ನವರಾತ್ರಿಯ ಸಂಭ್ರಮ ಹೆಚ್ಚಿಸಿದ ಉದಯವಾಣಿ: ಡಾ| ಚೇತನಾ ಆಚಾರ್ಯ
"ಉದಯವಾಣಿ' "ನವರೂಪ' ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ
Team Udayavani, Nov 23, 2021, 4:22 AM IST
ಉಡುಪಿ: ನವರಾತ್ರಿಯ ದಿನಗಳಲ್ಲಿ ಮಹಿಳೆಯರು ದೇವಿಯ ಆರಾಧನೆ ಮಾಡುವುದು ವಿಶೇಷ. ಆ ಸಂಭ್ರಮ, ಸಡಗರವನ್ನು ಮಹಿಳೆಯರು “ಉದಯವಾಣಿ’ಯೊಂದಿಗೆ ಆಚರಿಸಿಕೊಳ್ಳುವ ಮೂಲಕ ಸಂಸ್ಕೃತಿ, ಸೌಹಾರ್ದತೆಯನ್ನು ವೃದ್ಧಿಸಲು “ಉದಯವಾಣಿ’ ನಡೆಸಿದ ನವರೂಪ ಕಾರ್ಯಕ್ರಮದ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಿಸಲಾಯಿತು.
ಉಡುಪಿಯ “ಉದಯವಾಣಿ’ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಉಡುಪಿಯ ಗಾಂಧರ್ವ ಸಂಗೀತ ಸಂಸ್ಥೆಯ ಪ್ರವರ್ತಕಿ ವಿದುಷಿ ಡಾ| ಚೇತನಾ ಆಚಾರ್ಯ ಅವರು ಅದೃಷ್ಟಶಾಲಿಗಳ ತಂಡದ ಪ್ರತಿನಿಧಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.
ಅನಂತರ ಮಾತನಾಡಿದ ಅವರು, ನವರಾತ್ರಿಯ ಆಚರಣೆಗೆ ಅದರದ್ದೇ ಆದ ವಿಶೇಷತೆಗಳಿವೆ. ಪ್ರತೀ ಮನೆಯ ಮಹಿಳೆಯಲ್ಲೂ ನವಶಕ್ತಿ ಇರುತ್ತದೆ. ಮನೆಯಲ್ಲಿರುವ ಮಹಿಳೆಯನ್ನು ಪೂಜಿಸುವುದೇ ನಿಜ ಅರ್ಥದಲ್ಲಿ ನವರಾತ್ರಿ. ನವ ರೂಪ ಕಾರ್ಯಕ್ರಮದ ಮೂಲಕ ಉದ ಯ ವಾಣಿ ನವರಾತ್ರಿಯ ಸಂಭ್ರಮ ಹೆಚ್ಚಿಸಿದೆ ಎಂದು, “ಉದಯವಾಣಿ’ಯ ನವರೂಪಿ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಮಾತನಾಡಿ, ನವ ರಾತ್ರಿಯ ಸಂಭ್ರಮ ಮನೆ ಮನೆಯಲ್ಲೂ ಹೆಚ್ಚಬೇಕು ಮತ್ತು ಅದನ್ನು “ಉದಯ ವಾಣಿ’ಯೊಂದಿಗೆ ಹಂಚಿ ಕೊಳ್ಳಬೇಕು ಎನ್ನುವ ಉದ್ದೇಶದಿಂದ ನವರೂಪ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.
7 ವರ್ಷದ ಮಗುವಿನಿಂದ 70 ವರ್ಷದ ಹಿರಿಯ ಮಹಿಳೆಯರವರೆಗೆ ಸೇರಿ 40 ಸಾವಿರಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಇದು ಸ್ಪರ್ಧೆ ಆಗಿರಲಿಲ್ಲ. ಅದೃಷ್ಟಶಾಲಿಗಳ ಆಯ್ಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಏರ್‌ಟೆಲ್ ಪ್ರಿ-ಪೇಯ್ಡ್ ಶುಲ್ಕ ಶೇ.25ರ ವರೆಗೆ ಏರಿಕೆ
ನವರೂಪ ಕಾರ್ಯಕ್ರಮವು ಸಂಸ್ಕೃತಿಯನ್ನು ಮುಂದು ವರಿಸುವ ಭಾಗ ಮಾತ್ರವಲ್ಲದೆ ಸೌಹಾರ್ದವನ್ನು ಹೆಚ್ಚಿಸುವ ಕಾರ್ಯವೂ ಆಗಿದೆ. ಒಳ್ಳೆಯ ಮನೆ, ಮನಸ್ಸು ನಿರ್ಮಾಣದ ಮೂಲಕ ಸದೃಢ ಸಮಾಜ ಕಟ್ಟಲು ಸಂಸ್ಕೃತಿ ಬೇಕು. ಆ ನಿಟ್ಟಿನಲ್ಲಿ ನಮ್ಮ ನವರೂಪ ಕಾರ್ಯಕ್ರಮ ನಿಮ್ಮೆಲ್ಲರ ಸಹಕಾರೊಂದಿಗೆ ಯಶಸ್ಸು ಸಾಧಿಸಿದೆ ಎಂದು ಹೇಳಿದರು.
ಉಡುಪಿಯ ಸುನಿತಾ ಎಂ. ಶೇಟ್, ಸಂಧ್ಯಾ ಎಂ.ಶೇಟ್ ಹಾಗೂ ಮುಕ್ತಾ ಕಾಮತ್, ಮತ್ಸ್ಯಸಂಜೀವಿನಿ ಬಡನಿಡಿಯೂರು ಬಳಗದಿಂದ ವಿಶಾಲ ಆರ್. ಮೆಂಡನ್, ಯಶೋದಾ ಉಮೇಶ್, ಜ್ಯೋತಿ ಕುಟುಂಬ ಕುತ್ಪಾಡಿಯಿಂದ ಜ್ಯೋತಿ, ಶ್ವೇತಾ ಮತ್ತು ಅನ್ವಿತಾ, ಗಿರಿಜಾ ತಂಡ ಹೆರ್ಗಾದಿಂದ ಗಿರಿಜಾ ಮತ್ತು ಶ್ರೇಣಿತ, ಉಪಾಧ್ಯ ಕುಟುಂಬ ಬೈಲೂರು ತಂಡದಿಂದ ರಾಜಶ್ರೀ, ರಶ್ಮಿಶ್ರೀ ಬಹುಮಾನ ಹಾಗೂ ಪ್ರಮಾಣಪತ್ರ ಸ್ವೀಕರಿಸಿದರು.
ನವರೂಪಿ ಕಾರ್ಯಕ್ರಮಕ್ಕೆ ಅದೃಷ್ಟಶಾಲಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಉದಯವಾಣಿ ಮಾರುಕಟ್ಟೆ ವಿಭಾಗದ ಉಡುಪಿ ಜಿಲ್ಲಾ ಮುಖ್ಯಸ್ಥ ರಾಧಾಕೃಷ್ಣ ಭಟ್ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.