Tourism: ಮೋದಿ ಭೇಟಿಯ ಇಂಪ್ಯಾಕ್ಟ್: ಗೂಗಲ್ನಲ್ಲಿ ಲಕ್ಷದ್ವೀಪಕ್ಕೆ ಸರ್ಚ್
ಮಾಲ್ದೀವ್ಸ್ ಬಿಟ್ಟು ಲಕ್ಷದ್ವೀಪದತ್ತ ಪ್ರವಾಸಿಗರ ಚಿತ್ತ
Team Udayavani, Jan 6, 2024, 12:42 AM IST
ಹೊಸದಿಲ್ಲಿ: ದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿಯೂ ತೆಗೆದುಕೊಂಡ ಕ್ರಮಗಳು ಹಲವು. 2024ರಲ್ಲಿ ಅಂಥ ಮೊದಲ ಪ್ರಯತ್ನವೇ ಯಶಸ್ಸು ನೀಡಿದ್ದು, ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಮೋದಿ ಭೇಟಿ ನೀಡಿದ ಬೆನ್ನಲ್ಲೇ ಗೂಗಲ್ನಲ್ಲಿ ಲಕ್ಷದ್ವೀಪದ ಕುರಿತು ಅತೀಹೆಚ್ಚು ಹುಡುಕಾಟ ನಡೆಸಲಾಗಿದೆ ಹಾಗೂ ಪ್ರವಾಸಿಗರು ಮಾಲ್ದೀವ್ಸ್ ಬಿಟ್ಟು ಲಕ್ಷದ್ವೀಪದತ್ತ ಚಿತ್ತಹರಿಸುತ್ತಿದ್ದಾರೆಂದು ತಿಳಿದುಬಂದಿದೆ.
ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ದಿನ ಭಾರತದಲ್ಲಿ 50,000ಕ್ಕೂ ಹೆಚ್ಚು ಬಾರಿ ಗೂಗಲ್ನಲ್ಲಿ ಲಕ್ಷದ್ವೀಪವನ್ನು ಸರ್ಚ್ ಮಾಡಲಾಗಿದ್ದು, ಆ ದಿನ ಸರ್ಚ್ ಆದ ಅಗ್ರ 9ನೇ ಪದವೂ ಇದೇ ಆಗಿದೆ. ಇನ್ನು ಅಲ್ಲಿನ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿ ಕೊಂಡಿದ್ದ ಮೋದಿ, ಪ್ರವಾಸಿಗರಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಎಂದೂ ಕರೆ ನೀಡಿದ್ದರು.
ಈ ಬೆನ್ನಲ್ಲೇ ಮಾಲ್ದೀವ್ಸ್ಗೆ ಹೋಗಬೇಕೆಂದುಕೊಂಡಿದ್ದ ಮಂದಿ ಲಕ್ಷದ್ವೀಪದ ಸೌಂದರ್ಯಕ್ಕೆ ಮರುಳಾಗಿ ಆ ಪ್ರದೇಶದ ಬಗ್ಗೆ ಹುಡುಕಾಟ ಹೆಚ್ಚಿಸಿರುವುದು ವರದಿಯಾಗಿದೆ. ಭಾರತದಿಂದಲೇ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದ್ದ ಮಾಲ್ದೀವ್ಸ್ಗೆ ಇದೀಗ ಲಕ್ಷದ್ವೀಪ ಪೈಪೋಟಿ ನೀಡಲಿದ್ದು, ಮೋದಿಯೇ ಇದಕ್ಕೆ ನಾಂದಿ ಹಾಡಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.