Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ ರಾಘವೇಂದ್ರ
Team Udayavani, Jul 3, 2024, 7:25 AM IST
ಕುಂದಾಪುರ/ಬೈಂದೂರು: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದಿಲ್ಲಿಯಲ್ಲಿ ಮಂಗಳವಾರ ಭೇಟಿಯಾದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ – ಶೃಂಗೇರಿ – ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ ಮಾಡಿದರು.
ದಶಕದ ಹಿಂದೆ ಮಲೆನಾಡು ಕರಾವಳಿ ಸಂಪರ್ಕಿಸುವ ಈ ಯೋಜನೆಯ ಸಮೀಕ್ಷೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ಅನಂತರ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಈ ಉದ್ದೇಶಿತ ಯೋಜನೆಯು ಮಲೆನಾಡು ಪ್ರದೇಶದಿಂದ ಕರಾವಳಿ ಕರ್ನಾಟಕಕ್ಕೆ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಮಂಜೂರಾತಿ ನೀಡುವಂತೆ ಸಂಸದರು ಇದೇ ವೇಳೆ ಸಚಿವರಿಗೆ ಮನವಿ ಮಾಡಿದ್ದಾರೆ.
ತಿರುನೆಲ್ವೇಲಿ, ಎರ್ನಾಕುಲಂ ರೈಲು
ನಿಲುಗಡೆಗೆ ಮನವಿ
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಹೆಚ್ಚಿನ ರೈಲುಗಳ ನಿಲುಗಡೆಯಾಗಬೇಕಿದೆ. ಕೇರಳ ಮತ್ತು ತಮಿಳುನಾಡಿನಿಂದ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ ದಾದರ್ ಸೆಂಟ್ರಲ್-ತಿರುನೆಲ್ವೇಲಿ-ದಾದರ್ (ಸಂ. 22629/22630) ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (ಸಾಪ್ತಾಹಿಕ) ಮತ್ತು ಎರ್ನಾಕುಲಂ-ಹಜರತ್ ನಿಜಾಮುದ್ದೀನ್- ಎರ್ನಾಕುಲಂ (ಸಂ. 12617/12618 ) ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ (ಕೆ.ಆರ್.ಸಿ.ಎಲ್. ನಿತ್ಯ) ರೈಲು ನಿಲುಗಡೆಯನ್ನು ಮಂಜೂರು ಮಾಡುವಂತೆ ವಿನಂತಿಸಿದರು. ಕೊಂಕಣ್ ರೈಲ್ವೇ ಸಹ ಈ ರೈಲುಗಳಿಗೆ ನಿಲುಗಡೆ ನೀಡಲು ರೈಲ್ವೇ ಮಂಡಳಿಗೆ ಶಿಫಾರಸ್ಸು ಮಾಡಿದೆ.
ಸೇನಾಪುರ: ಹೆಚ್ಚಿನ ರೈಲು ನಿಲುಗಡೆಗೆ ಮನವಿ
ಸೇನಾಪುರ ರೈಲು ನಿಲ್ದಾಣವು ಉಡುಪಿಯ ಪ್ರಮುಖ ರೈಲು ನಿಲ್ದಾಣವಾಗಿದ್ದು, ಸುತ್ತಮುತ್ತಲಿನ ಜನರು ಸೇನಾಪುರದಿಂದ ದೂರದಲ್ಲಿರುವ ಮೂಕಾಂಬಿಕಾ ರಸ್ತೆ ಅಥವಾ ಕುಂದಾಪುರ ರೈಲು ನಿಲ್ದಾಣದಲ್ಲಿ ರೈಲುಗಳನ್ನು ಹತ್ತುವ ಮೂಲಕ ಬೆಂಗಳೂರು, ಮುಂಬಯಿಗೆ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಸೇನಾಪುರ ರೈಲು ನಿಲ್ದಾಣದಲ್ಲಿ ಮಂಗಳೂರು ಮತ್ತು ಮುಂಬಯಿ ನಡುವೆ ಸಂಚರಿಸುವ ಮತ್ಸÂಗಂಧ ಸೂಪರ್ ಫಾಸ್ಟ್ (ಸಂ.12619/20) ಎಕ್ಸ್‌ಪ್ರೆಸ್ ಹಾಗೂ ಕಾರವಾರ – ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ (ಸಂ. 16595/96) ಸೇನಾಪುರದಲ್ಲಿ ನಿಲುಗಡೆ ಒದಗಿಸುವಂತೆ ಸಹ ಇದೇ ಸಂದರ್ಭದಲ್ಲಿ ಸಚಿವರನ್ನು ಮನವಿ ಮಾಡಿಕೊಂಡರು.ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನ. 14-20: ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
Kundapura: ಹೆದ್ದಾರಿ, ಘಾಟಿ ಮಾರ್ಗ ರೈಲು ಸುಧಾರಣೆಗೆ ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
MUST WATCH
ಹೊಸ ಸೇರ್ಪಡೆ
Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !
Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.