“ಮರ ಆಧಾರಿತ ಕೃಷಿ’ಅಭಿಯಾನ
ರೈತ ಸಹಭಾಗಿತ್ವ ಅತಿದೊಡ್ಡ ಅಭಿಯಾನಕ್ಕೆ ಮುಂದಾದ ಈಶ ಪ್ರತಿಷ್ಠಾನ
Team Udayavani, Aug 3, 2021, 4:48 PM IST
ಬೆಂಗಳೂರು: “ಕಾವೇರಿ ಕೂಗು’ ಭಾರಿ ಯಶಸ್ಸಿನ ಬೆನ್ನಲ್ಲೇ ಮತ್ತೂಂದು ರೈತ ಸಹಭಾಗಿತ್ವದ ಅತಿದೊಡ್ಡ ಅಭಿಯಾನಕ್ಕೆ ಈಶ ಪ್ರತಿಷ್ಠಾನ ಮುಂದಾ ಗಿದ್ದು, ಈ ಬಾರಿ “ಮರ ಆಧಾರಿತಕೃಷಿ’ ಅಭಿಯಾನವನ್ನು ಈ ತಂಡವು ಆರಂಭಿಸುತ್ತಿದೆ.
ಇದರಡಿ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದುದ್ದಕ್ಕೂ ಬರುವ ಒಂಬತ್ತು ಜಿಲ್ಲೆಗಳ57 ತಾಲೂಕುಗಳ ಅಂದಾಜು1,785 ಗ್ರಾಮ ಪಂಚಾಯ್ತಿಗಳಲ್ಲಿ 24 ಲಕ್ಷ ರೈತರನ್ನು ತಲುಪುವ ಗುರಿ ಹೊಂದಲಾಗಿದೆ. ಇದರೊಂದಿಗೆ ಉದ್ದೇಶಿತ ಅಭಿಯಾನವು ಮತ್ತೊಂದು ಐತಿಹಾಸಿಕ ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ ಎಂದು ಈಶ ಪ್ರತಿಷ್ಠಾನದ ಸಂಸ್ಥಾಪಕ ಜಗ್ಗಿ ವಾಸುದೇವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ಈಶ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆದ “ಕಾವೇರಿ ಕೂಗು’ ಅಭಿಯಾನದಡಿ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ
ಜಲಾನಯನ ಪ್ರದೇಶದಲ್ಲಿ ಅಂದಾಜು 1.10 ಕೋಟಿ ಸಸಿಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದೇವೆ. ಅಷ್ಟೇ ಅಲ್ಲ, ಕಾವೇರಿ ಕೊಳ್ಳದ 28 ಜಿಲ್ಲೆಗಳ 189 ತಾಲೂಕು ಗಳಲ್ಲಿ 33 ಸಾವಿರ ರೈತರನ್ನು ಒಗ್ಗೂಡಿಸಿದೆ.
ಈಗ ಅದರ ಮುಂದುವರಿದ ಭಾಗವಾಗಿ “ಮರ ಆಧಾರಿತ ಕೃಷಿ’ ಅಭಿಯಾನದಡಿ ಐದು ಪಟ್ಟು ಅಂದರೆ 5 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
890 “ಮರ ಮಿತ್ರ’ರು: ಇದಕ್ಕಾಗಿ 890″ಮರ ಮಿತ್ರ’ರನ್ನು ನೇಮಿಸಲಾಗಿದ್ದು, ಪಂಚಾಯ್ತಿ ಮಟ್ಟದಲ್ಲಿ ಇವರು ರೈತರನ್ನು ಉತ್ತೇಜಿಸಲಿದ್ದಾರೆ. ಈಗಾಗಲೇ ವಿವಿಧ ಪಂಚಾಯ್ತಿಗಳಲ್ಲಿ 1,800 ಮರ ಆಧಾರಿತ ಕೃಷಿ ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗಿದೆ.ಉತ್ತಮ ಸ್ಪಂದನೆಯೂ ದೊರಕಿದೆ. ಈ ಅಭಿಯಾನದಿಂದ ರೈತರ ಆದಾಯ ಶೇ.300ರಿಂದ ಶೇ.800ರಷ್ಟು ಹೆಚ್ಚಾಗಲಿದೆ.ನದಿ ಜತೆಗೆ ಅಂತರ್ಜಲ ಪುನರುಜೀವ ಗೊಳಿಸಿ, ಕಾವೇರಿ ಕೊಳ್ಳ ಪ್ರದೇಶದಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಶೇ. 40ರಷ್ಟು ವೃದ್ಧಿಯಾಗಲಿದೆ. 2030ರ ವೇಳೆಗೆ200-300 ಮಿಲಯನ್ ಟನ್ ಇಂಗಾಲ ಬೇರ್ಪಡಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
“ಸ್ಟೇಟ್ ಆಫ್ ದಿ ಆರ್ಟ್’ ಮೊಬೈಲ್ ಆ್ಯಪ್‌ಯೊಂದನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಹೆಸರು ನೋಂದಾಯಿಸಿಕೊಳ್ಳುವ ರೈತರ ಮನೆ ಬಾಗಿಲಿಗೇ “ಮರ ಮಿತ್ರ ‘ರು ಸಸಿಗಳನ್ನು ತಲುಪಿಸಲಿದ್ದಾರೆ. ರೈತರ ಹೆಸರು ಮಾತ್ರವಲ್ಲ; ಅವರಿಗೆ ವಿತರಿಸಿದ ಸಸಿಯ ಜಾತಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ¸ಬೇಡಿಕೆ ಸೇರಿದಂತೆ ಪ್ರತಿಯೊಂದು ದಾಖಲಿಸಿಕೊಳ್ಳಲಾಗುತ್ತದೆ. ಜತೆಗೆ ಸಸಿಗಳ ನೆಡುವುದರ ಬಗ್ಗೆ ತಾಂತ್ರಿಕ ಮಾಹಿತಿ ಕುರಿತು ಜ್ಞಾನವನ್ನೂ ಹಂಚಿಕೊಳ್ಳ ಲಾಗುವುದು. ಸ್ವಯಂ ಸೇವಕರೆಲ್ಲರೂಕೋವಿಡ್-19ರ ಮಾರ್ಗಸೂಚಿಗಳನ್ನು ಅನುಸರಿಸಲಿದ್ದಾರೆ ಎಂದರು. ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಇದ್ದರು.
16 ಸಾವಿರ ರೈತರಿಗೆ ತರಬೇತಿ
“ಕಾವೇರಿ ಕೂಗು’ಕನ್ನಡ ಫೇಸ್‌ಬುಕ್ ಪೇಜ್‌ಕಳೆದ ಒಂದು ತಿಂಗಳಲ್ಲಿ ಹತ್ತು ಲಕ್ಷ ರೈತರನ್ನು ತಲುಪಿದೆ! ಜತೆಗೆ ಲಾಕ್‌ಡೌನ್ ಅವಧಿಯಲ್ಲಿ ನಿತ್ಯ 12 ಸಾವಿರ ರೈತರನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕ ಸಾಧಿಸಿದೆ.ಕಳೆದ ಆರು ವಾರಗಳಲ್ಲಿ16 ಸಾವಿರಕ್ಕೂ ಅಧಿಕ ರೈತರಿಗೆ ತರಬೇತಿ
ನೀಡಲಾಗಿದೆ ಎಂದು ಈಶ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಕಾವೇರಿ ರಕ್ಷಣೆಯೊಂದೇ ಗುರಿ: ಸದ್ಗುರು
ಬೆಂಗಳೂರು: “ಕಾವೇರಿ ಸಂರಕ್ಷಣೆ ನಮ್ಮ ಮೊದಲ ಆದ್ಯತೆ. ಮೇಕೆದಾಟು ಆಗಲಿ ಮತ್ತೊಂದು ಯೋಜನೆಯಾಗಲಿ ಅದು ಸರ್ಕಾರ ಅಥವಾ ಜನಪ್ರತಿನಿಧಿಗಳು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’. ಇದು ಈಶ ಪ್ರತಿಷ್ಠಾನದ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಸ್ಪಷ್ಟನೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮ್ಮ ನಿಲುವು ಬಗ್ಗೆ ಸೋಮವಾರ ಸುದ್ದಿಗಾರರು ಪ್ರಶ್ನಿಸಿದಾಗ, “ಯೋಜನೆಗಳು ಮತ್ತು ಅವುಗಳ ಅನುಷ್ಠಾನ ವಿಚಾರದಲ್ಲಿ ಆಯಾ ರಾಜ್ಯ ಸರ್ಕಾರಗಳು ಸೂಕ್ತ ತೀರ್ಮಾನ ಕೈಗೊಳ್ಳುತ್ತವೆ. ನಮ್ಮ ಗುರಿ ಏನಿದ್ದರೂ ಕಾವೇರಿ ಮತ್ತು ಅದರ ವ್ಯಾಪ್ತಿಗೆ ಬರುವ ಜಲಾನಯನ ಪ್ರದೇಶದ ಮಣ್ಣಿನ ಸಂರಕ್ಷಣೆ ಹಾಗೂ ರೈತರ ಅಭಿವೃದ್ಧಿ ಆಗಿದೆ’ ಎಂದು ಸಮಜಾಯಿಷಿ ನೀಡಿದರು. “ಒಂದು ತಂಬಿಗೆಯಲ್ಲಿ ನೀರಿದ್ದಾಗ ಮಾತ್ರ ಅದನ್ನು ಯಾರುಕುಡಿಯಬೇಕು ಎಂಬುದರ ಚರ್ಚೆ ಬರುತ್ತದೆ. ಆಗ ಸೂಕ್ತ ನಿರ್ಧಾರಗಳನ್ನೂಕೈಗೊಳ್ಳಬಹುದು. ಆದರೆ, ತಂಬಿಗೆಯಲ್ಲಿ ನೀರಿಲ್ಲದಿದ್ದರೆ, ಯಾರು ಕುಡಿಯಬೇಕು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸೂಚ್ಯವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.