Udayavani: “ದೀಪಾವಳಿ ಧಮಾಕಾ 2023” ಲಕ್ಕಿ ಡ್ರಾ ವಿಜೇತರ ಆಯ್ಕೆ
"ವಿಶೇಷತೆಗಳ ವಿಶೇಷಾಂಕ ಓದುಗರ ನೆಚ್ಚಿನ ಹೊತ್ತಗೆ"
Team Udayavani, Dec 15, 2023, 11:37 PM IST
ಮಣಿಪಾಲ: ವಿಶೇಷತೆಗಳನ್ನು ಹೊತ್ತು ತರುವ ಉದಯವಾಣಿ ವಿಶೇಷಾಂಕ ಓದುಗರ ನೆಚ್ಚಿನ ಹೊತ್ತಗೆಯಾಗಿದೆ. ಶಾಲಾ ದಿನಗಳಲ್ಲೇ ಅತ್ಯಂತ ಆಸಕ್ತಿಯಿಂದ ವಿಶೇಷಾಂಕವನ್ನು ಓದುತ್ತಿದ್ದ ನಾನು ಅದರಲ್ಲಿ ಬರುತ್ತಿದ್ದ ಚಿತ್ರ, ವ್ಯಂಗ್ಯ ಚಿತ್ರಗಳನ್ನು ಪುಸ್ತಕದ ಪುಟಗಳಲ್ಲಿ ಅಂಟಿಸುತ್ತಿದ್ದ ನೆನಪು ಈಗಲೂ ಹಸುರಾಗಿದೆ. ಹಂತ ಹಂತವಾಗಿ ವಿಶೇಷತೆಗಳನ್ನು ಮೈಗೂಡಿಸಿಕೊಂಡು ಬಂದಿರುವ ಉದಯವಾಣಿಯ ದೀಪಾವಳಿ ವಿಶೇಷಾಂಕಕ್ಕೆ ದೀಪಾವಳಿ ಧಮಾಕಾ ಚಿನ್ನದ ಮೆರುಗನ್ನು ನೀಡಿದೆ ಎಂದು ಮಂಗಳೂರಿನ ಮುಕುಂದ್ ಎಂಜಿಎಂ ರಿಯಾಲಿಟಿ ಮತ್ತು ವರ್ಟೆಕ್ಸ್ ವರ್ಕ್ ಸ್ಪೇಸ್‌ನ ಆಡಳಿತ ಪಾಲುದಾರ ಗುರುದತ್ ಶೆಣೈ ಹೇಳಿದರು.
ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಉದಯವಾಣಿಯು ಮಂಗಳೂರು ಲೇಡಿಹಿಲ್ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ “ದೀಪಾವಳಿ ಧಮಾಕಾ-2023’ರ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಅವರು ಮಾತನಾಡಿದರು.
ಕಳೆದ 52 ವರ್ಷಗಳಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡುತ್ತಿರುವ ಉದಯವಾಣಿ ನನ್ನಂತಹ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತ ಬೆಳೆಸಿದೆ. ಈ ಪ್ರಗತಿಯ ಪ್ರಕ್ರಿಯೆ ನಿರಂತರವಾಗಿರಲಿ. ಪತ್ರಿಕೆಯ ಬೆಂಬಲದೊಂದಿಗೆ ಅನೇಕ ಉದ್ಯಮ ಹಾಗೂ ಉದ್ಯಮಿಗಳು ಯಶಸ್ಸನ್ನು ಸಾಧಿಸಲಿ ಎಂದರು.
ನೆಚ್ಚಿನ ವಿಶೇಷಾಂಕ
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಮಾತನಾಡಿ, ಉದಯವಾಣಿಯು ದೀಪಾವಳಿ ವಿಶೇಷಾಂಕವನ್ನು ಆರಂಭಿ ಸಿದ ಮುಂಚೂಣಿ ಪತ್ರಿಕೆ ಯಾಗಿದ್ದು, ಆರಂಭದಿಂದಲೂ ಸಂಚಿಕೆಯ ಮುಖ್ಯ ವಿಷಯದ ನಿರೂಪಣೆ, ಕಥೆ, ಬರೆಹ, ಲೇಖನಗಳ ಆಯ್ಕೆ ಹಾಗೂ ಪುಟ ವಿನ್ಯಾಸಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ಪ್ರತೀ ವರ್ಷವೂ ವಿಶಿಷ್ಟ ರೀತಿಯಲ್ಲಿ ಹೊರತಂದ ನೆಲೆಯಲ್ಲಿ ಉದಯವಾಣಿ ವಿಶೇಷಾಂಕವು ಜನಮಾನಸದ ಅತ್ಯಂತ ನೆಚ್ಚಿನ ವಿಶೇಷಾಂಕವಾಗಿ ಗುರುತಿಸಿಕೊಂಡಿದೆ. ಇದರೊಂದಿಗೆ ಹಲವಾರು ವರ್ಷ
ಗಳಿಂದ ಉದಯವಾಣಿ ಆಯೋಜಿಸಿ ಕೊಂಡು ಬಂದಿರುವ ಎಸ್.ಎಲ್. ಶೇಟ್ ಉದಯವಾಣಿ ದೀಪಾವಳಿ ಧಮಾಕಾಕ್ಕೆ ಓದುಗರು ರಾಜ್ಯಾದ್ಯಂತ ತಮ್ಮ ಉತ್ತರವನ್ನು ಕಳುಹಿಸಿರುವುದು ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಎಂಎಂಎನ್‌ಎಲ್ ಉಪಾಧ್ಯಕ್ಷ (ನ್ಯಾಶನಲ್ ಹೆಡ್-ಮ್ಯಾಗಜಿನ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ರಾಮಚಂದ್ರ ಮಿಜಾರು ನಿರೂಪಿಸಿ, ಅತ್ಯಂತ ಪಾರದರ್ಶಕತೆಯಿಂದ ಅದೃಷ್ಟಶಾಲಿಗಳ ಆಯ್ಕೆ ನಡೆಯುತ್ತಿದ್ದು, ಓದುಗರು ಅತೀವ ವಿಶ್ವಾಸದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ. ದೀಪಾವಳಿ ಧಮಾಕಾದ ಮೂಲಕ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ನಮ್ಮ ಓದುಗರು ಈಗಾಗಲೇ ಪಡೆದ ಅದೃಷ್ಟಶಾಲಿಗಳಾಗಿದ್ದಾರೆ. ಅಂತೆಯೇ ಈ ವರ್ಷವೂ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಉಷಾರಾಣಿ ಕಾಮತ್ ಸ್ವಾಗತಿಸಿದರು. ಸಹಾಯಕ ಸಂಪಾದಕ ರಾಜೇಶ್ ಮೂಲ್ಕಿ ವಂದಿಸಿದರು. ಅತಿಥಿಗಳು ಬಂಪರ್, ಪ್ರಥಮ, ದ್ವಿತೀಯ,
ತೃತೀಯ, ಪ್ರೋತ್ಸಾಹಕ ಬಹುಮಾನಗಳ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿದರು.
ದೀಪಾವಳಿ ಧಮಾಕಾ ವಿಜೇತರು
ಬಂಪರ್ ಬಹುಮಾನ: ಸುಧೇಷ್ಣಾ ಮಂಗಳೂರು
ಪ್ರಥಮ: ಕೆ.ವಿ. ಶಿವಕುಮಾರ್ ನಂಜನಗೂಡು ಮತ್ತು ರಾಕೇಶ್ ಜೆಪ್ಪಿನಮೊಗರು,
ದ್ವಿತೀಯ: ಆಕಾಶ್ ಕುಲಕರ್ಣಿ, ಸತ್ತೂರು ಧಾರವಾಡ, ಭವಾನಿ ಉಳ್ಳಾಲ, ಹರೀಶ್ ಐತಾಳ್ ಸುರತ್ಕಲ್,
ತೃತೀಯ: ಉಮೇಶ್ ಕುಂಜಿಬೆಟ್ಟು ಉಡುಪಿ, ನಾಗಭೂಷಣ ವಾಕೂಡ ಕೊಕ್ಕರ್ಣೆ, ಸುದರ್ಶನ್ ಶಿವರಾಮ ಶೆಟ್ಟಿ ಮೂಡುಬೆಳ್ಳೆ, ಪದ್ಮಿನಿ ಕೆ. ಮಂಗಳೂರು
ಪ್ರೋತ್ಸಾಹಕ ಬಹುಮಾನ: ಎಸ್.ವಿ. ರತನ ಶಿವಮೊಗ್ಗ, ಸಂತೋಷ್ ವಿಷ್ಣು ಮಡಿವಾಳ ಮಂಕಿ (ಉತ್ತರ ಕನ್ನಡ), ನಿಧಿ ಯಲಹಂಕ ಬೆಂಗಳೂರು, ಪ್ರತಿಮಾ ಕೆ.ಪಿ. ಕಾಸರಗೋಡು, ಸತ್ಯೇಂದ್ರ ಕೂಸ ಪೂಜಾರಿ ಮುಂಬಯಿ, ಪಿ. ನರಸಿಂಹಲು ಸಿಂಧನೂರು, ಸಂಧ್ಯಾ ಸವಣೂರು ಕಡಬ, ಪುಟ್ಟಣ್ಣ ಪೂಜಾರಿ ನಾಲ್ಕೂರು ಸುಳ್ಯ, ಅಬ್ದುಲ್ ರಜಾಕ್ ಅನಂತಾಡಿ ಬಂಟ್ವಾಳ, ಕೃಷ್ಣ ಮಟ್ಟಾರು ಕಾಪು, ರೇವತಿ ಮಯ್ನಾಡಿ ಬೈಂದೂರು, ಶೋಭಿತಾ ಹೊಸ್ಮಾರು ಕಾರ್ಕಳ, ಚೈತ್ರಾ ಮಚ್ಚಿನ ಬೆಳ್ತಂಗಡಿ, ಕುಶಲ ವಿ. ಮೊಲಿ ಮೂಡುಬಿದಿರೆ, ಕೌಶಿಕ್ ಉಳ್ಳಂಜೆ ಕಟೀಲು, ಜಯಶ್ರೀ ಯು. ಕೋಟೇಶ್ವರ, ಬೀನಾ ಫೆರ್ನಾಂಡಿಸ್ ಮಂಗಳೂರು, ಅಣ್ಣಪ್ಪ ನಾಯಕ್ ಹೆಬ್ರಿ, ಬಿ. ಅಶೋಕ್ ಶೆಟ್ಟಿ ಬೆಂಗಳೂರು, ತನುಶ್ರೀ ಕೆ.ವಿ. ಕೊಳ್ತಿಗೆ ಪುತ್ತೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.