ಪ್ರವಾಸೋದ್ಯಮ: ನಷ್ಟ ಸರಿದೂಗಲು ಇನ್ನಷ್ಟು ಅಭಿವೃದ್ಧಿ ಆಗಬೇಕು
ಪ್ರವಾಸೋದ್ಯಮ; ನೆರವಿನ ನಿರೀಕ್ಷೆಯಲ್ಲಿ ಉಡುಪಿಯ ಆರ್ಥಿಕತೆ; ಸರಕಾರ ಏನು ಮಾಡಬೇಕು ?
Team Udayavani, May 20, 2020, 9:15 AM IST
ಸಾಂದರ್ಭಿಕ ಚಿತ್ರ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕನ ಕುರ್ಚಿಯಲ್ಲಿ ಕುಳಿತು ನಿರ್ವಹಿಸಿದರೆ ಸಾಲದು ; ಪ್ರವರ್ತಕನ ಸ್ಥಾನದಲ್ಲಿ ನಿಂತು ಕೆಲಸ ಮಾಡಬೇಕು. ಸ್ಥಳೀಯ ಪ್ರವಾಸ ಆಯೋಜಕರು, ಉದ್ಯಮಗಳು, ಆತಿಥ್ಯ ಉದ್ಯಮದಲ್ಲಿ ತೊಡಗಿರುವ ಸಂಸ್ಥೆಗಳು ಬಂದ ಪ್ರವಾಸಿಗರನ್ನು ಚೆನ್ನಾಗಿ ಉಪಚರಿಸಬಹುದಷ್ಟೇ ; ತಾಣಗಳಿಗೆ ಜನರನ್ನು ಕರೆದು ತರುವ ಪ್ರಾಥಮಿಕ ಹೊಣೆಗಾರಿಕೆ ಪ್ರವಾಸೋದ್ಯಮ ಇಲಾಖೆಯದ್ದೇ. ಆ ಕೆಲಸವೇ ಇನ್ನಷ್ಟು ಸಮರ್ಥವಾಗಿ, ಜವಾಬ್ದಾರಿಯುತವಾಗಿ ಆಗಲು ಸರಕಾರದ ನೆರವು ಬೇಕಿದೆ.
ಉಡುಪಿ: ಹಿಂದಿನ ವರ್ಷದಂತೆಯೇ ಈ ಬೇಸಗೆಯೂ ಇದ್ದಿದ್ದರೆ ಜಿಲ್ಲೆಯ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದ್ದವು. ಹೊಟೇಲ್‌ಗಳು ಪ್ರವಾಸಿಗರಿಂದ ತುಂಬಿರುತ್ತಿದ್ದವು. ಸಮುದ್ರ ತೀರಗಳು, ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳಲ್ಲೂ ಅಷ್ಟೇ. ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮೇ ವರೆಗೆ ಪ್ರವಾಸೋದ್ಯಮ ಕಾಲ. ಕೋವಿಡ್ ವೈರಸ್ ಎಲ್ಲ ಬದಲಾಯಿಸಿದೆ. ಈ ಬೇಸಗೆಯಲ್ಲಿ ಮಕ್ಕಳಿಗೆ ಆಡಲು, ಪ್ರವಾಸ ಹೋಗುವಂತಿಲ್ಲ. ಲಾಕ್‌ಡೌನ್. ಕೆಲವೇ ತಿಂಗಳುಗಳಲ್ಲಿ ಮತ್ತೆ ಪ್ರವಾಸಿಗರು ಜಿಲ್ಲೆಯ ತಾಣಗಳಿಗೆ ಬರತೊಡಗುತ್ತಾರೆ. ನದಿ ತೀರಗಳಲ್ಲಿ ವಿಹರಿಸುತ್ತಾರೆ. ಸಮುದ್ರ ತೀರಗಳಲ್ಲಿ ತಂಗುತ್ತಾರೆ. ಆ ಹೊತ್ತಿನಲ್ಲಿ ನಮ್ಮ ಜಿಲ್ಲೆ ಹೇಗಿರಬೇಕು ಎಂದರೆ ಮತ್ತೂಮ್ಮೆ ಭೇಟಿ ನೀಡುವಂತೆ ಪ್ರಭಾವ ಬೀರುವಂತಿರಬೇಕು. ಪ್ರವಾಸೋದ್ಯಮ ಭವಿಷ್ಯದ ಹಸುರು ಆರ್ಥಿಕತೆ ಎಂದು ಗುರುತಿಸಿಕೊಂಡಿರುವಂಥದ್ದು. ಪರಿಸರ ಸ್ನೇಹಿ ಪ್ರವಾಸೋದ್ಯಮ ಕೇವಲ ಜಿಡಿಪಿಯನ್ನಷ್ಟೇ ಏರಿಸುವುದಿಲ್ಲ; ಸ್ಥಳೀಯ ಆರ್ಥಿಕತೆಗೆ ನೀರೆರೆದು ಪೋಷಿಸುತ್ತದೆ. ಅದರಲ್ಲೂ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಹೆಚ್ಚು ಅವಕಾಶವಿದೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಪ್ರತ್ಯಕ್ಷ ಹಾಗೂ ಪರೋಕ್ಷ ಹತ್ತಾರು ವಲಯಗಳು ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿವೆ.
ಪ್ರವಾಸಿಗರೇನೂ ಕಡಿಮೆ ಇಲ್ಲ
ಶ್ರೀ ಕೃಷ್ಣ ಮಠ, ಪಾಜಕ ಕ್ಷೇತ್ರ, ಅತ್ತೂರು ಚರ್ಚ್, ಕೊಲ್ಲೂರು, ಮಲ್ಪೆ-ಕಾಪು- ಪಡು ಬಿದ್ರಿ – ಮರವಂತೆ ಬೀಚ್, ಸೈಂಟ್ ಮೇರಿ ಐಲ್ಯಾಂಡ್, ಗೊಮ್ಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ- ಪ್ರವಾಸೋದ್ಯಮ ಇಲಾಖೆ ಪಟ್ಟಿ ಮಾಡಿದ 42ಕ್ಕೂ ಹೆಚ್ಚು ತಾಣಗಳಿಗೆ ಪ್ರತಿ ವರ್ಷವೂ ಲಕ್ಷಾಂತರ ಮಂದಿ ಭೇಟಿ ಕೊಡುತ್ತಾರೆ. ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ 27 ಲಕ್ಷ ಮಂದಿ ಭೇಟಿ ಕೊಟ್ಟಿದ್ದರು. ಇವರ ಪೈಕಿ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿ ದ್ದರು. ಒಂದಿಷ್ಟು ಪ್ರಮಾಣ ಸ್ಥಳೀಯರೂ ಸೇರಿದ್ದಾರೆ. ಆದರೂ ಸುಮಾರು 24 ಲಕ್ಷಕ್ಕಿಂತ ಕಡಿಮೆ ಏನೂ ಇಲ್ಲ.
ತಾಣಗಳಿಗೂ ಕೊರತೆಯಿಲ್ಲ, ಜನರಿಗೂ ಕೊರತೆ ಇಲ್ಲ. ಹಾಗಾದರೆ ಕೊರತೆ ಎಲ್ಲಿದೆ ಎಂದು ಹುಡುಕುವುದಾದರೆ ಸೂಕ್ತ ರೀತಿಯ ಮೂಲ ಸೌಕರ್ಯ ನೆನಪಿಗೆ ಬರುತ್ತದೆ. ಒಂದು ಪ್ರವಾಸಿ ತಾಣಕ್ಕೆ ಸೂಕ್ತವೆನಿಸುವ ಸೌಕರ್ಯಗಳು ತೀರಾ ಅವಶ್ಯ. ಸಮುದ್ರ ತೀರವೆಂದರೆ ಶೌಚಾಲಯ, ಸ್ನಾನಗೃಹದಿಂದ ಹಿಡಿದು ಹೊಟೇಲ್ ಇತ್ಯಾದಿವರೆಗೂ ಎಲ್ಲವೂ ಇರಬೇಕು. ಇದು ಆಯಾ ತಾಣಗಳ ಅಗತ್ಯಕ್ಕೆ ತಕ್ಕಂತೆ (ಪ್ರಾಥಮಿಕ ಅಗತ್ಯಗಳನ್ನು ಹೊರತುಪಡಿಸಿ) ಬದಲಾಗುತ್ತವೆ. ಈ ಅನುರೂಪವಾದ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಎರಡನೆಯದಾಗಿ, ಒಂದಕ್ಕೊಂದು ಬೆಸೆಯುವ ಕ್ರಮ ಆಗಿಯೇ ಇಲ್ಲ. ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಇಡೀ ಜಿಲ್ಲೆಯ ಪ್ರವಾಸ ಮಾಹಿತಿಯಲ್ಲದೇ, ಯಾವುದೇ ಪ್ರವಾಸಿ ತಾಣಕ್ಕೆ ಹೋದರೂ ಮತ್ತೂಂದು ತಾಣದ ಬಗ್ಗೆ ಆಸಕ್ತಿ ಹುಟ್ಟಿಸುವ ಮಾಹಿತಿ ಲಭ್ಯವಿರ ಬೇಕು. ಜಿಲ್ಲೆಯ ಸಂಸ್ಕೃತಿ, ಆಚರಣೆ, ವಿಶಿಷ್ಟ ಕೈಗಾರಿಕೆ (ಗುಡಿ ಕೈಗಾರಿಕೆ ಇತ್ಯಾದಿ), ವಿಶಿಷ್ಟ ಉದ್ಯಮ-ಎಲ್ಲವೂ ಸರಿಕಟ್ಟಾಗಿ ಬೆಸೆದರೆ, ವಾಣಿಜ್ಯ ಚಟುವಟಿಕೆಗಳು ಹೆಚ್ಚುತ್ತವೆ. ಪ್ರವಾಸಿ ಸ್ಥಳಗಳ ರಸ್ತೆ ಅಭಿವೃದ್ಧಿ, ಮಾರ್ಗದರ್ಶಕರ ನೇಮಕ, ಮಾಹಿತಿ ಫಲಕಗಳು ಹಾಕಬೇಕಿದೆ. ಪ್ರವಾಸಿಗರು ತಂಗುವಂಥ ವಾತಾವರಣ ಜಿಲ್ಲೆಯಲ್ಲಿ ರೂಪಿಸಬೇಕಿದೆ.
ಇಲಾಖೆಯ ಕೊಡುಗೆ
ಪ್ರವಾಸೋದ್ಯಮ ಇಲಾಖೆ ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು (ಬೀಚ್‌ಗಳಲ್ಲಿ ಕಾಮಗಾರಿ, ಬೆಂಚ್‌ಗಳು, ಜೀವರಕ್ಷಕ ಕವಚಗಳು, ಘನ ತ್ಯಾಜ್ಯ ವಿಲೇವಾರಿ ಯೋಜನೆ ಇತ್ಯಾದಿ) ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಡೆಸಿದೆ. ಸ್ಕೂಬಾ ಡೈವಿಂಗ್, ಇತರ ಉತ್ಸವ, ಜಲಸಾಹಸ ಕ್ರೀಡೆ ಆಯೋಜಿಸಿದೆ. ಸ್ವದೇಶಿ ದರ್ಶನ ಯೋಜನೆಯಡಿ 25 ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ.
ಸರಕಾರವೇನು ಮಾಡಬೇಕು?
ಕೋವಿಡ್ ದಂಥ ಸಂದರ್ಭದಲ್ಲಿ ಉಡುಪಿ ಸೇರಿದಂತೆ ಎಲ್ಲ ಜಿಲ್ಲೆಗಳು ತಮ್ಮ ಪ್ರವಾಸಿ ತಾಣಗಳನ್ನು ಹೊಸ ದೃಷ್ಟಿಕೋನದಲ್ಲಿ ಬೆಳೆಸಲು ಅವಕಾಶ ಹೆಚ್ಚಿದೆ. ಮುಂದಿನ ಒಂದೆರಡು ವರ್ಷಗಳಂತೂ ಸುರಕ್ಷೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ದೇಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚು. ಹಾಗಾಗಿ ಜಿಲ್ಲೆಯ ತಾಣಗಳಲ್ಲಿನ ಮೂಲ ಸೌಕರ್ಯಗಳ ಕೊರತೆ ನೀಗಿಸಲು ಇಲಾಖೆಗೆ ಸೂಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಇದರತ್ತ ಹೆಚ್ಚು ಗಮನ ನೀಡಿ ಕಾರ್ಯಗತಗೊಳಿಸಬೇಕು.
ವಿಮಾನ ನಿಲ್ದಾಣ ಏಕಿಲ್ಲ ?
ಈ ಪ್ರಶ್ನೆ ಹಲವು ಪ್ರವಾಸಿಗರನ್ನು ಕಾಡುವಂಥದ್ದು. ಉಡುಪಿ ಜಿಲ್ಲೆ ಒಂದು ಬಗೆಯ ಬಟ್ಟಲಿನಂತಿದೆ. ನಾಲ್ಕು ಜಿಲ್ಲೆಗಳ (ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ) ಮಧ್ಯಭಾಗದಲ್ಲಿದೆ. ಇಲ್ಲಿರುವ ವೈವಿಧ್ಯಮಯ ತಾಣಗಳಿಗೆ ಭೇಟಿ ನೀಡುವವರು ಹೆಚ್ಚಾಗಲು ವಿಮಾನ ನಿಲ್ದಾಣ ಬೇಕು. ಮಣಿಪಾಲ ವಿವಿಯಲ್ಲಿ ದೇಶಿ – ವಿದೇಶಿ ವಿದ್ಯಾರ್ಥಿಗಳೂ ಹೆಚ್ಚಿದ್ದು, ಅವರಿಗೂ ಅನುಕೂಲಕರ. ಇದರಿಂದ ಉಡುಪಿ ಜಿಲ್ಲೆಗೂ ಅನುಕೂಲ. ಸುತ್ತಲಿನ ನಾಲ್ಕು ಜಿಲ್ಲೆಗಳೂ ಕೇವಲ 60-80 ಕಿ.ಮೀ. ದೂರದಲ್ಲೇ ವಿಮಾನ ಸೌಕರ್ಯ ಪಡೆಯಬಹುದು. ಸರಕಾರ ಇದರತ್ತಲೂ ಗಮನಿಸಬೇಕಿದೆ.
ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ?
01. ಪ್ರವಾಸೋದ್ಯಮ ಇಲಾಖೆಯಡಿ ನಿರ್ಮಿಸುವ ಹೊಟೇಲ್-ಇತರ ಉದ್ಯಮಕ್ಕೆ ಕಡಿಮೆ ದರದ ಸಾಲ.
02. ಬೀಚ್ ಬೋಟ್, ಪ್ರವಾಸಿ ಕಾರು ಖರೀದಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಿಸಬೇಕು.
03. ಹೊಟೇಲ್ ಸೇರಿದಂತೆ ಪ್ರವಾಸೋದ್ಯಮ ವ್ಯಾಪ್ತಿಯಲ್ಲಿ ಬರುವ ಇತರ ಉದ್ಯಮ ಮೇಲಿನ ಜಿಎಸ್‌ಟಿ ಕಡಿತಗೊಳಿಸಬೇಕು.
04. ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಉದ್ಯಮ ಪ್ರಾರಂಭಿಸಲು ನಿಯಮಾವಳಿ ಸಡಿಲ ಮಾಡಬೇಕು.
ಜಿಲ್ಲೆಯ ಪ್ರವಾಸಿ ತಾಣಗಳು ವಿಶ್ವ ಪ್ರಸಿದ್ಧವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಸ್ವ ಉದ್ಯೋಗಕ್ಕೂ ಅವಕಾಶ ಹಾಗೂ ಹೆಚ್ಚಿನ ಹಣದ ಹರಿವು ಸ್ಥಳೀಯ ಆರ್ಥಿಕತೆಗೆ ಶಕ್ತಿ ತುಂಬುತ್ತದೆ.
-ಮನೋಹರ್ ಶೆಟ್ಟಿ, ಅಧ್ಯಕ್ಷರು, ಕರಾವಳಿ ಪ್ರವಾಸೋದ್ಯಮಗಳ ಸಂಘಟನೆ
2019 ಪ್ರವಾಸಿಗರ ಸಂಖ್ಯೆ
ಜನವರಿ 31,48,323
ಫೆಬ್ರವರಿ 16,18,717
ಮಾರ್ಚ್ 19,18,573
ಎಪ್ರಿಲ್ 27,69,265
ಮೇ 28,41,765
ಜೂನ್ 15,85,524
ಜುಲೈ 13,92,144
ಆಗಸ್ಟ್ 22,24,433
ಸೆಪ್ಟಂಬರ್ 21,64,774
ಅಕ್ಟೋಬರ್ 26,44,482
ನವೆಂಬರ್ 23,46,621
ಡಿಸೆಂಬರ್ 33,26,566
ಒಟ್ಟು ಪ್ರವಾಸಿಗರ ಸಂಖ್ಯೆ : 27981187
- ಉದಯವಾಣಿ ಅಧ್ಯಯನ ತಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.