ವರ್ಗಾವಣೆ ವಾಕ್ಸಮರ- ಸರಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿದ ಮಾಜಿ ಸಿಎಂ ಕುಮಾರಸ್ವಾಮಿ
ಎಚ್‌ಡಿಕೆ ಮಾಡಿದ ಆರೋಪ ಒಂದನ್ನೂ ಸಾಬೀತು ಮಾಡಿಲ್ಲ ಎಂದ ಸಿಎಂ
Team Udayavani, Nov 18, 2023, 11:27 PM IST
ಬೆಂಗಳೂರು/ಮೈಸೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಪ್ರಸ್ತಾವವಾಗಿದ್ದ “ವಿವೇಕಾನಂದ’ ಎನ್ನುವ ಹೆಸರು ಶುಕ್ರವಾರ ಹೊರಬಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯಲ್ಲಿ ನುಸುಳಿರುವುದು ಮತ್ತೂಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ.
“ಕರ್ನಾಟಕ ಕಲೆಕ್ಷನ್ ಪ್ರಿನ್ಸ್ ವೀಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ತಾಸುಗಳ ಒಳಗಾಗಿಯೇ ವರ್ಗಾವಣೆ ಪಟ್ಟಿಯಲ್ಲಿ ನುಸುಳಿದ್ದು ಹೇಗೆ? ಈ ಸರಕಾರ ವಿಸ್ಮಯಗಳ ಆಗರ’ ಎಂದಿರುವ ಕುಮಾರಸ್ವಾಮಿ, “ಡುಪ್ಲಿಕೇಟ್ ಸಿಎಂ ಸಲಹೆಯ ಮೇರೆಗೆ ಕಾಸಿಗಾಗಿ ಹುದ್ದೆ ವೀಡಿಯೋಗೆ ಸಿಎಸ್‌ಆರ್ ಕಥೆ ಕಟ್ಟಿದ ಸಿಎಂ ನೈತಿಕತೆಗೆ ನೂರೆಂಟು ನಮನ’ ಎಂದು ವ್ಯಂಗ್ಯವಾಡಿದ್ದಾರೆ.
ಪ್ರತಿಯಾಗಿ ಮೈಸೂರಿನಲ್ಲಿ ಎಚ್‌ಡಿಕೆ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ, ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ಇಂಥವರಿಂದ ನಾವು ಏನು ಕೇಳಿಸಿ ಕೊಳ್ಳಬೇಕು? ಪೆನ್‌ಡ್ರೈವ್‌ನಲ್ಲಿ ಏನಾದರೂ ಇದ್ದಿದ್ದರೆ ಬಿಡುಗಡೆ ಮಾಡಬೇಕಿತ್ತು ತಾನೇ? ಒಂದು ಆರೋಪವನ್ನೂ ಅವರು ಸಾಬೀತು ಮಾಡುವುದಿಲ್ಲ. ಅವರಿಗೆ ಕೇವಲ ದ್ವೇಷ, ಅಸೂಯೆ, ಹೊಟ್ಟೆಯುರಿ ಎಂದು ತಿರುಗೇಟು ನೀಡಿದರು.
ತಂದೆಯ ಮಾತಿಗೆ ಮೈಸೂರಿನಲ್ಲೇ ಧ್ವನಿಗೂಡಿಸಿರುವ ಯತೀಂದ್ರ ಸಿದ್ದರಾಮಯ್ಯ, ಸಿಎಂ ವಿರುದ್ಧ ಆರೋಪ ಮಾಡಲು ಕುಮಾರಸ್ವಾಮಿ ಅವರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ನಮ್ಮ ಕುಟುಂಬವನ್ನು ಬಳಸಿಕೊಂಡು ಹಣಿಯಲು ಯತ್ನಿಸುತ್ತಿದ್ದಾರೆ. ಈ ರೀತಿ ಆರೋಪ ಮಾಡುವುದು ನೀಚ ರಾಜಕಾರಣ. ಅವರ ಇಡೀ ಕುಟುಂಬವೇ ರಾಜಕಾರಣ ದಲ್ಲಿದೆ. ಅವರ ಅವಧಿಗಳಲ್ಲೂ ಸಾಕಷ್ಟು ವರ್ಗಾವಣೆಗಳಾಗಿವೆ. ಎಲ್ಲವನ್ನೂ ಹಣಕ್ಕಾಗಿ ಮಾಡಿದ್ದಾರೆಯೇ? ದಾಖಲೆ ಇರಿಸಿ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ| ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಸಿಎಂ ಪರವಾಗಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಸಿಎಂ ಸ್ಪಷ್ಟನೆ ಕೊಟ್ಟರೂ ಕುಮಾರಸ್ವಾಮಿ ಅವರು ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟಿಲ್ಲ. ಹಾಗೊಂದು ವೇಳೆ ವರ್ಗಾವಣೆಗೆ ಶಿಫಾರಸು ಮಾಡಿದ್ದರೂ ಅದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನೆ ಹಾಕಿದ್ದಾರೆ.
ಒಟ್ಟಾರೆ ಯತೀಂದ್ರ ವಿಚಾರವಾಗಿ ಆರೋಪ- ಪ್ರತ್ಯಾರೋಪ ಬಿರುಸಾಗಿದ್ದು, ಮುಂಬರುವ ಅಧಿವೇಶನದಲ್ಲಿ ಈ ಎಲ್ಲ ವಿಚಾರಗಳೂ ಪ್ರತಿಧ್ವನಿಸುವ ಸಾಧ್ಯತೆಗಳಿವೆ.
ಯತೀಂದ್ರ ಹೇಳಿದ್ದು ಬಿಇಒ ವಿವೇಕಾನಂದ ಬಗ್ಗೆ. ವರ್ಗಾವಣೆ ಆಗಿರುವುದು ಪೊಲೀಸ್ ಇನ್‌ಸ್ಪೆಕ್ಟರ್ ವಿವೇಕಾನಂದ; ಚಾಮರಾಜ ಕ್ಷೇತ್ರ ದವರು. ಯಾರು ವರ್ಗಾವಣೆ ಮಾಡಿಸಿ ಕೊಂಡರು ಎಂದು ಸ್ಥಳೀಯ ಶಾಸಕರಲ್ಲೇ ಕೇಳಿ. ಎಲ್ಲವನ್ನೂ ಹಣದಲ್ಲೇ ಅಳೆದರೆ ಹೇಗೆ?
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಸತ್ಯ ಹೇಳಿದರೆ ಗುಂಪುಗುಂಪಾಗಿ ಮೈಮೇಲೆ ಬೀಳುತ್ತೀರಿ. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್ ಆ್ಯಂಡ್ ರನ್ ಅನ್ನುತ್ತೀರಿ. ಕಣ್ಣಮುಂದೆ ವೀಡಿಯೋ ಸಾಕ್ಷ್ಯ ಇದೆ. ರಾಜ್ಯದ ಜನ ನೋಡಿದ್ದಾರೆ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯುವುದಿಲ್ಲ. ನಾನು ಒಬ್ಬನೇ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ನಾನು ಹಣದ ವಿಚಾರ ಮಾತನಾಡಿದ್ದರೆ ಸ್ಪಷ್ಟನೆ ನೀಡಬಹುದಿತ್ತು. ಸಿಎಸ್‌ಆರ್ ಫಂಡ್ ವಿಚಾರವಾಗಿ ಮಾತನಾಡಿದ್ದೇನೆ. ಲಿಸ್ಟ್ ಎಂದರೆ ವರ್ಗಾವಣೆ ಎಂದುಕೊಂಡದ್ದೇಕೆ? ಅವರು ಅಧಿಕಾರದಲ್ಲಿದ್ದಾಗ ಹಣ ಪಡೆದೇ ವರ್ಗಾವಣೆ ಮಾಡುತ್ತಿದ್ದರಾ? ನನ್ನ ಪಾಡಿಗೆ ನಾನು ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲ ವಿಚಾರಕ್ಕೂ ನನ್ನ ಹೆಸರು ಎಳೆದು ತರಬೇಡಿ. ಇನ್‌ಸ್ಪೆಕ್ಟರ್ ವಿವೇಕಾನಂದ ಯಾರೆಂಬುದೇ ನನಗೆ ಗೊತ್ತಿಲ್ಲ.
-ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.