![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 11, 2021, 7:37 AM IST
ಮೇಷ: ಹಂತಹಂತವಾಗಿ ಗೊಂದಲಗಳು ತಿಳಿಯಾಗಲಿವೆ. ಕೆಲವೊಮ್ಮೆ ಅದೃಷ್ಟದ ಆಸರೆ ಗೋಚರಕ್ಕೆ ಬರುತ್ತದೆ. ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು. ಜಾಗ್ರತೆ ಇರಲಿ.
ವೃಷಭ: ಸಾಂಸಾರಿಕವಾಗಿ ಹೊಂದಾಣಿಕೆಯು ಗಟ್ಟಿಯಾಗಿರಲಿ. ಹಿರಿಯರ ಹಾಗೂ ಮಕ್ಕಳ ಆರೋಗ್ಯ ಆಗಾಗ ಕೈಕೊಡಲಿದೆ. ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಇರುತ್ತದೆ. ದೂರ ಸಂಚಾರದ ವಿಷಯ ಬೇಡ.
ಮಿಥುನ: ಚಾಲನೆಯಲ್ಲಿ ಗಮನವಿರಲಿ. ವಾಹನ ಖರೀದಿಗೆ ಅನುಕೂಲವಾಗಲಿದೆ. ಆಗಾಗ ಕೊಂಚ ಗೊಂದಲಕ್ಕೆ ಕಾರಣವಾಗುವ ತಾಪತ್ರಯವನ್ನು ಅನುಭವಿಸ ಬೇಕಾಗುತ್ತದೆ. ಸ್ವಯಂಕೃತ ಅಪರಾಧವನ್ನು ಮಾಡದಿರಿ.
ಕರ್ಕ: ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ಅವಿವಾಹಿತರು ನಿರಾಶಾ ಮನೋಭಾವವನ್ನು ಹೊಂದಲಿ ದ್ದಾರೆ. ಅನಾವಶ್ಯಕವಾಗಿ ಹಿರಿಯರೊಡನೆ ವಾದ-ವಿವಾದಗಳಿಗೆ ಕಾರಣರಾಗದಿರಿ. ಹಿತಶತ್ರುಗಳ ನಡವಳಿಕೆ ಮೇಲೆ ಗಮನವಿರಲಿ.
ಸಿಂಹ :ಆಗಾಗ ಧನಾಗಮನದಿಂದ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಮಾತ್ರವಲ್ಲ ಚಾಲನೆಯಲ್ಲಿ ಕೂಡಾ ಜಾಗ್ರತೆ ಇರಲಿ. ಕಾರ್ಯಕ್ಷೇತ್ರದಲ್ಲಿ ಹಲವಾರು ವಾಸ್ತವ ಅವಕಾಶಗಳು ನಿಮಗೆ ಸಿಗಲಿದೆ.
ಕನ್ಯಾ: ಧನ ಸಂಗ್ರಹದಿಂದ ಋಣಬಾಧೆಯು ನಿವಾರಣೆಯಾಗಿ ಸಂತಸವಾಗಲಿದೆ. ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಬಹು ಸಮಯದ ನಂತರ ನಿಮಗೆ ಯಶಸ್ಸು ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ತುಲಾ: ದೂರಸಂಚಾರದಿಂದ ನಿಮ್ಮ ಮನೋಕಾಮನೆ ಗಳು ಸಿದ್ಧಿಯಾಗಲಿವೆ. ನವದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತಂದೀತು. ಹೂಡಿಕೆ ವಿಸ್ತರಣೆಗಳು, ವ್ಯಾಪಾರ, ವ್ಯವಹಾರಗಳಿಗೆ ಅನುಕೂಲಕರವಾಗಲಿದೆ. ಶುಭವಿದೆ.
ವೃಶ್ಚಿಕ: ವ್ಯವಹಾರದಲ್ಲಿ ಆಗಾಗ ಹಿನ್ನಡೆಯನ್ನು ಅನುಭವಿಸಿ ದರೂ ಧನಾಗಮನವು ಪರಿಸ್ಥಿತಿಯನ್ನು ಸುಧಾರಿಸಲಿದೆ. ಕೆಲವೊಮ್ಮೆ ನಿಮ್ಮ ಪ್ರಯತ್ನಶೀಲತೆಗೆ ಮಹತ್ತರ ಬದಲಾವಣೆ ಕಂಡುಬರುವುದು. ಶುಭಮಂಗಲ ಕಾರ್ಯ ನಡೆದೀತು.
ಧನು: ಕಾರ್ಯರಂಗದಲ್ಲಿ ಹಾಗೂ ವೃತ್ತಿರಂಗದಲ್ಲಿ ಸಾವಧಾನ ದಿಂದ ಮುಂದುವರಿಯಬೇಕಾಗುತ್ತದೆ. ಅನಾವಶ್ಯಕ ಅಪವಾದ, ಅವಮಾನ ಕಿರಿಕಿರಿ ಪ್ರಸಂಗವನ್ನು ಎದುರಿಸಬೇಕಾದೀತು. ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸದಲ್ಲಿ ವಿಶ್ವಾಸವಿರಲಿ.
ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಕೂಡಾ ಕೀರ್ತಿ ಹೆಚ್ಚಿ ಆದರಾದಿಗಳಿಗೆ ಪಾತ್ರರಾಗುವಿರಿ. ಜೊತೆಗೆ ಅದರಿಂದ ಆರ್ಥಿಕ ಅನುಕೂಲವೂ ಒದಗಿ ಬರುವುದು. ಅವಿವಾಹಿತರ ವೈವಾಹಿಕ ಭಾಗ್ಯಕ್ಕೆ ಅದೃಷ್ಟ ಖುಲಾಯಿಸಲಿದೆ. ಮುನ್ನಡೆಯಿರಿ.
ಕುಂಭ: ಆದಾಯ ಮಾರ್ಗಸೂಚಿಗೆ ಹಲವಾರು ಮಾರ್ಗ ಗಳು ಗೋಚರಕ್ಕೆ ಬಂದಾವು. ಸದುಪಯೋಗಿಸಿಕೊಳ್ಳಿರಿ. ಯಾವುದೇ ವಿಚಾರದಲ್ಲಿ ದುಡುಕು ವರ್ತನೆಗೆ ಕಾರಣರಾಗದಂತೆ ವರ್ತಿಸಿರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುನ್ನಡೆ ಕಂಡಾರು.
ಮೀನ: ನಿರುದ್ಯೋಗಿಗಳ ಹಿನ್ನಡೆ ಅನಿರೀಕ್ಷಿತ ರೂಪದಲ್ಲಿ ನಿವಾರಣೆಯಾಗುತ್ತದೆ. ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಕೌಟುಂಬಿಕವಾಗಿ ಹಠಾತ್ ಏರಿಳಿತಗಳು ಕಂಡುಬಂದಾವು. ದೂರಸಂಚಾರದ ಅವಕಾಶ ಕಾರ್ಯಸಾಧನೆಗೆ ಅನುಕೂಲವಾಗಲಿದೆ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.