Mudhol;ಉದಯವಾಣಿ ವರದಿ ಫಲಶೃತಿ: ಕಳ್ಳಭಟ್ಟಿ ಕೇಂದ್ರಗಳ ಮೇಲೆ ಅಧಿಕಾರಿಗಳ ದಾಳಿ
Team Udayavani, Aug 16, 2024, 7:40 PM IST
ಮುಧೋಳ:ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ಕೇಂದ್ರಗಳನ್ನು ನಾಶಪಡಿಸಿದ್ದಾರೆ.
ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿ ನಡೆಯುತ್ತಿದ್ದ ಕಳ್ಳಭಟ್ಟಿ ತಯಾರಿಕೆ ಬಗ್ಗೆ ಶುಕ್ರವಾರ ಉದಯವಾಣಿಯಲ್ಲಿ ಚೀಂಕಾರ ರಕ್ಷಿತಾರಣ್ಯಕ್ಕೆ ಕಳ್ಳಕಾಕರ ಕಾಕದೃಷ್ಠಿ ತಲೆಬರಹದಡಿ ವಿಸ್ತೃತ ವರದಿ ಪ್ರಕಟಗೊಂಡಿತ್ತು. ವರದಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ದಿನವಿಡೀ ಅರಣ್ಯ ಪ್ರದೇಶದಲ್ಲಿನ ಮೂರು ಜಾಗಗಳನ್ನು ಜಾಲಾಡಿ ಕಳ್ಳಭಟ್ಟಿ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾರೆ.
ಡಿಎಫ್ಒ ಸಿ.ಜೆ.ಮಿರ್ಜಿ, ಜಮಖಂಡಿ ಎಸಿಎಫ್ ಹಾಗೂ ಮುಧೋಳ ವಲಯ ಅರಣ್ಯಾಧಿಕಾರಿ ಎಚ್.ಬಿ. ಡೋಣಿ ಅವರ ಮಾರ್ಗದರ್ಶನದಲ್ಲಿ ನಡೆದ ಕಳ್ಳಭಟ್ಟಿ ಕೇಂದ್ರಗಳ ಮೇಲಿನ ದಾಳಿ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಮೇಶ ಮೆಟಗುಡ್ಡ, ಗಸ್ತು ಅರಣ್ಯಪಾಲಕರಾದ ಚಂದ್ರಶೇಖರ ಉಪ್ಪಾರ, ಶಿವರಾಜ ಸಜ್ಜನ, ಆನಂದ ಸಾಗರ, ಗುರಪ್ಪ ಬಾಗೇವಾಡಿ, ವಾಚರ್ ಗಳಾದ ಹನಮಂತ ತಳವಾರ, ಈರಪ್ಪ ಕೋಲೂರ ಹಾಗೂ ತಿಪ್ಪಣ್ಣ ವಾಬನ್ನವರ ಪಾಲ್ಗೊಂಡಿದ್ದರು.
ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ರಕ್ಷಣೆಗೆ ನಮ್ಮ ಸಿಬಂದಿ ನಿರಂತರ ಶ್ರಮವಹಿಸುತ್ತಾರೆ. ಉದಯವಾಣಿಯಲ್ಲಿ ಪ್ರಕಟಗೊಂಡಿರುವ ಮಾಹಿತಿಯುಕ್ತ ವರದಿಯಿಂದ ಜಾಗೃತರಾದ ನಮ್ಮ ಸಿಬ್ಬಂದಿ ಮುಂದಿನ ದಿನಗಳಲ್ಲಿ ನಿತ್ಯ ನಿರಂತರ ದಾಳಿಯಲ್ಲಿ ತೊಡಗುವ ಮೂಲಕ ಅರಣ್ಯ ಸಂಪತ್ತು ಕಾಪಾಡಲು ಕಟಿಬದ್ದರಾಗಿರುವರು.
– ಸಿ.ಜೆ.ಮಿರ್ಜಿ ಡಿಎಫ್ಒ ಬಾಗಲಕೋಟೆ
ಮುಧೋಳ ವ್ಯಾಪ್ತಿಯ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ ಕಳ್ಳಭಟ್ಟಿ ಕೇಂದ್ರಗಳನ್ನು ನಾಶಪಡಿಸಿದ್ದು, ಮುಂದಿನ ದಿನಗಳಲ್ಲಿ ಗಸ್ತು ಪ್ರಕ್ರಿಯೆ ಚುರುಕುಗೊಳಿಸಿ ಕಳ್ಳಭಟ್ಟಿ ಸಂಪೂರ್ಣವಾಗಿ ನಿಯಂತ್ರಿಸಲಾಗುವುದು.
– ಎಚ್.ಬಿ.ಡೋಣಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮುಧೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.