ರೈಲು ವಿಳಂಬ: ನೀಟ್ನಿಂದ ವಂಚಿತರಾದ ವಿದ್ಯಾರ್ಥಿಗಳು
Team Udayavani, May 6, 2019, 3:05 AM IST
ಬೆಂಗಳೂರು: ಹಂಪಿ ಎಕ್ಸ್ಪ್ರೆಸ್ ರೈಲು ಮಾರ್ಗ ಹಾಗೂ ವೇಳಾಪಟ್ಟಿ ತಾತ್ಕಾಲಿಕ ಬದಲಾವಣೆಯಿಂದ ಏಳು ಗಂಟೆ ವಿಳಂಬವಾಗಿ ಬೆಂಗಳೂರು ತಲುಪಿದ್ದು, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆಯಲು ರೈಲಿನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ನೀಟ್ ಪರೀಕ್ಷೆಯು ಭಾನುವಾರ ಮಧ್ಯಾಹ್ನ 1ಕ್ಕೆ ನಿಗದಿಯಾಗಿತ್ತು. ಈ ರೈಲಿನಲ್ಲಿ ಹುಬ್ಬಳ್ಳಿ, ಹೊಸಪೇಟೆ, ಕೊಪ್ಪಳ ಹಾಗೂ ಬಳ್ಳಾರಿ ಭಾಗದ ನೂರಾರು ವಿದ್ಯಾರ್ಥಿಗಳು ಪರೀಕ್ಷೆಗೆಂದು ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುತ್ತಿದ್ದರು.
ಬೆಳಗ್ಗೆ 7ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬರಬೇಕಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ವಿಳಂಬವಾಗಿ ಮಧ್ಯಾಹ್ನ 2ಕ್ಕೆ ನಿಲ್ದಾಣ ತಲುಪಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ರೈಲ್ವೇ ನಿಲ್ದಾಣದಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಂಪಿ ಎಕ್ಸ್ಪ್ರೆಸ್ ರೈಲು (ಗಾಡಿ ಸಂಖ್ಯೆ 16591) ಹುಬ್ಬಳ್ಳಿ -ಮೈಸೂರು ನಡುವೆ ಓಡಾಟ ನಡೆಸುತ್ತಿದ್ದು, ನಿತ್ಯ ಹುಬ್ಬಳ್ಳಿಯಲ್ಲಿ ಸಂಜೆ 6.20ಕ್ಕೆ ಹೊರಟು ಹೊಸಪೇಟೆ – ಬಳ್ಳಾರಿ-ಗುಂಟಕಲ್- ಧರ್ಮಾವರಂ- ಪೆನುಕೊಂಡ-ಯಲಹಂಕ ಮಾರ್ಗದಲ್ಲಿ ಮರು ದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪುತ್ತದೆ. ಆದರೆ, ಗುಂಟಕಲ್ ಹಾಗೂ ಧರ್ಮಾವರಂ ಮಾರ್ಗದಲ್ಲಿ ಹಳಿಗಳ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದ್ದು, ರೈಲು ಮಾರ್ಗ ಬದಲಾಗಿದೆ.
ಶನಿವಾರ ರಾತ್ರಿ ಹೊರಟ ರೈಲು ಬಳ್ಳಾರಿ-ರಾಯದುರ್ಗ- ಚಿಕ್ಕಜಾಜೂರು-ಅರಸೀಕೆರೆ-ತುಮಕೂರು ಮಾರ್ಗವಾಗಿ ಬೆಂಗಳೂರು ಸೇರಿದೆ. ಇದರಿಂದ 120 ಕಿ.ಮೀ. ಸಂಚಾರ ಹೆಚ್ಚಾಗಿದೆ. ಅಲ್ಲದೇ ಹಿಂದಿನ ದಿನದ ಮಾರ್ಗ ಬದಲಾವಣೆಯಿಂದ ಈ ರೈಲು ಹುಬ್ಬಳ್ಳಿಗೆ ಬರುವುದುದು 3 ಗಂಟೆ ವಿಳಂಬವಾದ್ದರಿಂದ ಸಂಜೆ 6.20ಕ್ಕೆ ಹುಬ್ಬಳ್ಳಿಯಿಂದ ಹೊರಡಬೇಕಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ರಾತ್ರಿ 8.20ಕ್ಕೆ ಅಂದರೆ ಎರಡು ತಾಸು ವಿಳಂಬವಾಗಿ ಹೊರಟಿತು. ಅಲ್ಲದೇ ಹೊಸ ಮಾರ್ಗದಲ್ಲಿ ಅಧಿಕ ಕ್ರಾಸಿಂಗ್ಗಳು ಬಂದಿವೆ. ಹೀಗಾಗಿ, ರೈಲು ಏಳು ತಾಸು ತಡವಾಗಿದೆ.
ಕಾಮಗಾರಿ ನಿಮಿತ್ತ ಮೇ 3 ರಿಂದ 9ರವರೆಗೆ ಹಂಪಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಹಾಗೂ ಸಮಯದಲ್ಲಿ ಬದಲಾವಣೆ ಆಗುತ್ತದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ನೀಡಲಾಗಿತ್ತು. ಅಲ್ಲದೆ, ಮುಂಗಡ ಟಿಕೆಟ್ ಬುಕಿಂಗ್ ಮಾಡಿದ್ದ ಪ್ರಯಾಣಿಕರ ಮೊಬೈಲ್ಗಳಿಗೆ ಸಂದೇಶ ಕಳುಹಿಸಲಾಗಿತ್ತು ಎಂದು ನೈರುತ್ಯ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ರೈಲು ವಿಳಂಬವಾದ್ದರಿಂದ ಮಾರ್ಗ ಮಧ್ಯೆ ಅರಸೀಕೆರೆಯಲ್ಲಿಯೇ ಇಳಿದ ಕೆಲ ಪೋಷಕರು ಖಾಸಗಿ ವಾಹನ ಬಾಡಿಗೆ ಪಡೆದು ಬೆಂಗಳೂರಿಗೆ ಬಂದಿದ್ದಾರೆ. ಮಾಹಿತಿ ಕೊರತೆ ಹಾಗೂ ಆರ್ಥಿಕ ಸಮಸ್ಯೆಯಿಂದ ಬಹುತೇಕರು ರೈಲಿನಲ್ಲಿಯೇ ಬೆಂಗಳೂರು ತಲುಪಿದ್ದಾರೆ. ಪರೀಕ್ಷೆ ವಂಚಿತ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
“ನಾವು ಬಳ್ಳಾರಿ ನಿಲ್ದಾಣಕ್ಕೆ ಬಂದಾಗ ರೈಲು 2 ಗಂಟೆ ವಿಳಂಬ ಎಂದಿದ್ದರು. ಪರವಾಗಿಲ್ಲ ಬೆಳಗ್ಗೆ 7ರ ಬದಲು 9ಕ್ಕೆ ಬೆಂಗಳೂರು ತಲುಪಬಹುದು ಎಂದುಕೊಂಡಿದ್ದೆವು. ಆದರೆ, 12 ಗಂಟೆಗೆ ಬಳ್ಳಾರಿಗೆ ಬರಬೇಕಾದ ರೈಲು 2ಕ್ಕೆ ಬಂದು ಇಂಜಿನ್ ಬದಲಾವಣೆ ಎಂದು ಮಧ್ಯರಾತ್ರಿ 3ಕ್ಕೆ ಬಳ್ಳಾರಿ ಬಿಟ್ಟಿತು. ಅಂತಿಮವಾಗಿ ಮಧ್ಯಾಹ್ನ 2ಕ್ಕೆ ಬೆಂಗಳೂರಿಗೆ ಬಂದಿದ್ದು, ಪರೀಕ್ಷೆ ಬರೆಯದೇ ಹಿಂದಿರುಗುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.
ಯಶವಂತಪುರದಲ್ಲಿ ಇಳಿದು ಪರೀಕ್ಷಾ ಕೇಂದ್ರಕ್ಕೆ ತೆರಳಿದೆವು. ಆದರೆ, 2 ಗಂಟೆಯಾಗಿತ್ತು ಎಂದು ಭದ್ರತಾ ಸಿಬ್ಬಂದಿ ಒಳಗೆ ಬಿಡಲಿಲ್ಲ. ಟ್ಯೂಷನ್ಗೆ ಸಾವಿರಾರು ರೂ.ಹಣ ಕಟ್ಟಿದ್ದು, ಮಕ್ಕಳು ಕೂಡ ತಿಂಗಳು ಗಟ್ಟಲೇ ಶ್ರಮಪಟ್ಟು ಓದಿದ್ದರು. ರೈಲು ವಿಳಂಬದಿಂದ ಎಲ್ಲಾ ವ್ಯರ್ಥವಾಯಿತು.
-ಮಂಜುಳ, ಪೋಷಕರು, ಬಳ್ಳಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.