ಲಾಕ್‌ಡೌನ್ ಮುಗಿದೊಡನೆ ತರಬೇತಿ ಆರಂಭ: ರಿಜಿಜು
Team Udayavani, May 12, 2020, 6:19 AM IST
ಹೊಸದಿಲ್ಲಿ: ಕೋವಿಡ್-19ದಿಂದಾಗಿ ಸಂಪೂರ್ಣವಾಗಿ ನಿಂತು ಹೋಗಿರುವ ದೇಶದ ಕ್ರೀಡಾ ಚಟುವಟಿಕೆ ಮತ್ತೆ ಆರಂಭಗೊಳ್ಳುವ ಸಮಯ ಸನ್ನಿಹಿತವಾದಂತಿದೆ. ಒಮ್ಮೆ ಲಾಕ್‌ಡೌನ್ ತೆರವುಗೊಂಡ ಬಳಿಕ ಎಲೈಟ್ ಆ್ಯತ್ಲೀಟ್‌ಗಳ ತರಬೇತಿ ಆರಂಭವಾಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೋಮವಾರ ತಿಳಿಸಿದ್ದಾರೆ.
ಮೇ 3ರ ತನಕ ಲಾಕ್‌ಡೌನ್ ವಿಸ್ತರಿಸಲ್ಪಟ್ಟಾಗ ಪ್ರತಿಕ್ರಿಯಿಸಿದ್ದ ಸಚಿವರು, ಕ್ರೀಡಾಪಟುಗಳ ಆರೋಗ್ಯ ಮುಖ್ಯ, ಮೇ ಅಂತ್ಯದೊಳಗೆ ತರಬೇತಿ ಆರಂಭವಾಗಬಹುದು ಎಂದಿದ್ದರು. ಆದರೀಗ ಮೇ 17ಕ್ಕೆ ಲಾಕ್‌ಡೌನ್ ಕೊನೆಗೊಳ್ಳುವ ಲಕ್ಷಣ ಕಾಣುತ್ತಿದೆ. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆಯನ್ನು ಪಾಲಿಸಿ ಕ್ರೀಡಾ ತರಬೇತಿಯನ್ನು ಆರಂಭಿಸುವ ಸಾಧ್ಯತೆಯೂ ಗೋಚರಿಸುತ್ತಿದೆ.
“ಒಮ್ಮೆ ಲಾಕ್‌ಡೌನ್ ಮುಗಿದೊಡನೆ ಸಾಯ್ ಕೇಂದ್ರಗಳಲ್ಲಿ ಹಂತ ಹಂತವಾಗಿ ಎಲೈಟ್ ಕ್ರೀಡಾಪಟುಗಳಿಗೆ ತರಬೇತಿ ಆರಂಭಿಸಲಾಗುವುದು. ಆದರೆ ಈ ವಿಷಯದಲ್ಲಿ ಗಡಿಬಿಡಿ ಮಾಡಬೇಡಿ ಎಂದು ಕ್ರೀಡಾಳುಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ. ಕ್ರೀಡಾಪಟುಗಳ ಆರೋಗ್ಯವೇ ಮೊದಲ ಆದ್ಯತೆ ಆಗಬೇಕು ಎಂದು ನಾನು ಈಗಲೂ ಹೇಳುತ್ತೇನೆ’ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.ತರಬೇತಿ ಆರಂಭಗೊಂಡಲ್ಲಿ ಆಗ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಳುಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ರಿಜಿಜು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.