ಮೀನು ತಿಂದು ದೇವಸ್ಥಾನಕ್ಕೆ ಹೋದವರಿಂದ ಪ್ರಧಾನಿ ಮೋದಿಗೆ ಸಂಸ್ಕೃತಿಯ ಪಾಠ ಅಗತ್ಯವಿಲ್ಲ!
ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ - ಬಿಜೆಪಿ ನಡುವೆ ಟ್ವೀಟ್ ವಾರ್
Team Udayavani, Jan 3, 2020, 6:24 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತುಮಕೂರು ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರ ಮಾತನಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಟೀಕಿಸಿರುವುದಕ್ಕೆ ಬಿಜೆಪಿ ಕರ್ನಾಟಕ ಟ್ವೀಟ್ ಮೂಲಕವೇ ತಿರುಗೇಟು ನೀಡಿದೆ.
ಮೀನು ತಿಂದು ದೇವಸ್ಥಾನಕ್ಕೆ ಪ್ರವೇಶ ಮಾಡಿದ ಸಿದ್ದರಾಮಯ್ಯ ಈ ನೆಲದ ಸಂಸ್ಕೃತಿ ಪಾವಿತ್ರ್ಯತೆಯ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಪಾಠ ಮಾಡುತ್ತಿರುವುದು ವಿಪರ್ಯಾಸ. ಪವಿತ್ರವಾದ ಕುಂಕುಮ ಕಂಡರೆ ಭಯಪಡುವ ಹಾಗೂ ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಸಿದ್ದರಾಮಯ್ಯನವರ ಮನಸ್ಸಿನ ಕೊಳೆಯಲ್ಲಿ ತಾಯಿ ಗಂಗೆಯಿಂದಲೂ ತೊಳೆಯಲು ಸಾಧ್ಯವಿಲ್ಲ’ ಎಂದು ಟ್ವೀಟ್ ಮಾಡಿದೆ.
ಮೀನು ತಿಂದು ದೇವಸ್ಥಾನಕ್ಕೆ ಪ್ರವೇಶ ಮಾಡಿದ @siddaramaiah ಈ ನೆಲದ ಸಂಸ್ಕೃತಿ, ಪಾವಿತ್ರ್ಯತೆಯ ಬಗ್ಗೆ ಪ್ರಧಾನಿ @narendramodi ಅವರಿಗೆ ಪಾಠ ಮಾಡುತ್ತಿರುವುದು ವಿಪರ್ಯಾಸ.
ಪವಿತ್ರವಾದ ಕುಂಕುಮ ಕಂಡರೆ ಭಯಪಡುವ ಹಾಗೂ ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಸಿದ್ದರಾಮಯ್ಯನವರ ಮನಸ್ಸಿನ ಕೊಳೆಯನ್ನು ತಾಯಿ ಗಂಗೆಯಿಂದಲೂ ತೊಳೆಯಲು ಸಾಧ್ಯವಿಲ್ಲ. https://t.co/wkYgCzxdRJ
— BJP Karnataka (@BJP4Karnataka) January 2, 2020
ಮತ್ತೊಂದೆಡೆ ಸಚಿವ ಸುರೇಶ್‌ಕುಮಾರ್ ಅವರು ಸಹ ಟ್ವೀಟ್ ಮಾಡಿ, ಸಿದ್ದರಾಮಯ್ಯ ಅವರ ಕಾಳೆಲೆದಿದ್ದು, ಕೊಳಕು ರಾಜಕೀಯದಲ್ಲಿಯೇ ಸದಾ ಮುಳುಗಿರುವವರಿಗೆ ಶುದ್ಧ ಸರೋವರದಲ್ಲಿಯೂ ಕೊಳಕೇ ಕಾಣುವುದು ಸಹಜ ಎಂದು ಹೇಳಿದ್ದಾರೆ.
ಕೊಳಕು ರಾಜಕೀಯದಲ್ಲಿಯೇ ಸದಾ ಮುಳುಗಿರುವವರಿಗೆ ಶುದ್ಧ ಸರೋವರದಲ್ಲಿಯೂ ಕೊಳಕೇ ಕಾಣುವುದು ಅತ್ಯಂತ ಸಹಜ. https://t.co/mXY5tVouJw
— S.Suresh Kumar, Minister – Govt of Karnataka (@nimmasuresh) January 2, 2020
ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನವಿದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಅಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕುಳ್ಳರಿಸಿಕೊಂಡು ಕೊಳಕು ರಾಜಕೀಯ ಭಾಷಣ ಮಾಡಿದ ನರೇಂದ್ರಮೋದಿಯವರೇ ನಿಮ್ಮನ್ನು ಆ ಪವಿತ್ರ ನೆಲ ಕ್ಷಮಿಸದು ‘ಅಲ್ಲಿ ಮೋದಿಯವರು ರಾಜಕೀಯ ವಿಚಾರ ಮಾತನಾಡಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ.
ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ.ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ @narendramodi ಅವರೇ, ನಿಮ್ಮನ್ನು ಆ ಪವಿತ್ರ ನೆಲ ಕ್ಷಮಿಸದು.
— Siddaramaiah (@siddaramaiah) January 2, 2020
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.