ಉದಯವಾಣಿ-ಜಿಲ್ಲಾಡಳಿತ: ಮಾ.2ರಂದು ಮಳೆ ಕೊಯ್ಲು ಕಾರ್ಯಾಗಾರ
ಜೋಸೆಫ್ ರೆಬೆಲ್ಲೋ ಅವರಿಂದ ತಾಂತ್ರಿಕ ಮಾಹಿತಿ
Team Udayavani, Mar 2, 2024, 11:27 AM IST
ಮಣಿಪಾಲ: ಉದಯವಾಣಿ, ಜಿಲ್ಲಾಡಳಿತ, ಜಿ.ಪಂ.ಜತೆಯಾಗಿ ಸಾರ್ವಜನಿಕರಲ್ಲಿ ಮಳೆ ನೀರು ಕೊಯ್ಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾ.2ರಂದು ಅಪರಾಹ್ನ 3ರರಿಂದ 5ರ ವರೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಳೆ ನೀರು ಕೊಯ್ಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಸಹಿತವಾಗಿ ಅಪಾರ್ಟ್‌ಮೆಂಟ್, ಕಟ್ಟಡ ಮಾಲಕರು, ಪ್ಲಂಬರ್, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ನಗರ ಸಭೆಯ ಸ್ವತ್ಛತ ರಾಯಭಾರಿ ಆಗಿರುವ, ಮಳೆ ನೀರು ಕೊಯ್ಲು ತಜ್ಞ ಜೋಸೆಫ್ ಜಿ.ಎಂ. ರೆಬೆಲ್ಲೋ ಅವರು ಮಳೆ ನೀರು ಕೊಯ್ಲು ವಿಧಾನದಲ್ಲಿ ವಿಶೇಷ ಅನುಭವ ಹೊಂದಿದ್ದು, ಕಾರ್ಯಾಗಾರದಲ್ಲಿ ಈ ಬಗ್ಗೆ ತಾಂತ್ರಿಕ ತರಬೇತಿ ನೀಡಲಿದ್ದಾರೆ. ಇವರು ಜಿಲ್ಲೆ ಮತ್ತು ರಾಜ್ಯದ ಕುಡಿಯುವ ನೀರಿನ ಸಂಪನ್ಮೂಲ ಮತ್ತು ಸಮಸ್ಯೆ ಬಗ್ಗೆ ಅರಿತು ವಿವಿಧ ಕಡೆಗಳಲ್ಲಿ
ಶಿಬಿರಾರ್ಥಿಗಳ ಮೂಲಕ 2,500ಕ್ಕೂ ಮಿಗಿಲಾಗಿ ಮಳೆ ನೀರು ಕೊಯ್ಲು, ಜಲ ಮರುಪೂರಣ ಘಟಕ ನಿರ್ಮಿಸಿದ್ದಾರೆ.
ಆಧುನಿಕತೆ ಮತ್ತು ಅಭಿವೃದ್ಧಿ ನಾಗಾಲೋಟದಲ್ಲಿ ನಾವಿಂದು ಜಲ ಸಂರಕ್ಷಣೆ ವಿಚಾರವನ್ನು ನಿರ್ಲಕ್ಷ್ಯ ಮಾಡುವಂತಾಗಿದೆ.
ಸಕಲ ಜೀವರಾಶಿಗೆ ಅಗತ್ಯ ಇರುವ ನೀರಿನ ಬಗ್ಗೆ ಜಾಗೃತಿ ಅಗತ್ಯ. ಈ ನಿರಾಸಕ್ತಿಯಿಂದಲೇ ಪ್ರತೀ ವರ್ಷ ಜಲಕ್ಷಾಮ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಮನೆ ಮೇಲೆ ಬೀಳುವ ನೀರನ್ನು ತೆರೆದ ಬಾವಿಗೆ ಅಥವಾ ಕೊಳವೆ ಬಾವಿಗೆ ವೈಜ್ಞಾನಿಕ ರೀತಿಯಲ್ಲಿ ಜಲ ಮರುಪೂರಣ ಮಾಡಿದರೆ ಅತೀ ವೇಗದಲ್ಲಿ ಮತ್ತು ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರನ್ನು ಭೂ ಗರ್ಭದಲ್ಲಿ ಸೇರಿಸಿಕೊಳ್ಳಬಹುದು. ಅಪಾರ ಜಲ ಸಂಪತ್ತನ್ನು ಮತ್ತೆ ಮರು ಪಡೆಯಬಹುದಾಗಿದೆ ಎಂಬುದು ರೆಬೆಲ್ಲೊ
ಅವರ ಆಶಯ.
ಅನೇಕರು ಮನೆಯಲ್ಲಿ ಮಳೆಕೊಯ್ಲು ಮಾಡಬೇಕು ಎಂದುಕೊಂಡಿರುತ್ತಾರೆ. ಆದರೆ ಮಾಡುವ ವಿಧಾನದ ಬಗ್ಗೆ ಗೊಂದಲ,
ಮಾಹಿತಿ ಕೊರತೆ ಅವರಲ್ಲಿದೆ. ಉದಯವಾಣಿ-ಜಿಲ್ಲಾಡಳಿತ ಸಹಯೋಗದಲ್ಲಿ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಪಡೆದು ಮನೆಯಲ್ಲಿ ಸುಲಭವಾಗಿ ಮಳೆಕೊಯ್ಲು ಅಳವಡಿಸಿಕೊಳ್ಳಬಹುದು.*ಜೋಸೆಫ್ ಜಿ. ಎಂ. ರೆಬೆಲ್ಲೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.