ಫೋಟೋಗ್ರಾಫರ್ ಮರೆತ ಫೋಟೋ ವೈರಲ್
Team Udayavani, Feb 21, 2022, 8:05 AM IST
ಮದುವೆ ಮನೆಯೆಂದರೆ ಅಲ್ಲಿ ಬಗೆ ಬಗೆಯ ಖಾದ್ಯ ಇರಲೇಬೇಕು. ಆದರೆ ಈ ರೀತಿಯ ಔತಣಕೂಟಗಳಲ್ಲಿ ಆಹಾರ ಎಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಹಾಳು ಕೂಡ ಆಗುತ್ತದೆ. ಅಂತದ್ದೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅಂತದ್ದೊಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಯಾವುದೋ ಔತಣಕೂಟದಲ್ಲಿ ಜನರು ತಿಂದು ತೊಳೆಯಲೆಂದು ಇಟ್ಟಿರುವ ತಟ್ಟೆಗಳು, ಅದರ ಇನ್ನೊಂದು ಭಾಗದಲ್ಲಿ ಅದೇ ತಟ್ಟೆಯಲ್ಲಿ ವೇಸ್ಟ್ ಆಗಿ ಬಂದ ಆಹಾರವನ್ನು ರಾಶಿ ಹಾಕಿರುವುದು ಕಾಣುತ್ತದೆ. ಆ ತಟ್ಟೆಯನ್ನೆಲ್ಲ ಯಾವುದೋ ಒಬ್ಬ ವ್ಯಕ್ತಿ ತೊಳೆಯಲು ಕುಳಿತಿರುವ ಚಿತ್ರಣವದು.
ಫೋಟೋ ಹಂಚಿಕೊಂಡಿರುವ ಅವನೀಶ್, “ಮದುವೆ ಮನೆಯಲ್ಲಿ ನಿಮ್ಮ ಫೋಟೋಗ್ರಾಫರ್ ತೆಗೆಯಲು ಮರೆತ ಫೋಟೋ’ ಎಂದು ಬರೆದುಕೊಂಡಿದ್ದಾರೆ.
ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ.
The photo that your wedding photographer missed.
Stop wasting FOOD. pic.twitter.com/kKx9Mxadpp
— Awanish Sharan (@AwanishSharan) February 18, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.