Uchila ದಸರಾ ಉತ್ಸವಕ್ಕೆ ಇನ್ನಷ್ಟು ಮೆರುಗು
ಮೊಗವೀರ ಮಹಾಜನ ಸಂಘದ 100ನೇ ಮಹಾಸಭೆಯಲ್ಲಿ ಜಿ. ಶಂಕರ್
Team Udayavani, Jul 8, 2024, 12:12 AM IST
ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಮಾಜ ಭಾಂದವರು ಮತ್ತು ಭಕ್ತರ ಸಹಕಾರ, ಸಹಯೋಗದಿಂದ ನಡೆಯುತ್ತಿರುವ ಉಚ್ಚಿಲ ದಸರಾ ಉತ್ಸವವು ಲೋಕ ಖ್ಯಾತಿ ಗಳಿಸಿದ್ದು, ಭವಿಷ್ಯದಲ್ಲಿ ಇದನ್ನು ಇನ್ನಷ್ಟು ಶ್ರದ್ಧಾ ಭಕ್ತಿ, ಶಿಸ್ತುಬದ್ಧವಾಗಿ ಹಾಗೂ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಕಲ್ಪದ ಸಾಕಾರಕ್ಕೆ ಗ್ರಾಮಸಭೆಗಳು, ಸಂಯುಕ್ತ ಸಭೆಗಳು ಸಹಿತ ಮಹಾಜನ ಸಂಘದ ಸದಸ್ಯರು ಇನ್ನಷ್ಟು ಸ್ಫೂರ್ತಿಯಿಂದ ಶ್ರಮಿಸಬೇಕಿದೆ ಎಂದು ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್ ಹೇಳಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಉಚ್ಚಿಲ ಮೊಗವೀರ ಭವನದಲ್ಲಿ ರವಿವಾರ ನಡೆದ 100ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಣ್ಣೆಕುದ್ರು ಮೂಲ ಸಂಸ್ಥಾನದಿಂದ ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಆಷಾಢ ಮಾಸದಲ್ಲಿ ಬರುವ ಬೆಣ್ಣೆಕುದ್ರು ಕುಲಮಹಾಸ್ತ್ರಿ ಅಮ್ಮನವರ ಪ್ರಸಾದವನ್ನು ಗ್ರಾಮಸಭೆಗಳ ವ್ಯಾಪ್ತಿಯಲ್ಲಿ ವಿಜೃಂಭಣೆಯಿಂದ ಬರಮಾಡಿಕೊಳ್ಳಬೇಕು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುವಂತೆ ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಮಹಾಜನ ಸಂಘದ ಮೂಲಕ ಹೆಚ್ಚಿನ ರೀತಿಯ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ದೇವಸ್ಥಾನದ ನಿತ್ಯ ಅನ್ನದಾನ ಸೇವಾ ಕೂಪನ್ ಅನ್ನು ಬಿಡುಗಡೆಗೊಳಿಸಲಾಯಿತು.
ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್, ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕೋಶಾಧಿಕಾರಿ ಭರತ್ ಕುಮಾರ್ ಎರ್ಮಾಳು, ಸಮಿತಿ ಪ್ರಮುಖರಾದ ಶಂಕರ್ ಸಾಲ್ಯಾನ್, ವಿನಯ ಕರ್ಕೇರ, ನಾರಾಯಣ ಸಿ. ಕರ್ಕೇರ, ಶಿವಕುಮಾರ್, ಕೇಶವ ಎಂ. ಕೋಟ್ಯಾನ್, ಸಂಜೀವ ಮೆಂಡನ್, ಸುರೇಶ್ ಮೆಂಡನ್, ಯು. ಗಣೇಶ್, ವಿಜಯ ಕುಂದರ್, ರವೀಂದ್ರ ಶ್ರೀಯಾನ್ ಹಿರಿಯಡಕ, ಸತೀಶ್ ಅಮೀನ್ ಬಾಕೂìರು, ಭುಜಂಗ ಗುರಿಕಾರ, ಗಂಗಾಧರ ಸುವರ್ಣ, ಶರಣ್ ಕುಮಾರ್ ಮಟ್ಟು, ಕೇಶವ ಶ್ರೀಯಾನ್ ಗುಡ್ಡೆಕೊಪ್ಲ, ಯಾದವ ಸಾಲ್ಯಾನ್ ಕುದ್ರೋಳಿ, ಮೋಹನ್ ಬೆಂಗ್ರೆ ಮಂಗಳೂರು, ಅನಿಲ್ ಕುಮಾರ್ ಮಂಗಳೂರು, ಮನೋಜ್ ಕಾಂಚನ್ ಎರ್ಮಾಳ್, ದಿನೇಶ್ ಕೋಟ್ಯಾನ್ ಮೂಳೂರು, ರತ್ನಾಕರ ಸಾಲ್ಯಾನ್ ಮಲ್ಪೆ, ಶಿವರಾಮ ಕೋಟ, ರಾಜ ಎಂ. ಸಾಲ್ಯಾನ್, ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ ಬೋಳೂರು ವೇದಿಕೆಯಲ್ಲಿದ್ದರು.ವಿವಿಧ ಗ್ರಾಮಸಭೆ, ಸಂಯುಕ್ತ ಸಭೆಗಳ ಪ್ರತಿನಿಧಿಗಳು ಸಹಿತ ಮಹಾಜನ ಸಂಘದ ಸದಸ್ಯರು ಉಪಸ್ಥಿತರಿದ್ದರು.
ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.