿ ಇಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೆ ನಿರ್ಬಂಧವಿದೆ. ಪ್ರತಿ ವರ್ಷವೂ ಈ ಬೀಚ್‍ಗೆ ವಿವಿಧ ಪ್ರಜಾತಿಯ ಆಮೆಗಳು ಆಗಮಿಸಿ ಮೊಟ್ಟೆಯಿಡುವುದು ವಿಶೇಷವಾಗಿದೆ.
You seem to have an Ad Blocker on.
To continue reading, please turn it off or whitelist Udayavani.