ಅಂತಾರಾಜ್ಯ, ಜಿಲ್ಲೆಯ ವಾಹನಗಳ ಮೇಲೆ ನಿಗಾ
Team Udayavani, May 6, 2020, 6:38 AM IST
ಉಡುಪಿ: ಅಂತರ್ ಜಿಲ್ಲೆ, ರಾಜ್ಯಕ್ಕೆ ಸಂಪರ್ಕಕ್ಕೆ ಷರತ್ತುಬದ್ದ ಅನುಮತಿ ಇರುವ ಕಾರಣ ವಾಹನಗಳ ಒಡಾಟ ಹೆಚ್ಚಳವಾಗುತ್ತಿದೆ. ವಲಸೆ ಕಾರ್ಮಿಕರು, ಗೂಡ್ಸ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿವೆ. ಈ ನಡುವೆ ಪೊಲೀಸರು ಕೂಡ ಅನುಮಾನಸ್ಪದ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 12 ಕಡೆಗಳಲ್ಲಿ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ವಾಹನಗಳ ಸಂಚಾರಕ್ಕೆ ಅವಕಾಶವಿದ್ದು, ಅನಂತರ ಸಂಚರಿಸುವ ವಾಹನ ಸವಾರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ವಿನಾಕಾರಣ ಓಡಾಟ ನಡೆಸುವ ವಾಹನಗಳನ್ನು ಮುಟ್ಟುಗೋಲು ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಪೊಲೀಸರು 907 ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ. ರಾತ್ರಿ ಸಂಚರಿಸುವವರು ಸಮರ್ಪಕ ಕಾರಣ ನೀಡಿದರಷ್ಟೇ ವಿನಾಯಿತಿ ನೀಡಲಾಗುತ್ತಿದೆ.
ಗಡಿಪ್ರದೇಶಗಳಲ್ಲಿ ಬಿಗಿ ಭದ್ರತೆ
ಹೊರರಾಜ್ಯ, ಹೊರಜಿಲ್ಲೆಗಳಿಂದ ಆಗಮಿಸುವವರ ಮೇಲೆ ಜಿಲ್ಲಾಡಳಿತ ವಿಶೇಷ ಗಮನಹರಿಸಲು ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಗೂಡ್ಸ್ ವಾಹನಗಳಲ್ಲಿ ಚಾಲಕ, ಕ್ಲೀನರ್ ಸಹಿತ 3 ಮಂದಿ ಪ್ರಯಾಣಿಸಲು ಅನುಮತಿ ಕಲ್ಪಿಸಲಾಗಿದೆ. ಚೆಕ್‌ಪೋಸ್ಟ್ ಪ್ರಾರಂಭದಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿ ಉಳಿದ ಎಲ್ಲ ಚೆಕ್‌ಪೋಸ್ಟ್ ಕೇಂದ್ರ ಗಳಿಗೆ ಮಾಹಿತಿ ನೀಡುತ್ತಿದ್ದಾರೆ.
ಸ್ಕ್ರೀನಿಂಗ್ ವ್ಯವಸ್ಥೆ
ಟೋಲ್‌ಗೇಟ್‌ಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹೊರಜಿಲ್ಲೆಗಳಿಂದ ಉಡುಪಿಗೆ ಬರು ವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶಿಸಿದ್ದಾರೆ.
ಅಂತರ್‌ರಾಜ್ಯ ವಾಹನಗಳನ್ನು ಜಿಲ್ಲೆಯ ಗಡಿಭಾಗಗಳಲ್ಲಿ ಬಿಗಿ ತಪಾಸಣೆಗೆ ಒಳಪಡಿಸಲಾಗು ತ್ತಿದೆ. ಗೂಡ್ಸ್ ಸಹಿತ ಎಲ್ಲ ರೀತಿಯ ವಾಹನಗಳನ್ನು ಒಂದು ಬಾರಿ ಸಂಪೂರ್ಣ ತಪಾಸಣೆ ಮಾಡಿ ಚೆಕ್‌ಪೋಸ್ಟ್ ಗಳಲ್ಲಿರುವ ಪೊಲೀಸ್ ಸಿಬಂದಿಗೆ ಮಾಹಿತಿ ನೀಡಲಾಗುತ್ತದೆ. ಅನಂತರ ಚೆಕ್‌ಪೋಸ್ಟ್ ಮುಕ್ತಾಯದ ವೇಳೆ ಮತ್ತೆ ಆ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ.
-ಎನ್. ವಿಷ್ಣುವರ್ಧನ್
ಎಸ್‌ಪಿ, ಉಡುಪಿ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.