![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jan 10, 2022, 7:20 AM IST
ಅಂಕಾರಾ:“ಅಯ್ಯೋ ನಮ್ಮನೆ ದನ ಹಾಲೇ ಕೊಡಲ್ಲ ಅಂತಿದೆ. ಎಷ್ಟು ಒಳ್ಳೇ ಪಶು ಆಹಾರ ಕೊಟ್ರೂ ಕಾಣೆ..’
ಇದು ಗ್ರಾಮೀಣ ಪ್ರದೇಶದಲ್ಲಿನ ಹೈನು ವ್ಯವಸಾಯಗಾರರ ಎಂದಿನ ಅಳಲು. ಆದರೆ, ಟರ್ಕಿಯ ಹೈನು ವ್ಯವಸಾಯಗಾರ ಇಜೆಟ್ ಕಾಕ್ ಎಂಬವರು ಗೋವುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಪಡೆಯಲು ವರ್ಚುವಲ್ ರಿಯಾಲಿಟಿ (ವಿ.ಆರ್) ಹೆಡ್‌ಸೆಟ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮೂಲಕ ಹೆಚ್ಚು ಹಾಲು ಪಡೆಯಲು ಹೊಸ ಉಪಾಯ ಕಂಡುಕೊಂಡಿದ್ದಾರೆ.
ಏನದು ಉಪಾಯ?
ವಿ.ಆರ್. ಹೆಡ್‌ಸೆಟ್‌ಗಳನ್ನು ಗೋವುಗಳ ಕಿವಿಗಳಿಗೆ ಹಾಕುವುದರಿಂದ ಅದರ ಮೂಲಕ ಕೇಳುವ ಮಧುರವಾಗಿರುವ ಸಂಗೀತದಿಂದ ಅವುಗಳಿಗೆ ಹೆಚ್ಚು ಖುಷಿಯಾಗುತ್ತದೆ. ಹೀಗಾಗಿ, ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುವುದಕ್ಕೆ ಅನುಕೂಲ ಎಂದು ಒಂದು ಅಧ್ಯಯನದಿಂದ ದೃಢಪಟ್ಟಿದೆ. ಅಲ್ಲದೇ, ಗೋವುಗಳು ಹೆಚ್ಚು ಹೆಚ್ಚು ಹಸಿರು ಹುಲ್ಲುಗಾವಲನ್ನು ನೋಡುವುದರಿಂದ ಹೆಚ್ಚಿನ ಹಾಲು ಕೊಡುವುದಕ್ಕೆ ಅವುಗಳಿಗೆ ಸ್ಫೂರ್ತಿಯೂ ಸಿಗುತ್ತದೆ ಎಂದೂ ವರದಿ ಹೇಳಿದೆ ಎಂದು ರೈತ ಇಜೆಟ್ ಕಾಕ್ “ದ ಸನ್’ ಪತ್ರಿಕೆಗೆ ಹೇಳಿದ್ದಾರೆ.
ಇದನ್ನೂ ಓದಿ:ನಿಗದಿತ ದರದಲ್ಲೇ ಚಿಕಿತ್ಸೆ ನೀಡಿ : ಖಾಸಗಿ ಆಸ್ಪತ್ರೆಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ
22ರಿಂದ 27 ಲೀಟರ್:
ಈ ಅಧ್ಯಯನ ವರದಿಯಿಂದ ಸ್ಫೂರ್ತಿಗೊಂಡ ರೈತ ಇಜೆಟ್ ಕಾಕ್ ತಮ್ಮ ಮನೆಯ ಹಟ್ಟಿಯಲ್ಲಿ ಕೂಡ ಅದನ್ನು ಪ್ರಯೋಗ ಮಾಡಿ ನೋಡಿದ್ದಾರೆ. ಅವರಿಗೆ 22 ರಿಂದ 27 ಲೀಟರ್ ಹಾಲು ಒಂದು ಬಾರಿಗೆ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆ ಐಡಿಯಾ ಹೊಳೆಯುವುದಕ್ಕೆ ಮೊದಲು ಗೋವುಗಳನ್ನು ಸಂತೋಷದಿಂದ ಇರಿಸುವ ನಿಟ್ಟಿನಲ್ಲಿ ಮಧುರವಾದ ಸಂಗೀತವನ್ನು ಹಾಕುತ್ತಿದ್ದರಂತೆ. ಅಂದ ಹಾಗೆ ಮೊದಲ ಬಾರಿಗೆ ಇಂಥ ಹೆಡ್‌ಸೆಟ್‌ಗಳನ್ನು ಗೋವುಗಳಿಗೆ ಬಳಕೆ ಮಾಡಲು ಸಾಧ್ಯ ಎಂಬ ಬಗ್ಗೆ ಮೊದಲು ಅಧ್ಯಯನ ನಡೆದದ್ದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.