ತ್ರಿವಿಕ್ರಮ ಎಂಟ್ರಿಗೆ ಮುಹೂರ್ತ ಫಿಕ್ಸ್
Team Udayavani, May 11, 2022, 2:03 PM IST
ಕ್ರೇಜಿಸ್ಟಾರ್ ರವಿ ಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ನಾಯಕನಾಗಿ ಅಭಿನಯಿಸಿರುವ “ತ್ರಿವಿಕ್ರಮ’ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಸಿನಿಮಾದ ಬಿಡುಗಡೆಯ ಕುರಿತು ತಿಳಿಸುವ ಸಲುವಾಗಿಯೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದ ಚಿತ್ರತಂಡ, “ತ್ರಿವಿಕ್ರಮ’ನ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಘೋಷಿಸಿದೆ. ಅಂದಹಾಗೆ, ವಿಕ್ರಂ ನಾಯಕನಾಗಿರುವ ಚೊಚ್ಚಲ ಚಿತ್ರ “ತ್ರಿವಿಕ್ರಮ’ ಇದೇ ಜೂ. 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಚಿತ್ರದ ಬಗ್ಗೆ ಮಾತನಾಡಿದ ನಟ ವಿಕ್ರಂ, “ಇದೊಂದು ಹೈ ವೋಲ್ಟೇಜ್ ಲವ್ ಕಂ ಆ್ಯಕ್ಷನ್ ಸಬ್ಜೆಕ್ಟ್ ಸಿನಿಮಾ. ನಿರ್ಮಾಪಕರು ತುಂಬ ಖರ್ಚು ಮಾಡಿ ಅದ್ಧೂರಿಯಾಗಿ ಸಿನಿಮಾ ವನ್ನು ಮಾಡಿದ್ದಾರೆ. ಇದರಲ್ಲಿ ನನ್ನದು ಮಿಡಲ್ ಕ್ಲಾಸ್ ಹುಡುಗನ ಪಾತ್ರ. ಲವ್, ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಸಿನಿಮಾದಲ್ಲಿರುವುದರಿಂದ, “ತ್ರಿವಿಕ್ರಮ’ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂದರು.
ಇದನ್ನೂ ಓದಿ: ತೆರೆಮೇಲೆ “ಭಿಕ್ಷುಕ”ನ ಚಿತ್ರಣ
“ಸಿನಿಮಾಕ್ಕೆ ಏನೇನು ಬೇಕೋ ಅದೆಲ್ಲವನ್ನು ಕೊಟ್ಟಿದ್ದೇನೆ. ಈಗ ಕೊಟ್ಟಿರುವುದನ್ನು ಪ್ರೇಕ್ಷಕರಿಂದ ವಾಪಾಸ್ ಕೇಳುವ ಸಮಯ ಬಂದಿದೆ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ಚಿತ್ರರಂಗದ ಎಲ್ಲರೂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ಸಿನಿಮಾ ನಿಜ ಮಾಡುತ್ತದೆ’ ಎಂಬ ಭರವಸೆಯ ಮಾತುಗಳು ನಿರ್ಮಾಪಕ ರಾಮ್ಕೋ ಸೋಮಣ್ಣ ಅವರದ್ದು.
“ಸಿನಿಮಾದ ಕಥೆ ಹೊಸಥರದಲ್ಲಿದೆ. ನಾಯಕ ವಿಕ್ರಂ ತಮ್ಮ ಪಾತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಈಗಾಗಲೇ ಸಿನಿಮಾಕ್ಕೆ ಎಲ್ಲ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ’ ಎನ್ನುವುದು ನಿರ್ದೇಶಕ ಸಹನಾ ಮೂರ್ತಿ ಮಾತು. ನಾಯಕ ನಟಿ ಆಕಾಂಕ್ಷಾ ಶರ್ಮ ಕೂಡ ತಮ್ಮ ಚೊಚ್ಚಲ ಕನ್ನಡ ಸಿನಿಮಾ ಮತ್ತು ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗು ವಂತಿದೆ ಎಂಬ ಭರವಸೆ ವ್ಯಕ್ತಪಡಿ ಸಿದರು. ಕಾರ್ಯ ಕ್ರಮದಲ್ಲಿ ಹಾಜರಿದ್ದ ಹಿರಿಯ ನಟಿ ತಾರಾ ಅನುರಾಧಾ, ನಟರಾದ ಶರಣ್, ಸಾಧುಕೋಕಿಲ, ಮನುರಂಜನ್ ರವಿಚಂದ್ರನ್, ನಿರ್ದೇಶಕರಾದ ಶಿವಮಣಿ, ಸಂತೋಷ್ ಆನಂದರಾಮ್, ಬಹದ್ದೂರ್ ಚೇತನ್ “ತ್ರಿವಿಕ್ರಮ’ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
“ಸೋಮಣ್ಣ ಟಾಕೀಸ್’ ಬ್ಯಾನರ್‌ನಲ್ಲಿ ರಾಮ್ಕೋ ಸೋಮಣ್ಣ ನಿರ್ಮಿಸುತ್ತಿರುವ “ತ್ರಿವಿಕ್ರಮ’ ಚಿತ್ರಕ್ಕೆ ಸಹನಾ ಮೂರ್ತಿ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ವಿಜಯ ಪ್ರಕಾಶ್, ಸಂಚಿತ್ ಹೆಗ್ಡೆ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ತ್ರಿವಿಕ್ರಮ’ ಸಿನಿಮಾದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇತರ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯ ಮೂಲಕ ಪ್ರಚಾರ ಕಾರ್ಯಗಳಿಗೆ ಇನ್ನಷ್ಟು ವೇಗ ಕೊಡುವ ಮಾತುಗಳನ್ನಾಡಿದೆ ಚಿತ್ರತಂv
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.